Bihar: ಮನೆಯಲ್ಲಿ ