RCB vs PBKS, IPL Final Highlights: ನೆಲಮಂಗಲದಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಬಿರಿಯಾನಿ ವಿತರಣೆ
ಆರ್‌ಸಿಬಿ ಪಿಬಿಕೆಎಸ್ ಐಪಿಎಲ್ ಲೈವ್: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯುವ ಐಪಿಎಲ್ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಸೆಣಸಲಿವೆ. ಇತ್ತ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಕಪ್ ಗೆಲ್ಲಲಿ ಎಂದು ಹಾರೈಸುತ್ತಿದ್ದಾರೆ. ವಿವಿಧೆಡೆ ವಿಶೇಷ ಪೂಜೆ ನೆರವೇರಿಸಲಾಗಿದೆ. ಕ್ಷಣಕ್ಷಣದ ಅಪ್ಡೇಟ್ ಇಲ್ಲಿದೆ.

ಐಪಿಎಲ್ ಫೈನಲ್ನಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್: ಲೈವ್ ಅಪ್ಡೇಟ್
ಪ್ರಸಕ್ತ ಋತುವಿನ ಐಪಿಎಲ್ (IPL 2025) ಟೂರ್ನಿ ಕೊನೆಯ ಹಂತಕ್ಕೆ ಬಂದಿದ್ದು ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ಮಧ್ಯೆ ಫೈನಲ್ ಹಣಾಹಣಿ ನಡೆಯಲಿದೆ. ಕಪ್ ಗೆಲ್ಲುವ ನಿಚ್ಚಿನ ತಂಡವಾಗಿರುವ ಆರ್ಸಿಬಿಗೆ ಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ. ಬೆಂಗಳೂರು ಹಾಗೂ ಕರ್ನಾಟಕದ ವಿವಿಧೆಡೆ ಆರ್‌ಸಿಬಿ ಗೆಲುವಿಗಾಗಿ ಪ್ರಾರ್ಥನೆ, ಪೂಜೆ ನೆರವೇರುತ್ತಿವೆ. ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಅನೇಕ ಗಣ್ಯರು ಆರ್ಸಿಬಿಗೆ ಶುಭ ಹಾರೈಸಿದ್ದಾರೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಆರ್ಸಿಬಿಅಭಿಮಾನಿಗಳಿಂದ ವಿಶೇಷ ಪೂಜೆ ನೆರವೇರಿದೆ. ಆರ್‌ಸಿಬಿ ಈ ಬಾರಿ ಕಪ್ ಗೆಲ್ಲುವ ಮೂಲಕ 18 ವರ್ಷಗಳ ಕಪ್ ಬರ ನೀಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಫೈನಲ್ ಪಂದ್ಯ ಸಂಬಂಧಿತ ಎಲ್ಲ ಅಪ್ಡೇಟ್ಗಳು ಇಲ್ಲಿ ಲಭ್ಯ.
LIVE NEWS & UPDATES
-
ನೆಲಮಂಗಲದಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಬಿರಿಯಾನಿ ವಿತರಣೆ
ಕ್ರಿಕೆಟ್ ನೋಡುವ ವೇಳೆ ಬರುವ ಆರ್‌ಸಿಬಿ ಅಭಿಮಾನಿಗಳಿಗೆ ನೆಲಮಂಗಲದಲ್ಲಿ ಬಿರಿಯಾನಿ ವಿತರಿಸಲು ತಯಾರಿ ನಡೆದಿದೆ. ನೆಲಮಂಗಲ ಕ್ರಿಕೆಟ್ ಅಭಿಮಾನಿಗಳು ಸುಮಾರು 500 ಜನರಿಗೆ ಬಿರಿಯಾನಿ ವಿತರಿಸಲು ತಯಾರಿ ನಡೆಸುತ್ತಿದ್ದಾರೆ. ನೆಲಮಂಗಲ ನಗರದ ರಾಯನ್ ನಗರದಲ್ಲಿ ಸಿದ್ಧತೆ ನಡೆಯುತ್ತಿದೆ.
-
ಈ ಸಲ ಕಪ್…..ಹೇಳಲ್ಲ, ಮಾಡಿ ತೋರಿಸ್ತೀವಿ: ಶಿವಣ್ಣ
ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ಮಧ್ಯೆ ಫೈನಲ್ ಹಣಾಹಣಿ ನಡೆಯಲಿದೆ. ಈ ಪಂದ್ಯಕ್ಕೆ ನಟ ಶಿವರಾಜ್ ಕುಮಾರ್ ಅವರು ಶುಭ ಹಾರೈಸಿದ್ದಾರೆ. ಈ ಸಲ ಕಪ್.. ಹೇಳಲ್ಲ, ಮಾಡಿ ತೋರಿಸ್ತೀವಿ ಎಂದ ನಟ ಶಿವರಾಜ್ ಕುಮಾರ್ ಅವರು ವಿಡಿಯೋ ಮಾಡಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
Ee Sala Cup…..ಹೇಳಲ್ಲ, ಮಾಡಿ ತೋರಿಸ್ತೀವಿ. ಪ್ಲೇ ಬೋಲ್ಡ್ @RCBTweets #RCB pic.twitter.com/eQLUwbePIm
— DrShivaRajkumar (@NimmaShivanna) June 3, 2025
-
-
ಶುಭಕೋರಿದ ಕಲಬುರಗಿ ವಿದ್ಯಾರ್ಥಿಗಳು
ಆರ್‌ಸಿಬಿ ಗೆಲ್ಲಲಿ ಅಂತ ಕಲಬುರಗಿಯ ಆರ್ಜೆ ಕಾಲೇಜಿನ ವಿದ್ಯಾರ್ಥಿಗಳು ಶುಭಕೋರಿದರು. ವಿದ್ಯಾರ್ಥಿಗಳು ಡಿಜೆ ಸೌಂಡ್ಗೆ ಡ್ಯಾನ್ಸ್ ಮಾಡುತ್ತಾ ಚೀಯರ್ ಅಫ್ ಮಾಡಿದರು. ಈ ಸಲ ಕಪ್ ನಮ್ದೆ ಅಂತ ವಿದ್ಯಾರ್ಥಿನಿಯರು ಡೈಲಾಗ್ ಹೊಡೆದರು. ಕೈಯಲ್ಲಿ ಆರ್‌ಸಿಬಿ ಆಟಗಾರರ ಭಾವಚಿತ್ರ ಹಿಡಿದು ಚೀಯರ್ ಅಪ್ ಮಾಡಿದರು. ವಿರಾಟ್ ಕೊಹ್ಲಿ ಶತಕ ಸಿಡಿಸಿ ಪಂಜಾಬ್ ಅನ್ನು ಸೋಲಿಸುತ್ತಾರೆ ಎಂದು ವಿದ್ಯಾರ್ಥಿನಿಯರು ಶುಭ ಕೋರಿದರು.
ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ಕಪ್ ಗೆಲ್ಬೇಕು, ಅದಕ್ಕೆ RCB ಗೆಲ್ಲುತ್ತೆ: ವೀರೇಂದ್ರ ಸೆಹ್ವಾಗ್
-
IPL Final Live: ಬೆಳಗಾವಿಯಲ್ಲಿ ಆರ್‌ಸಿಬಿ ಅಭಿಮಾನಿಗಳಿಂದ ಪೂಜೆ
ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದು ಬರಲಿ ಎಂದು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿರುವ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಲಾಯಿತು. ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಪೂಜೆ ನೆರವೇರಿಸಿದರು. ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ, ಅಭಿಮಾನಿಗಳು ಆರ್‌ಸಿಬಿ ಪರ ಘೋಷಣೆ ಕೂಗಿದರು.
-
IPL Final Live: ಆರ್ಸಿಬಿಗೆ ಮೋಹಕ ತಾರೆ ರಮ್ಯಾ ಶುಭಹಾರೈಕೆ
ಈ ಸಲ ಕಪ್ ನಮ್ದು ಎಂದು ಸ್ಯಾಂಡಲ್ವುಡ್ ಮೋಹಕತಾರೆ ನಟಿ ರಮ್ಯಾ ಹೇಳಿದ್ದಾರೆ. ವಿರಾಟ್ ಕೊಹ್ಲಿ ಟ್ರೋಫಿ ಎತ್ತಿದ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಶುಭ ಹಾರೈಸಿದ್ದಾರೆ.
Ee sala cup Namdu!! pic.twitter.com/zEiolMaljk
— Ramya/Divya Spandana (@divyaspandana) June 3, 2025
-
-
IPL Final Live: ಆರ್ಸಿಬಿಗೆ ಸಿಎಂ ಸಿದ್ದರಾಮಯ್ಯ ಶುಭ ಹಾರೈಕೆ
ಐಪಿಎಲ್ ಫೈನಲ್ನಲ್ಲಿ ಪಂಜಾಬ್ ತಂಡವನ್ನು ಎದುರಿಸುತ್ತಿರುವ ಆರ್ಸಿಬಿಗೆ ಮುಖ್ಯಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ. ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ ಅವರು, ಪಂಜಾಬ್ ತಂಡದ ವಿರುದ್ಧ ಇಂದು ಫೈನಲ್ ಪಂದ್ಯವಾಡುತ್ತಿರುವ ನಮ್ಮ ಆರ್‌ಸಿಬಿ ತಂಡಕ್ಕೆ ಶುಭ ಹಾರೈಕೆಗಳು ಎಂದು ಉಲ್ಲೇಖಿಸಿದ್ದಾರೆ.
