ಬೆಂಗಳೂರು: ರಸ್ತೆ ಮೇಲೆ ನಿಂತಿದ್ದ ನೀರಲ್ಲಿ ಸ್ಕೂಟರ್ ಇಳಿಸುವ ಮುನ್ನ ಧೈರ್ಯಂ ಸರ್ವತ್ರ ಸಾಧನಂ ಎಂದ ಮಹಿಳೆ
ನಗರದಲ್ಲಿ ಇನ್ನೂ ಎರಡು ಮೂರು ಭಾರೀ ಮಳೆಯಾಗುವ ನಿರೀಕ್ಷೆ ಇದೆಯೆಂದು ಹವಾಮಾನ ಇಲಾಖೆ ಹೇಳಿದೆ. ಅಂದರೆ ನಗರ ನಿವಾಸಿಗಳ ಬವಣೆ ತಪ್ಪಿದಲ್ಲ. ಜೂನ್ ಶರುವಾಗುತ್ತಿದ್ದಂತೆಯೇ ಮಳೆಗಾಲ ಕೂಡ ಆರಂಭವಾಗುತ್ತದೆ. ಸರ್ಕಾರ ಮತ್ತು ಅದರ ಪ್ರತಿನಿಧಿಗಳು ವಾರ್ರೂಮಲ್ಲಿ ಕೂತು ನಗರದ ಸ್ಥಿತಿಗತಿ ಗಮನಿಸಿದರೆ ಪರಿಹಾರ ಸಿಗಲಾರರು. ನೀ ಜರ್ಕ್ ಪರಿಹಾರಗಳಿಂದ ಯಾವ ಉಪಯೋಗವೂ ಇಲ್ಲ, ನಗರಕ್ಕೆ ಕಾಂಕ್ರೀಟ್ ಯೋಜನೆ ಬೇಕು.
ಬೆಂಗಳೂರು, ಮೇ 19: ಬೆಂಗಳೂರು ಮಹಾನಗರದಲ್ಲಿ ಮತ್ತೇ ಮಳೆ (raining again) ಸುರಿಯುತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬೆಂಗಳೂರಿನ ಶಾಸಕರು ಬಿಬಿಎಂಪಿಯ ವಾರ್ರೂಮಲ್ಲಿ ಕೂತು ನಗರದಲ್ಲಿ ಮಳೆಯಿಂದ ಆಗಿರುವ ಮತ್ತು ಆಗುತ್ತಿರುವ ಅವಾಂತರಗಳನ್ನು ವೀಕ್ಷಿಸುತ್ತಿದ್ದಾರೆ. ಅರ್ಅರ್ನಗರದಲ್ಲಿ ಗಟ್ಟಿಗೆರೆ ರಸ್ತೆ ಜಲಾವೃತಗೊಂಡಿದೆ. ಒಂದು ಭಾಗದಲ್ಲಿ ರಸ್ತೆಯಲ್ಲಿ ನೀರು ಜಾಸ್ತಿ ಸಂಗ್ರಹಗೊಂಡು ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಮಾಡುತ್ತಿದೆ. ಸ್ಕೂಟರ್ ಓಡಿಸುತ್ತಿರುವ ಮಹಿಳೆಯೊಬ್ಬರು ನೀರು ಕಂಡು ಅತಂಕಕ್ಕೊಳಗಾಗುತ್ತಾರೆ, ಅದರೆ ಕೊನೆಗೆ ಧೈರ್ಯವನ್ನೆಲ್ಲ ಒಗ್ಗೂಡಿಸಿ ನೀರಿನ ಮೂಲಕ ಸಾಗಿಯೇ ಬಿಡುತ್ತಾರೆ. ಧೈರ್ಯಂ ಸರ್ವತ್ರ ಸಾಧನಂ!
ಇದನ್ನೂ ಓದಿ: ಗ್ರೇಟರ್ ಅಲ್ಲ ಲೂಟಿಕೋರರ ಬೆಂಗಳೂರು: ಮಳೆ ಅವಾಂತರದ ಬೆನ್ನಲ್ಲೇ ಕುಮಾರಸ್ವಾಮಿ ಟೀಕೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