AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಒಂದಷ್ಟು ಮಾವಿನಕಾಯಿಗಳಿಗಾಗಿ ಯುವಕನೊಬ್ಬ ತನ್ನ ಸ್ವಂತ ಚಿಕ್ಕಪ್ಪನನ್ನೇ ಮುಗಿಸಿಬಿಟ್ಟನೇ?

ಮೈಸೂರು: ಒಂದಷ್ಟು ಮಾವಿನಕಾಯಿಗಳಿಗಾಗಿ ಯುವಕನೊಬ್ಬ ತನ್ನ ಸ್ವಂತ ಚಿಕ್ಕಪ್ಪನನ್ನೇ ಮುಗಿಸಿಬಿಟ್ಟನೇ?

ಅರುಣ್​ ಕುಮಾರ್​ ಬೆಳ್ಳಿ
|

Updated on:May 19, 2025 | 8:11 PM

ರಾಜೇಗೌಡ ಮತ್ತು ಮಲ್ಲೇಶ್ ಅಣ್ಣತಮ್ಮಂದಿರು. ಅವರ ಜಂಟಿ ಒಡೆತನದಲ್ಲಿದ್ದ ಮಾವಿನ ಮರದಲ್ಲಿ ಬಿಟ್ಟಿದ್ದ ಕಾಯಿಗಳನ್ನು ಬಿಡಿಸಿಕೊಂಡ ಮಲ್ಲೇಶ್ ಚೀಲಗಳಲ್ಲಿ ತುಂಬಿಕೊಳ್ಳುತ್ತಿದ್ದಾಗ ಅಲ್ಲಿಗೆ ಬಂದ ರಾಜೇಗೌಡನ ಮಗ ಚೇತನ್ ಚಿಕ್ಕಪ್ಪ ಮಲ್ಲೇಶ್ ಜೊತೆ ತಗಾದೆ ಶುರುಮಾಡಿದ್ದಾನೆ. ವಾಗ್ವಾದ ವಿಕೋಪಕ್ಕೆ ಹೋಗಿದೆ ಮತ್ತು ಕೋಪಾವೇಶದಲ್ಲಿ ಚೇತನ್ ಚಾಕುವಿಂದ ಮಲ್ಲೇಶ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗುತ್ತಿದೆ.

ಮೈಸೂರು, ಮೇ 19: ಯಾವ್ಯಾವ ಮತ್ತು ಎಂತೆಂಥ ಕ್ಷುಲ್ಲಕ ವಿಚಾರಗಳಿಗೆ ಕೊಲೆ ನಡೆದುಹೋಗುತ್ತವೆ ಅಂತ ಯೋಚನೆ ಮಾಡಿದ್ದೀರಾ? ವಿಷಯವೇನು ಅಂದರೆ, ಜಿಲ್ಲೆಯ ಹುಣಸೂರು ತಾಲೂಕಿನಲ್ಲಿರುವ ವಡೆರಾಹೊಸಹಳ್ಳಿಯಲ್ಲಿ 55-ವರ್ಷ ವಯಸ್ಸಿನ ಮಲ್ಲೇಶ್ (Mallesh) ಎನ್ನುವವರ ಕೊಲೆ ನಡೆದಿದ್ದು ಅವರ ಅಣ್ಣನ ಮಗನಾದ ಚೇತನ್ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮೃತನ ಮೊತ್ತೊಬ್ಬ ಅಣ್ಣನ ಮಗನಾಗಿರುವ ಶಂಕರ್ ನಮ್ಮ ಮೈಸೂರು ವರದಿಗಾರನೊಂದಿಗೆ ಮಾತಾಡಿದ್ದು ಕೇವಲ ಮಾವಿನಕಾಯಿ ಹಂಚಿಕೊಳ್ಳುವ ವಿಷಯದಲ್ಲಿ ಕೊಲೆ ನಡೆದಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ:  ಅನಾಥವಾಗಿ ಬಿದ್ದಿದ್ದ ಮಗುವನ್ನು ಸಾಕಿದ ಮಹಿಳೆ ಆ ಮಗಳಿಂದಲೇ ಕೊಲೆಯಾದ ಕತೆಯಿದು!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 19, 2025 06:00 PM