ಪಂಜಾಬ್ ತಂಡದ ವಿರುದ್ಧ ಇಂದು ಫೈನಲ್ ಪಂದ್ಯವಾಡುತ್ತಿರುವ ನಮ್ಮ ಆರ್‌ಸಿಬಿ ತಂಡಕ್ಕೆ ಶುಭ ಹಾರೈಕೆಗಳು.
ಆರ್‌ಸಿಬಿ ತಂಡದ ಸೋಲು – ಗೆಲುವು, ಏಳು – ಬೀಳುಗಳಲ್ಲಿ ಸದಾ ಜೊತೆ ನಿಂತು, ಮೊದಲ ಆವೃತ್ತಿಯಿಂದ ಇಂದಿನವರೆಗೂ ಅದೇ ರೀತಿಯ ಪ್ರೀತಿ – ಸ್ಪೂರ್ತಿ ನೀಡುತ್ತಿರುವ ಕೋಟ್ಯಂತರ ಅಭಿಮಾನಿಗಳಿಗಾಗಿ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಲಿ ಎನ್ನುವುದು… pic.twitter.com/l3IpDPcGjC
— Siddaramaiah (@siddaramaiah) June 3, 2025
-
IPL Final Live: ಅಹಮದಾಬಾದ್ ಸ್ಟೇಡಿಯಂ ಹೊರಗೆ ಸಿಲಿಂಡರ್ ಸ್ಫೋಟ
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದ ಮುಖ್ಯ ದ್ವಾರದ ಹೊರಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಕೆಲ ಹೊತ್ತು ಆತಂಕದ ಸನ್ನಿವೇಶ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಸಾವುನೋವುಗಳು ತಪ್ಪಿವೆ. ಆದರೆ, ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಫೈನಲ್ ಪಂದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
-
IPL Final Live: ಕಪ್ ತೆಗೆದುಕೊಂಡು ಬನ್ನಿ, ಡಿಕೆ ಶಿವಕುಮಾರ್ ಹಾರೈಕೆ
ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಆರ್ಸಿಬಿಗೆ ಶುಭ ಹಾರೈಸಿದ್ದಾರೆ. ಅರ್ಸಿಬಿ ಜೆರ್ಸಿ ತೊಟ್ಟು ವಿಡಿಯೋ ಸಂದೇಶ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ: ಅರ್ಸಿಬಿ ಜೆರ್ಸಿ ತೊಟ್ಟು ತಂಡಕ್ಕೆ ಶುಭ ಹಾರೈಸಿ ಕಪ್ ತೆಗೆದುಕೊಂಡು ಬನ್ನಿ ಎಂದ ಡಿಕೆ ಶಿವಕುಮಾರ್
-
IPL Final Live: RCB ಗೆಲುವಿಗಾಗಿ ಎಲ್ಲೆಲ್ಲೂ ಹೋಮ, ಹವನ!
RCB ಗೆಲುವಿಗಾಗಿ ಎಲ್ಲೆಲ್ಲೂ ಹೋಮ, ಹವನ ನಡೆಯುತ್ತಿದೆ. ದೇಶಾದ್ಯಂತ ಅಭಿಮಾನಿಗಳ ಪೂಜೆ, ಪುನಸ್ಕಾರದ ಮಧ್ಯೆ ಮೈಸೂರಿನಲ್ಲಿ ಆರ್‌ಸಿಬಿ ಅಭಿಮಾನಿಗಳು ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.
RCB ಗೆಲುವಿಗಾಗಿ ಎಲ್ಲೆಲ್ಲೂ ಹೋಮ, ಹವನ! ದೇಶಾದ್ಯಂತ ಅಭಿಮಾನಿಗಳ ಪೂಜೆ, ಪುನಸ್ಕಾರ – ಮೈಸೂರಿನಲ್ಲಿ ತೆಂಗಿನಕಾಯಿ ಒಡೆದು ಹರಕೆ – ಹರಕೆ ತೀರಿಸಿದ ಆರ್‌ಸಿಬಿ ಅಭಿಮಾನಿಗಳು
Video Link ► https://t.co/1YEV8LMBIV#TV9Kannada #IPL2025Finals #IPL2025 #RCBvsPBKS #RoyalChallengersBengaluru #PunjabKings…
— TV9 Kannada (@tv9kannada) June 3, 2025
-
IPL Final Live: ಟಾಸ್ ಗೆದ್ದ ತಂಡ ಆಯ್ಕೆ ಮಾಡುವುದೇನು?
