ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಅವರೆಲ್ಲ ಬೆಂಗಳೂರಿನವರು. ಊರ ಹಬ್ಬ ಅಂತಾ ಸಂಬಂಧಿಕರ ಮನೆಗೆ ಬಂದಿದ್ರು. ಇದೇ ವೇಳೆ ಗ್ರಾಮದ ಪಕ್ಕದಲ್ಲೇ ಇರುವ ಜಲಾಶಯ ವೀಕ್ಷಣೆಗೆಂದು ತೆರಳಿದ್ರು. ಆದರೆ ಈ ವೇಳೆ ಘನಘೋರ ಘಟನೆಯೇ ನಡೆದಿದೆ. ಜಲಾಶಯದಲ್ಲಿ ಮುಳುಗಿ ಮೂವರು ದುರಂತ ಅಂತ್ಯಕಂಡಿದ್ರೆ, ನಾಲ್ವರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಹತ್ತು ನಿಮಿಷಗಳ ಕಾಲ ಆಟವಾಡುತ್ತಿದ ವೇಳೆ ಮೊದಲು ಮಧುಮಿತ ಮುಳಗಿದ್ದಾಳೆ. ಅವರನ್ನ ಹಿಡಿಯಲು ಹೋಗಿ ಒಬ್ಬರ ನಂತರ ಒಬ್ಬರಂತೆ ಏಳು ಜನ ಮುಳಗಿದ್ದಾರೆ.
ರಾಮನಗರ, ಮೇ 19): ಅವರೆಲ್ಲ ಬೆಂಗಳೂರಿನವರು. ಊರ ಹಬ್ಬ ಅಂತಾ ಸಂಬಂಧಿಕರ ಮನೆಗೆ ಬಂದಿದ್ರು. ಇದೇ ವೇಳೆ ಗ್ರಾಮದ ಪಕ್ಕದಲ್ಲೇ ಇರುವ ಜಲಾಶಯ ವೀಕ್ಷಣೆಗೆಂದು ತೆರಳಿದ್ರು. ಆದರೆ ಈ ವೇಳೆ ಘನಘೋರ ಘಟನೆಯೇ ನಡೆದಿದೆ. ಜಲಾಶಯದಲ್ಲಿ ಮುಳುಗಿ ಮೂವರು ದುರಂತ ಅಂತ್ಯಕಂಡಿದ್ರೆ, ನಾಲ್ವರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಮಾಗಡಿ ತಾಲೂಕಿನ ವೈಜಿ ಗುಡ್ಡ ಕಾಲೋನಿಯಲ್ಲಿ ಗ್ರಾಮದ ಹಬ್ಬಕ್ಕೆಂದು ದಿವ್ಯಾ ಮನೆಗೆ ಎಲ್ಲರೂ ನಿನ್ನೆ ಸಂಜೆ ಬಂದಿದ್ದರು. ಇಂದು ಮಧ್ಯಾಹ್ನ ಹಬ್ಬವಿತ್ತು. ಹೀಗಾಗಿ ಸಮಯವಿದೆ ಎಂದು ಕಾಲೋನಿ ಪಕ್ಕದಲ್ಲೇ ಇರುವ ವೈಜಿಗುಡ್ಡ ಜಲಾಶಯಕ್ಕೆ ತೆರಳಿದ್ದಾರೆ. ಜಲಾಶಯದ ನೀರಿನಲ್ಲಿ ಆಟವಾಡಲು ತೆರಳಿದ್ದ ಏಳು ಜನರಲ್ಲಿ ಮೂವರು ನೀರಿನಲ್ಲಿ ಮುಳುಗಿ, ನಾಲ್ವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೈಜಿ ಗುಡ್ಡ ಜಲಾಶಯದಲ್ಲಿ ನಡೆದಿದೆ. ಬೆಂಗಳೂರು ಮೂಲದ ಸಹೋದರಿಯರಾದ ಮಧುಮಿತಾ(20), ರಾಘವಿ(18) ಹಾಗು ರಮ್ಯಾ ಮೃತ ದುರ್ದೈವಿಗಳು. ಇನ್ನು ಅವಘಡದಲ್ಲಿ ನಿರ್ಮಾಲ, ರಿನಾ, ದಿವ್ಯಾ, ಚಂದ್ರಿಕಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ವೈಜಿ ಗುಡ್ಡ ಜಲಾಶಯದಲ್ಲಿ ಬೆಂಗಳೂರಿನ ಮೂವರು ಯುವತಿಯರು ಜಲಸಮಾಧಿ
ಹತ್ತು ನಿಮಿಷಗಳ ಕಾಲ ಆಟವಾಡುತ್ತಿದ ವೇಳೆ ಮೊದಲು ಮಧುಮಿತ ಮುಳಗಿದ್ದಾಳೆ. ಅವರನ್ನ ಹಿಡಿಯಲು ಹೋಗಿ ಒಬ್ಬರ ನಂತರ ಒಬ್ಬರಂತೆ ಏಳು ಜನ ಮುಳಗಿದ್ದಾರೆ. ಈ ವೇಳೆ ಜೊತೆಯಲ್ಲಿ ಇದ್ದ ದಿವ್ಯ ಪತಿ ಸೋಮಶೇಖರ್, ನಿರ್ಮಾಲ, ದಿವ್ಯ, ರಿನಾ ಹಾಗೂ ಚಂದ್ರಿಕರನ್ನ ರಕ್ಷಣೆ ಮಾಡಿದ್ದಾರೆ. ಅಷ್ಟರಲ್ಲೇ ಉಳಿದ ಮೂವರ ಪ್ರಾಣಪಕ್ಷಿ ಹಾರಿಹೋಗಿದೆ.