ಮೇಕೆದಾಟು ಯೋಜನೆ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಮೆರವಣಿಗೆ ಮಾಡಿಸಿಕೊಂಡರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 04, 2022 | 6:32 PM

ಕಾಂಗ್ರೆಸ್ ಪಕ್ಷ ನಾಡಿನ ಜನತೆಯ ನೀರಿನ ಸಮಸ್ಯೆಯನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಹಮ್ಮಿಕೊಂಡಿದೆ. ಅದರೆ ಈ ನಾಯಕ ಪಕ್ಷದ ಸದುದ್ದೇಶವನ್ನು ತಮ್ಮ ವೈಯಕ್ತಿಕ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.

ನೀರಿಗಾಗಿ ನಡೆಯುತ್ತಿದ್ದ ಪಾದಯಾತ್ರೆಯಲ್ಲೇ ಒಬ್ಬ ಯುವ ಕಾಂಗ್ರೆಸ್ ನಾಯಕನಿಗೆ ಅವರ ಬೆಂಬಲಿಗರು ಪ್ರತ್ಯೇಕ ಮೆರವಣಿಗೆ ಮಾಡಿದ್ದು ಆಶ್ಚರ್ಯ ಹುಟ್ಟಿಸಿದೆ. ಯುವ ನಾಯಕನ ಬೆಂಬಲಿಗರು ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ಅಣ್ಣನಿಗೆ ಜಯವಾಗಲಿ ಎಂದು ಜಯಘೋಷಗಳನ್ನು ಕೂಗಿದರು. ಒಂದು ಪಕ್ಷ ಈ ವಿಡಿಯೋವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅಥವಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲವೇ ಪಕ್ಷದ ಬೇರೆ ಯಾವುದೇ ನಾಯಕ ನೋಡಿದರೆ ನಾಯಕನನ್ನು ಕರೆಸಿ ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುವುದು ನಿಶ್ಚಿತ. ಯಾಕೆಂದರೆ, ಕಾಂಗ್ರೆಸ್ ಪಕ್ಷ ನಾಡಿನ ಜನತೆಯ ನೀರಿನ ಸಮಸ್ಯೆಯನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಹಮ್ಮಿಕೊಂಡಿದೆ. ಅದರೆ ಈ ನಾಯಕ ಪಕ್ಷದ ಸದುದ್ದೇಶವನ್ನು ತಮ್ಮ ವೈಯಕ್ತಿಕ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.

ಮೇಕೆದಾಟು ಯೋಜನೆ  ಶೀಘ್ರ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಪಕ್ಷ ನಡೆಸಿದ ಎರಡು ಹಂತದ ಪಾದಯಾತ್ರೆ ಗುರುವಾರ ಕೊನೆಗೊಂಡಿದೆ. ಕೊನೆಯ ದಿನ ಮತ್ತು ಅದಕ್ಕೂ ಮುನ್ನಾ ದಿನ ಪಾದಯಾತ್ರೆ ಬೆಂಗಳೂರು ನಗರ ಭಾಗವನ್ನು ಪ್ರವೇಶಿಸಿದ್ದರಿಂದ ಎರಡು ದಿನಗಳ ಕಾಲ ನಗರದ ನಾನಾಭಾಗಗಳಲ್ಲಿ ಜನರಿಗೆ ಟ್ರಾಫಿಕ್ ಸಮಸ್ಯೆ ಎದುರಾಯಿತು. ಶಿವಕುಮಾರ ಅವರು ಅದಕ್ಕಾಗಿ ಜನರ ಕ್ಷಮೆ ಯಾಚಿಸಿದ್ದು ನಿಜವಾದರೂ ಜನರ ಕಷ್ಟ ಅನುಭವಿಸಿಯಾಗಿತ್ತು.

ಅಸಲಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡನೇ ಹಂತದ ಪಾದಯಾತ್ರೆಗೆ ಅನುಮತಿ ನೀಡುವಾಗ ಅದು ನಗರ ಭಾಗ ಪ್ರವೇಶಿಸಿದ ಬಳಿಕ ಟ್ರಾಫಿಕ್ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಕೆಪಿಸಿಸಿ ನಾಯಕರಿಗೆ ತಾಕೀತು ಮಾಡಿದ್ದರಂತೆ. ಎಚ್ಚರವಹಿಸುವುದಾಗಿ ಶಿವಕುಮಾರ ಆಶ್ವಾಸನೆ ನೀಡಿದ್ದರು. ಆದಾಗ್ಯೂ ಜನ ತೀವ್ರ ಸಮಸ್ಯೆ ಅನುಭವಿಸಿದ್ದು ಸುಳ್ಳಲ್ಲ

ಇದನ್ನೂ ಓದಿ:  Mekedatu Padayatra 2.0 Live: ಬಿಟಿಎಂ ಲೇಔಟ್​ನ ಜೆಡಿ ಗಾರ್ಡನ್​ ಬಳಿ ಕಾಂಗ್ರೆಸ್​ನ 3ನೇ ದಿನದ ಮೇಕೆದಾಟು ಪಾದಯಾತ್ರೆ ಅಂತ್ಯ