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರು ಐಪಿಎಲ್ ಫೈನಲ್ ಪಂದ್ಯದಲ್ಲಿ ಟಾಸ್ ಕೂಡ ನಿರ್ಣಾಯಕ ಪಾತ್ರವಹಿಸಬಹುದು ಎನ್ನಲಾಗಿದೆ. ಹೀಗಾಗಿ ಟಾಸ್ ಗೆದ್ದ ತಂಡ ಆಯ್ಕೆ ಮಾಡುವುದೇನು ಎಂಬ ಕುತೂಹಲ ಉಂಟಾಗಿದೆ. ಈ ಮೈದಾನದಲ್ಲಿ ಈವರೆಗೆ 44 ಟಿ20 ಪಂದ್ಯಗಳನ್ನು ಆಡಲಾಗಿದೆ. 44 ಪಂದ್ಯಗಳಲ್ಲಿ 12 ತಂಡಗಳು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿವೆ.
ವಿವರಗಳಿಗೆ ಓದಿ: ಟಾಸ್ ಗೆದ್ದ ತಂಡ ಆಯ್ಕೆ ಮಾಡುವುದೇನು?
-
IPL Final Live: ಮಂಡ್ಯ ನಗರದಲ್ಲಿ ಆರ್‌ಸಿಬಿ ಅಭಿಮಾನಿಗಳ ಗುಂಪಿನಿಂದ ವಿಶೇಷ ಪೂಜೆ
ಅರ್ಸಿಬಿ ತಂಡದ ಗೆಲುವಿಗಾಗಿ ಮಂಡ್ಯ ನಗರದ ಕಾಳಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಅಭಿಮಾನಿಯೊಬ್ಬರು ಉರುಳುಸೇವೆ ಮಾಡಿದ್ದಾರೆ.
ವಿಡಿಯೋ ನೋಡಿ: ಐಪಿಎಲ್ ಫೈನಲ್: ಆರ್‌ಸಿಬಿ ಗೆಲುವಿಗೆ ಮಂಡ್ಯದ ಅಭಿಮಾನಿಯಿಂದ ಉರುಳು ಸೇವೆ!
-
IPL Final Live: ಉದಗಟ್ಟಿ ಉದ್ದಮ್ಮ ದೇವಿಗೆ ವಿಶೇಷ ಪೂಜೆ
ಆರ್‌ಸಿಬಿ ಅಭಿಮಾನಿಗಳು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಉದಗಟ್ಟಿ ಉದ್ದಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆರ್ಸಿಬಿಗೆ ಶುಭ ಹಾರೈಸಿದರು. ವಿರಾಟ್ ಕೊಹ್ಲಿ ಜರ್ಸಿ ಹಿಡಿದು ವಿಶೇಷ ಪೂಜೆ ಸಲ್ಲಿಸಿದರು.
-
IPL Final Live: ಕರವೇ ಕಾರ್ಯಕರ್ತರಿಂದ ವಿಶೇಷ ಪೂಜೆ
ಕರವೇ ಕಾರ್ಯಕರ್ತರು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆರ್ಸಿಬಿಗೆ ಶುಭ ಹಾರೈಸಿದರು. ವಿರಾಟ್ ಕೊಹ್ಲಿ ಭಾವಚಿತ್ರ ಹಿಡಿದು ಬಂದ ಪುಟ್ಟ ಮಕ್ಕಳು ಜಯಘೋಷ ಮೊಳಗಿಸಿದರು.
-
IPL Final Live: ಆರ್‌ಸಿಬಿ ಗೆಲುವಿಗಾಗಿ ಈಡುಗಾಯಿ ಒಡೆದು ಪ್ರಾರ್ಥನೆ
RCB ಗೆಲುವಿಗಾಗಿ ಅಭಿಮಾನಿಗಳು ಶಕ್ತಿ ದೇವತೆ ಮೊರೆ ಹೋಗಿದ್ದಾರೆ. ಮಂಡ್ಯದಲ್ಲಿ ಶಕ್ತಿ ದೇವಿ ಕಾಳಿಕಾಂಬ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಉರುಳು ಸೇವೆ ಮಾಡಿ ಈಡುಗಾಯಿ ಹೊಡೆದು ಪ್ರಾರ್ಥನೆ ಸಲ್ಲಿಸಿ ಶುಭ ಹಾರೈಸಲಾಗಿದೆ.
RCB Fans Prayer: ಆರ್‌ಸಿಬಿ ಗೆಲುವಿಗಾಗಿ ಉರುಳು ಸೇವೆ ಮಾಡಿ ಈಡುಗಾಯಿ ಹೊಡೆದು ಪ್ರಾರ್ಥನೆ | #TV9D
Video Link► https://t.co/YJA7lZoXBi #TV9Kannada #IPL2025 #PBKSvsRCB #RCB #Punjabkings #Royalchallengersbengaluru #ViratKohli #RajatPatida #JiteshSharma #PhilipSalt #TimDavid… pic.twitter.com/ycrSvn4i0G
— TV9 Kannada (@tv9kannada) June 3, 2025
-
IPL Final Live: ಬೆಂಗಳೂರಿನಲ್ಲಿ ಕಟ್ಟೆಚ್ಚರಕ್ಕೆ ಸೂಚನೆ
ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲುವ ಫೇವರಿಟ್ ತಂಡವಾದ ಕಾರಣ, ಸಂಭ್ರಮಾಚರಣೆ ಹೆಸರಿನಲ್ಲಿ ಅಭಿಮಾನಿಗಳು ಅತಿರೇಕದ ವರ್ತನೆ ತೋರದಂತೆ ಕಟ್ಟೆಚ್ಚರ ವಹಿಸಲು ಪೊಲೀಸ್ ಕಮಿಷನರ್ ಬಿ ದಯಾನಂದ ಸೂಚನೆ ನೀಡಿದ್ದಾರೆ.
ಎಚ್ಚರ: ಸಂಭ್ರಮದಲ್ಲಿ ಮೈಮರೆತು ರಸ್ತೆ ತಡೆ, ಟೈರ್ಗೆ ಬೆಂಕಿ ಹಚ್ಚಿದ್ರೆ ಬಿದ್ದೀತು ಪೊಲೀಸರ ಏಟು!#IPLFinal #RCBFans #BengaluruPolice #RCBNews #IPL2025 #FanAlert #BangaloreUpdates #PoliceCommissioner #CricketFever #RCBLIVE #RCBvsPBKShttps://t.co/82cr5TYR8Q
— TV9 Kannada (@tv9kannada) June 3, 2025
-
IPL Final Live: ಬಲ ಭಾಗದಿಂದ ಹೂ ನೀಡಿ ಅಭಯ ನೀಡಿದ ಜನಾರ್ಧನ ಸ್ವಾಮಿ
ಗಡಿ ನಾಡು ಚಾಮರಾಜನಗರದಲ್ಲಿ ಆರ್‌ಸಿಬಿ ಅಭಿಮಾನಿಗಳು ವಿಶೇಷ ಪೂಜೆ ನೆರೆವೇರಿಸಿದ್ದಾರೆ. ಇದೇ ವೇಳೆ, ಬಲ ಭಾಗದಿಂದ ಹೂವಿನ ಪ್ರಸಾದ ನೀಡಿ ಶ್ರೀ ಲಕ್ಷ್ಮೀ ಜನಾರ್ಧನ ಸ್ವಾಮಿ ದೇವರು ಅಭಯ ನೀಡಿದ್ದು, ಆರ್‌ಸಿಬಿ ಗೆದ್ದೇ ಗೆಲ್ಲುತ್ತದೆ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
-
IPL Final Live: ಬಾದಾಮಿಯ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ಐಪಿಎಲ್ ಫೈನಲ್ನಲ್ಲಿ ಇಂದು ಆರ್‌ಸಿಬಿ ಹಾಗೂ ಪಂಜಾಬ್ ಮುಖಾಮುಖಿಯಾಗುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು ಬರಲಿ ಎಂದು ಅಭಿಮಾನಿಗಳು ಬಾದಾಮಿಯ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
-
IPL Final Live: ಬಾಗಲಕೋಟೆಯಲ್ಲಿ ಸಾಯಿ ಬಾಬಾ ಬಳಿ ಪ್ರಾರ್ಥನೆ
ಬಾಗಲಕೋಟೆಯಲ್ಲಿ ಆರ್‌ಸಿಬಿ ಅಭಿಮಾನಿಗಳ ಜೋಷ್ ಮುಗಿಲುಮುಟ್ಟಿದ್ದು, ತಂಡವನ್ನು ಫೈನಲ್ನಲ್ಲಿ ಗೆಲ್ಲಿಸುವಂತೆ ಅಭಿಮಾನಿಗಳು ಸಾಯಿಬಾಬಾಗೆ ಪ್ರಾರ್ಥನೆ ಸಲ್ಲಿಸಿದರು.
Published On - Jun 03,2025 10:44 AM
