ಮಳೆಯಾಗಬೇಕು, ಮಳೆ ಸುರಿಯಲಿ ಅಂತ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದೇನೆ: ಡಿಕೆ ಶಿವಕುಮಾರ್
ಸಾಧನಾ ಸಮಾವೇಶ ಮುಗಿಯುವರೆಗೆ ಹೊಸಪೇಟೆಯಲ್ಲೇ ಉಳಿಯಬೇಕು ಅಂತ ಬಟ್ಟೆಬರೆಯನ್ನೆಲ್ಲ ಹೊತ್ತುಕೊಂಡು ಬಂದಿದ್ದೆ, ಆದರೆ ಬೆಂಗಳೂರಲ್ಲಿ ಮಳೆ ಸುರಿದ ಕಾರಣ ವಾಪಸ್ಸು ಹೋಗುತ್ತಿದ್ದೇನೆ, ಮುಖ್ಯಮಂತ್ರಿ ಮತ್ತು ತಾನು ನಾಳೆ ಬೆಂಗಳೂರು ನಗರದ ಕೆಲವು ಪ್ರದೇಶಗಳಿಗೆ ಭೇಟಿ ನೀಡಬೇಕಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಹೊಸಪೇಟೆ, ಮೇ 19: ಸಾಧನಾ ಸಮಾವೇಶದ ತಯಾರಿ ನೋಡಿಕೊಳ್ಳಲು ಬಂದಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತಾಡುವಾಗ ಬೆಂಗಳೂರಲ್ಲಿ ಮಳೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು ಮತ್ತು ಇನ್ನೂ ಮಳೆಯಾಗಲಿ ಅಂತ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು. ಮಳೆಯಾದರೆ ರಾಜ್ಯಕ್ಕೆ ಎಷ್ಟು ಲಾಭ ಅಂತ ಹಿಂದೆ ಇಂಧನ ಸಚಿವನಾಗಿದ್ದ ತನಗೆ ಗೊತ್ತು, ಜಲಾಶಯಗಳು ತುಂಬುತ್ತವೆ ಮತ್ತು ರೈತರಿಗೆ ಅನೂಕೂಲವಾಗುತ್ತದೆ ಎಂದು ಹೇಳಿದ ಅವರು, ಬೆಂಗಳೂರಲ್ಲಿ ಭಾರೀ ಮಳೆಯಾದರೂ ಯಾವುದೇ ಅನಾಹುತ ಸಂಭವಿಸಿಲ್ಲ, ಒಬ್ಬ ವ್ಯಕ್ತಿ ಸತ್ತಿರುವ ಮಾಹಿತಿ ತನಗೆ ಸಿಕ್ಕಿದೆ, ಬಿಬಿಎಂಪಿ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ತಗ್ಗು ಪ್ರದೇಶಗಳಲ್ಲಿ ಮನೆ ಮಾಡಿಕೊಂಡವರಿಗೆ ತೊಂದರೆಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ಈ ವರ್ಷ ಕಳೆಯುವುದರೊಳಗೆ ನಡೆಯಲಿವೆ: ಡಿಕೆ ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್

6,6,6,6,6:: ಬಿರುಗಾಳಿ ಬ್ಯಾಟಿಂಗ್ನೊಂದಿಗೆ ಪಂದ್ಯ ಗೆಲ್ಲಿಸಿದ ಬೌಲರ್..!

‘ಎಸ್ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್

ವೆಸ್ಟ್ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
