ಹಳೆ ಸ್ನೇಹಿತರು ಬಿಜೆಪಿಗೆ ವಾಪಸ್ಸಾಗುವಂತೆ ಒತ್ತಡ ಹೇರುತ್ತಿರೋದು ಸತ್ಯ ಅದರೆ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ: ಲಕ್ಷ್ಮಣ ಸವದಿ

|

Updated on: Jan 26, 2024 | 12:02 PM

ಬಿಜೆಪಿಯಲ್ಲಿರುವ ಹಳೆ ಸ್ನೇಹಿತರು ತನ್ನನ್ನು ವಾಪಸ್ಸು ಬರುವಂತೆ ಕರೆಯುತ್ತಿದ್ದಾರೆ, ಅವರ ಹೆಸರುಗಳನ್ನು ಮಾಧ್ಯಮಗಳಲ್ಲಿ ಹೇಳಿಕೊಂಡು ಸಾರ್ವಜನಿಕಗೊಳಿಸುವುದು ತನಗೆ ಇಷ್ಟವಿಲ್ಲ ಎಂದು ಲಕ್ಷ್ಮಣ ಸವದಿ ಹೇಳಿದರು.

ಬೆಳಗಾವಿ: ಹಿಂದೆ ನಡೆದ ಎಲ್ಲ ಕಹಿ ಘಟನೆಗಳನ್ನು ಮರೆತು ಮರಳಿ ಬಿಜೆಪಿಗೆ ವಾಪಸ್ಸಾಗುವಂತೆ ತನ್ನ ಮೇಲೆ ಒತ್ತಡ ಹೇರುತ್ತಿರುವುದು ನಿಜ ಎಂದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Laxman Savadi) ಹೇಳಿದರು. ಚಿಕ್ಕೋಡಿಯಲ್ಲಿಂದು 75 ನೇ ಗಣರಾಜ್ಯೋತ್ಸವದ (75th Republic Day) ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಟಿವಿ9 ವಾಹಿನಿಯ ವರದಿಗಾರನೊಂದಿಗೆ ಮಾತಾಡಿದ ಸವದಿ, ತನ್ನ ನಿಲುವಿನ ಜೊತೆ ಜಗದೀಶ್ ಶೆಟ್ಟರ್ (Jagadish Shettar) ಪ್ರಕರಣವನ್ನು ಥಳಕು ಹಾಕೋದು ಬೇಡ, ತಾನು ಅವರಿಗಿಂತ ಮೊದಲು ಕಾಂಗ್ರೆಸ್ ಪಕ್ಷ ಸೇರಿದ್ದು ಮತ್ತು ತಾನು ಸೇರಿದ ಬಳಿಕ ಶೆಟ್ಟರ್ ಸೇರ್ಪಡೆಯಾದರು ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತನಗೆ ಜನ ಭಾರೀ ಬಹುಮತದೊಂದಿಗೆ ಗೆಲ್ಲಿಸಿದ್ದಾರೆ ಎಂದು ಹೇಳಿದ ಶಾಸಕರು ತನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದರು. ಬಿಜೆಪಿಯಲ್ಲಿರುವ ಹಳೆ ಸ್ನೇಹಿತರು ತನ್ನನ್ನು ವಾಪಸ್ಸು ಬರುವಂತೆ ಕರೆಯುತ್ತಿದ್ದಾರೆ, ಅವರ ಹೆಸರುಗಳನ್ನು ಮಾಧ್ಯಮಗಳಲ್ಲಿ ಹೇಳಿಕೊಂಡು ಸಾರ್ವಜನಿಕಗೊಳಿಸುವುದು ತನಗೆ ಇಷ್ಟವಿಲ್ಲ ಎಂದು ಲಕ್ಷ್ಮಣ ಸವದಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