ಶಿವಮೊಗ್ಗನಲ್ಲಿ ಇನ್ನೂ ಮುಗಿದಿಲ್ಲ ಹಿಜಾಬ್ ವಿವಾದ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿದ್ಯಾರ್ಥಿನಿಯರ ಪ್ರತಿಭಟನೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 08, 2022 | 9:06 PM

ಹಿಜಾಬ್ ಧರಿಸಿಯೇ ಕಾಲೇಜಿಗೆ ಹೊಗುವ ಮತ್ತು ತರಗತಿಗಳನ್ನು ಅಟೆಂಡ್ ಮಾಡಲು ಅನುಮತಿ ನೀಡಬೇಕೆಂದು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಕೇಳುತ್ತಿದ್ದಾರೆ.

ಹಿಜಾಬ್ ವಿವಾದ ಇನ್ನೂ ಮುಗಿದಿಲ್ಲ. ಮುಸ್ಲಿಂ ಸಮುದಾಯದ (Muslim Community) ಅನೇಕ ವಿದ್ಯಾರ್ಥಿನಿಯರು ಶಾಲಾ ಕಾಲೇಜುಗಳಿಗೆ ಹೋಗಿ ಆವರಣ ತಲುಪಿದ ಬಳಿಕ ಹಿಜಾಬ್ (hijab) ತೆಗೆದು ತಮ್ಮ ಬ್ಯಾಗ್ ಗಳಲ್ಲಿ ಇಟ್ಟುಕೊಂಡು ತರಗತಿಗಳನ್ನು (classes) ಅಟೆಂಡ್ ಮಾಡುತ್ತಿರುವುದು ಕಂಡು ಬರುತ್ತಿದ್ದ ಕಾರಣ ಸಮಸ್ಯೆ ಬಗೆಹರಿದಿದೆ ಅಂತಲೇ ಭಾವಿಸಿದ್ದರು. ಆದರೆ ಶಿವಮೊಗ್ಗನಲ್ಲಿ ಹಿಜಾಬ್ ಬಿಡಲೊಲ್ಲದ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಡಿಯೋನಲ್ಲಿ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿರುವುದು ಕಾಣುತ್ತದೆ. ತಮಗೆ ಹಿಜಾಬ್ ಧರಿಸಿಯೇ ಕಾಲೇಜಿಗೆ ಹೊಗುವ ಮತ್ತು ತರಗತಿಗಳನ್ನು ಅಟೆಂಡ್ ಮಾಡಲು ಅನುಮತಿ ನೀಡಬೇಕೆಂದು ಅವರು ಕೇಳುತ್ತಿದ್ದಾರೆ.

‘ಹಿಜಾಬ್ ನಮ್ಮ ಹಕ್ಕು, ನಮ್ಮ ಹಕ್ಕನ್ನು ನಮಗೆ ಕೊಡಿ ಅಂತ ನಾವು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿಯವರನ್ನು ನಾವು ಭೇಟಿಯಾಗುತ್ತಿರುವುದು ಇದು ಎರಡನೇ ಸಲ. ಪರೀಕ್ಷೆಗಳು ಹತ್ತಿರ ಬರುತ್ತಿದ್ದರೂ ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ ಯಾರೂ ಕಾಲೇಜುಗಳಿಗೆ ಹೋಗುತ್ತಿಲ್ಲ. ನಮ್ಮ ಭವಿಷ್ಯ ಹಾಳಾಗುತ್ತಿದೆ. ಕೋರ್ಟ್ ಸಹ ಹಿಜಾಬ್ ಪ್ರಕರಣದ ತೀರ್ಪು ಇನ್ನೂ ನೀಡಿಲ್ಲ, ನಮಗೆ ಸಹಾಯ ಬೇಕು,’ ಎಂದು ವಿದ್ಯಾರ್ಥಿನಿಯರು ಮಾಧ್ಯಮದವರಿಗೆ ಹೇಳುತ್ತಿದ್ದಾರೆ.

ಶಿವಮೊಗ್ಗ ಒಂದು ಸೂಕ್ಷ್ಮ ಪ್ರದೇಶವೆಂದು ಗುರುತಿಸಿಕೊಂಡಿದೆ. ಕಳೆದ ತಿಂಗಳು ಅದು ಬೆಂಕಿಯುಂಡೆಯಾಗಿತ್ತು ಎಲ್ಲರಿಗೂ ಗೊತ್ತಿದೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಬೇಕು ಅನ್ನುತ್ತಿದ್ದಾರೆ. ಕೋರ್ಟಿನ ಮಧ್ಯಂತರ ಆದೇಶ ಪಾಲಿಸಲು ಅವರು ತಯಾರಿಲ್ಲ.

ಇದನ್ನೂ ಓದಿ:  Karnataka Hijab Hearing Highlights: ಹಿಜಾಬ್​ ವಿವಾದ! ವಾದಮಂಡನೆ ಮುಕ್ತಾಯ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್