ಗಣರಾಜ್ಯೋತ್ಸವದಲ್ಲಿ ಅಪಶೃತಿ.. ಧ್ವಜ ಕಂಬಕ್ಕೆ ವಿದ್ಯುತ್ ತಂತಿ ತಗುಲಿ ಇಬ್ಬರು ಯುವಕರ ಸಾವು
Telangana: ಧ್ವಜ ಅನಾವರಣಕ್ಕಾಗಿ ಸ್ಥಳೀಯ ಯುವಕರು ಕಬ್ಬಿಣದ ಕಂಬದಿಂದ ಧ್ವಜವನ್ನು ಹಾರಿಸಲು ತಯಾರಿ ನಡೆಸುತ್ತಿದ್ದರು. ಆ ವೇಳೇ ಆಕಸ್ಮಿಕವಾಗಿ ವಿದ್ಯುತ್ ತಂತಿ ಕಬ್ಬಿಣದ ಪೈಪ್‌ಗೆ ತಾಗಿದೆ. ವಿದ್ಯುತ್ ತಂತಿಗಳು ಧ್ವಜಕ್ಕೆ ತಗುಲಿದ ಪರಿಣಾಮ ವಿಜಯ್, ಚಕ್ರಿ ಮತ್ತು ಅಜಿತ್ ಸಾವನ್ನಪ್ಪಿದ್ದಾರೆ.
ಮುಲುಗು (ತೆಲಂಗಾಣ), ಜನವರಿ 26: ಗಣರಾಜ್ಯೋತ್ಸವದ ವೇಳೆ ಭಾರೀ ದುರಂತ ಸಂಭವಿಸಿದೆ. ಧ್ವಜಾರೋಹಣ ಮಾಡುವಾಗ ವಿದ್ಯುತ್ ತಂತಿಗಳು ಧ್ವಜದ ಪೈಪ್‌ಗೆ ತಗುಲಿ ಇಬ್ಬರು ಯುವಕರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಯುವಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ಕೂಡಲೇ ಸಚಿವೆ ಸೀತಕ್ಕ ಪರಿಹಾರ ಕಾರ್ಯದಲ್ಲಿ ತೊಡಗಿದರು. ಮುಲುಗು ಜಿಲ್ಲಾ ಕೇಂದ್ರದ ದಲಿತವಾಡದಲ್ಲಿ ಈ ದಾರುಣ ಘಟನೆ ನಡೆದಿದೆ.
ಧ್ವಜ ಅನಾವರಣಕ್ಕಾಗಿ ಸ್ಥಳೀಯ ಯುವಕರು ಕಬ್ಬಿಣದ ಕಂಬದಿಂದ ಧ್ವಜವನ್ನು ಹಾರಿಸಲು ತಯಾರಿ ನಡೆಸುತ್ತಿದ್ದರು. ಆ ವೇಳೇ ಆಕಸ್ಮಿಕವಾಗಿ ವಿದ್ಯುತ್ ತಂತಿ ಕಬ್ಬಿಣದ ಪೈಪ್‌ಗೆ ತಾಗಿದೆ. ವಿದ್ಯುತ್ ತಂತಿಗಳು ಧ್ವಜಕ್ಕೆ ತಗುಲಿದ ಪರಿಣಾಮ ವಿಜಯ್, ಚಕ್ರಿ ಮತ್ತು ಅಜಿತ್ ಸಾವನ್ನಪ್ಪಿದ್ದಾರೆ. ತಕ್ಷಣ ಅವರನ್ನು ಮುಲುಗು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಯಾವುದೇ ಫಲ ಸಿಗಲಿಲ್ಲ.
ಚಿಕಿತ್ಸೆ ಫಲಕಾರಿಯಾಗದೆ ಅಜಿತ್ ಮತ್ತು ವಿಜಯ್ ಸಾವನ್ನಪ್ಪಿದ್ದಾರೆ. ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ. ವಿಷಯ ತಿಳಿದ ತಕ್ಷಣ ಸಚಿವೆ ಸೀತಕ್ಕ ಆತಂಕ ವ್ಯಕ್ತಪಡಿಸಿದ್ದಾರೆ. ಅಗತ್ಯವಿದ್ದರೆ, ಉತ್ತಮ ಚಿಕಿತ್ಸೆಗಾಗಿ ಗಾಯಳುವನ್ನು ಹೈದರಾಬಾದ್‌ಗೆ ಕರೆದೊಯ್ಯಲು ಸೂಚಿಸಲಾಗಿದೆ.