ಫೇಸ್​ಬುಕ್​  ಮತ್ತು ಅದರ ಎರಡು ಪ್ಲಾಟ್​ಫಾರ್ಮ್​​​ಗಳಲ್ಲಿ ವ್ಯತ್ಯಯ ಉಂಟಾಗಿದ್ದಕ್ಕೆ ಅಸಲಿ ಕಾರಣವಿದು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 06, 2021 | 5:29 PM

ರೌಟರ್​​​ಗಳು ನಾವು ಕಳಿಸುವ ಮನವಿಗಳನ್ನು ಈ ವೇರ್​​​ಹೌಸ್​​​ಗಳಿಗೆ ಕಳಿಸಿದ ನಂತರ ನಮ್ಮ ಫೋನ್​ನಲ್ಲಿ ಮಾಹಿತಿ ಅಥವಾ ಡಾಟಾ ಇದೇ ಬಿಜಿಪಿ ಮೂಲಕ ಲಭ್ಯವಾಗುತ್ತದೆ.

ಸೋಮವಾರ ಉಂಟಾದ ಭಾರಿ ವ್ಯತ್ಯಯದಿಂದಾಗಿ (ಔಟೇಜ್) ಫೇಸ್​ಬುಕ್ ಮತ್ತು ಅದರ ಎರಡು ಉತ್ಪನ್ನಗಳಾದ ಇನ್ಸ್ಟಾಗ್ರಾಮ್ ಮತ್ತು ವ್ಯಾಟ್ಸ್ಯಾಪ್ ಸೇವೆಗಳು ಅಥವಾ ಪ್ಲಾಟ್​ಫಾರ್ಮ್​​​ಗಳು 6 ಗಂಟೆಗಳ ಕಾಲ ವಿಶ್ವದಾದ್ಯಂತ ಸುಮಾರು 350 ಕೋಟಿ ಗ್ರಾಹಕರಿಗೆ ಅಲಭ್ಯವಾದವು. ಅಂತರಿಕ ನೆಟ್ ವರ್ಕ್ ಬಳಸಿ ತಲೆದೋರಿದ್ದ ಸಮಸ್ಯೆಯನ್ನು ಕೂಡಲೇ ಸರಿಪಡಿಸುವುದು ಫೇಸ್ಬುಕ್ ಸಿಬ್ಬಂದಿಗೂ ಸಾಧ್ಯವಾಗಲಿಲ್ಲ. ಪ್ರಮಾದಕರ ಕಾನ್ಪ್ಯುಗರೇಷನ್ ಬದಲಾವಣೆಯಿಂದ ಸಮಸ್ಯೆ ತಲೆದೋರಿತ್ತು ಅಂತ ಫೇಸ್ ಬುಕ್ ಹೇಳಿತು. ಫೇಸ್​ಬುಕ್, ಇನ್ಸ್ಟಾಗ್ರಾಮ್ ಮತ್ತು ವ್ಯಾಟ್ಸ್ಯಾಪ್ ಗ್ರಾಹಕರಿಗೆ ಸೇವೆ ಸ್ಥಗಿತಗೊಂಡು ಉಂಟಾದ ಅನಾನುಕೂಲತೆಗೆ ಸಂಸ್ಥೆಯ ಸಿಈಒ ಮಾರ್ಕ್ ಝಕರ್​ಬರ್ಗ್​​​ ಗ್ರಾಹಕರ ಕ್ಷಮೆ ಯಾಚಿಸಿದರು.

ಸದರಿ ಸಮಸ್ಯೆಯು ನೆಟ್‌ವರ್ಕಿಂಗ್ ಸಮಸ್ಯೆಯಿಂದ ಉಂಟಾದಂತೆ ತೋರುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಬಾರ್ಡರ್ ಗೇಟ್‌ವೇ ಪ್ರೋಟೋಕಾಲ್ (ಬಿಜಿಪಿ) ಎಂದು ಕರೆಯಲ್ಪಡುವ ಯಾವುದನ್ನಾದರೂ ಬಳಸಿಕೊಂಡು ತನ್ನ ಸರ್ವರ್‌ಗಳು ಎಲ್ಲಿ ಅಂತರ್ಜಾಲಕ್ಕೆ ಜಾಹೀರಾತು ನೀಡುತ್ತವೆ ಎನ್ನುವ ಅಪ್ಡೇಡ್ ಸ್ಥಗಿತಗೊಂಡಿತು.

