ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ 800-ವರ್ಷ ಹಳೆಯ ಕೆಂಗಲ್ ಆಂಜನೇಯ ಗುಡಿಗೆ ಭೇಟಿ ನೀಡಿದ್ದೀರಾ?

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 09, 2021 | 4:17 PM

. ಹೊಯ್ಸಳರ ಕಾಲದಲ್ಲಿ ಕಟ್ಟಿರುವ ಕೆಂಗಲ್ ಆಂಜನೇಯ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ. ಸಾಮಾನ್ಯವಾಗಿ ಗುಡಿಗಳಲ್ಲಿ ಆಂಜನೇಯ ದಕ್ಷಿಣಾಭಿಮುಖವಾಗಿ ನಿಂತಿರುತ್ತಾನೆ. ಆದರೆ ಸದರಿ ದೇವಸ್ಥಾನದಲ್ಲಿ ಮಾತ್ರ ಆಂಜನೇಯ ಉತ್ತರಕ್ಕೆ ಮುಖ ಮಾಡಿ ನಿಂತಿದ್ದಾನೆ.

ನಮ್ಮ ದೇಶದ ರಾಜ್ಯದ ದೇವಸ್ಥಾನಗಳ ವೈಶಿಷ್ಟ್ಯವೇ ಹಾಗೆ. ಮಂದಿರ ಚಿಕ್ಕದಾಗಿರಲಿ ಅತವಾ ದೊಡ್ಡದು-ಅದಕ್ಕೆ ತನ್ನದೇ ಆದ ಮಹತ್ವ ಮತ್ತು ಇತಿಹಾಸವಿರುತ್ತದೆ. ರಾಜ್ಯದಲ್ಲಿರುವ ಅನೇಕ ದೇವಾಲಯಗಳು ಪುರಾತನ ಕಾಲದವು. ಆದರೆ, ಆಗಿನ ಕಾಲದಲ್ಲಿ ದೇವಾಸ್ಥಾನಗಳನ್ನು ನಿರ್ಮಿಸಲು ಅದ್ಯಾವ ಬಗೆಯ ಸಾಮಗ್ರಿಗಳನ್ನು ಉಪಯೋಗಿಸುತ್ತಿದ್ದರೋ? ಸಾವಿರಾರು ವರ್ಷಗಳ ನಂತರವೂ ಗುಡಿಗಳು ಶಿಥಿಲಗೊಂಡಿಲ್ಲ. ಹಾಗೆ ಶಿಥಿಲಗೊಂಡಿರುವ ಮಂದಿರಗಳ ಜೀರ್ಣೋದ್ಧಾರ ಕಾರ್ಯ ನಡೆಸಿ ಅವುಗಳನ್ನು ಬಲಗೊಳಿಸಲಾಗಿದೆ.

ನೀವು ಕರ್ನಾಟಕದ ದಕ್ಷಿಣ ಭಾಗದವರಾಗಿದ್ದರೆ, ಚನ್ನಪಟ್ಟಣ ತಾಲೂಕಿನಲ್ಲಿರುವ ಕೆಂಗಲ್ ಆಂಜನೇಯ ದೇವಸ್ಥಾನದ ಹೆಸರು ಕೇಳಿರುತ್ತೀರಿ. ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸಿಗುವ ಈ ದೇವಸ್ಥಾನ ಅಯ್ಯನ ಗುಡಿ ಎಂದೇ ಹೆಚ್ಚು ಜನಪ್ರಿಯ. ಹೊಯ್ಸಳರ ಕಾಲದಲ್ಲಿ ಕಟ್ಟಿರುವ ಕೆಂಗಲ್ ಆಂಜನೇಯ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ. ಸಾಮಾನ್ಯವಾಗಿ ಗುಡಿಗಳಲ್ಲಿ ಆಂಜನೇಯ ದಕ್ಷಿಣಾಭಿಮುಖವಾಗಿ ನಿಂತಿರುತ್ತಾನೆ. ಆದರೆ ಸದರಿ ದೇವಸ್ಥಾನದಲ್ಲಿ ಮಾತ್ರ ಆಂಜನೇಯ ಉತ್ತರಕ್ಕೆ ಮುಖ ಮಾಡಿ ನಿಂತಿದ್ದಾನೆ. ಸೋಜಿಗದ ಸಂಗತಿಯೆಂದರೆ ಆಂಜನೇಯನ ವಿಗ್ರಹ ಕ್ರಮೇಣವಾಗಿ ಈಶಾನ್ಯದತ್ತ ತಿರುಗುತ್ತಿದೆಯಂತೆ.

ಪ್ರತಿವರ್ಷ ಉತ್ತರಾಯಣ ಪುಣ್ಯಕಾಲದಲ್ಲಿ ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ರಾಜ್ಯದ ಮೂಲೆಮೂಲೆಗಳಿಂದ ಜನ ಹರಕೆ ಹೊತ್ತು ಜಾತ್ರೆಗೆ ಬರುತ್ತಾರೆ.

ದೇವಾಸ್ಥಾನದ ಸುತ್ತ 12 ಪ್ರದಕ್ಷಿಣೆಗಳನ್ನು ಹಾಕಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳುತ್ತಾರೆ. ಆಂಜನೇಯನ ವಿಗ್ರಹ ಕೆಂಪು ಬಣ್ಣದಾಗಿರುವುದರಿಂದ ಇದನ್ನು ಕೆಂಗಲ್ (ಕೆಂಪು+ ಕಲ್ಲು) ಆಂಜನೇಯ ಎನ್ನುತ್ತಾರೆ.

ಅಂದಹಾಗೆ, ಈ ದೇವಸ್ಥಾನದ ಜೀಣೋದ್ಧಾರ ಕೆಲಸ ಮಾಡಿಸಿದವರು ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು. ದೇವಾಸ್ಥಾನ ಮುಂದೆ ಇರುವ ಹೊಂಡದಲ್ಲಿ ಭಕ್ತರು ಮೊದಲು ಪುಣ್ಯಸ್ನಾನ ಮಾಡುತ್ತಿದ್ದರು. ಆದರೆ ಈಗ ಜನ ಬಟ್ಟೆ ಬರೆ ಅದರಲ್ಲಿ ತೊಳೆಯಲಾರಂಭಿಸಿದ್ದಾರೆ.

ಇದನ್ನೂ ಓದಿ:  Puneeth Rajkumar: ಕೊಪ್ಪಳದ ಸ್ಥಳೀಯ ಕಲಾವಿದರ ಪ್ರದರ್ಶನಕ್ಕೆ ಮನಸೋತ ​ಅಪ್ಪು; ವಿಡಿಯೊ ನೋಡಿ