ನಿಮಗೆ ಗೊತ್ತಿರುವ ಹಾಗೆ, ಇಂಟರ್ನೆಟ್ ಅನ್ನೋದು, ಸದಾ ನಮ್ಮ ಕೈಗಳಲ್ಲಿರುವ ಫೋನ್ಗಳೂ ಸೇರಿದಂತೆ ಎಲ್ಲ ಕಂಪ್ಯೂಟರ್ಗಳ ಅಂತರರಾಷ್ಟ್ರೀಯ ನೆಟ್ವರ್ಕ್ ಆಗಿದೆ. ವಿಶ್ವದ ನಾನಾ ಮೂಲೆಗಳ ವಿಶಿಷ್ಟ ವೇರ್​ಹೌಸ್​ಗಳ ಮೂಲಕ ಅಪಾರ ಪ್ರಮಾಣದ ಡಾಟಾವನ್ನು ಅದು ನಮಗೆ ಒದಗಿಸುತ್ತದೆ.

ರೌಟರ್​​​ಗಳು ನಾವು ಕಳಿಸುವ ಮನವಿಗಳನ್ನು ಈ ವೇರ್​​​ಹೌಸ್​​​ಗಳಿಗೆ ಕಳಿಸಿದ ನಂತರ ನಮ್ಮ ಫೋನ್​ನಲ್ಲಿ ಮಾಹಿತಿ ಅಥವಾ ಡಾಟಾ ಇದೇ ಬಿಜಿಪಿ ಮೂಲಕ ಲಭ್ಯವಾಗುತ್ತದೆ. ಓಕೆ, ಈ ವ್ಯವಸ್ಥೆಯಲ್ಲಿ ಡಿಎನ್ ಎಸ್ ಅನ್ನೋ ಇನ್ನೊಂದು ಅಯಾಮ ಬರುತ್ತದೆ. ಡಿ ಎನ್ ಎಸ್ ಎಂದರೆ ಡಾಮಿನ್ ನೇಮ್ ಸಿಸ್ಟಂ ಆಗಿದ್ದು ಇದನ್ನು ಫೋನ್ ಬ್ಯಾಂಕ್ ಆಫ್ ಇಂಟರ್ನೆಟ್ ಅಂತಲೂ ಕರೆಯುತ್ತಾರೆ.

ನೀವು fb.com ಲಾಗಿನ್ ಆದಾಗ ಡಿ ಎನ್ ಎಸ್ಗಳೇ ಐಪಿ ಅಡ್ರೆಸ್ಗಳಾಗಿ ಬದಲಾಗುತ್ತವೆ. ಓಕೆ ವಿಷಯವನ್ನು ಮತ್ತಷ್ಟು ಸರಳೀಕರಿಸೋಣ. ಡಿ ಎನ್ ಎಸ್ ಇಂಟರ್ನೆಟ್ ಫೋನ್ ಬುಕ್ ಆದರೆ, ಬಿಜಿಪಿ ನ್ಯಾವಿಗೇಷನ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಬಿಜಿಪಿ ಐಪಿ ಅಡ್ರೆಸ್ ಮತ್ತು ಡಿ ಎನ್ ಎಸ್ ನೇಮ್ ಸರ್ವರ್​ಗಳನ್ನು ಒಳಗೊಂಡಿರುತ್ತದೆ. ನಮಗೆ ಡಾಟಾ ವೇಗವಾಗಿ ತಲುಪುವ ಮಾರ್ಗವನ್ನು ಬಿಜಿಪಿ ನಿರ್ಧರಿಸುತ್ತದೆ.

ಡಿ ಎನ್ ಎಸ್ ರೆಸ್ಯೂಲಷನ್ ವಿಫಲಗೊಂಡ ಹಿನ್ನೆಲೆಯಲ್ಲಿ ನೆಟ್ ವರ್ಕ್ ಟ್ರಾಫಿಕ್ ಉಂಟಾಯ್ತು ಅಂತ ಹೇಳಲಾಗುತ್ತ್ತಿದ್ದು ಇದೇ ಕಾರಣಕ್ಕೆ ಫೇಸ್ಬುಕ್ ಮತ್ತು ಅದರ ಎರಡು ಪ್ಲಾಟ್ಫಾರ್ಮ್ಗಳಲ್ಲಿ ವ್ಯತ್ಯಯ ಉಂಟಾಯಿತು.

ಇದನ್ನೂ ಓದಿ:  Video: ಲಖನೌಗೆ ಪ್ರಧಾನಿ ಮೋದಿ ಭೇಟಿ ಸುದ್ದಿ ಕೇಳಿ ವಿಡಿಯೋ ಬಿಡುಗಡೆ ಮಾಡಿ ‘ನೀವಿದನ್ನು ನೋಡಿದ್ದೀರಾ‘? ಎಂದ ಪ್ರಿಯಾಂಕಾ ಗಾಂಧಿ ವಾದ್ರಾ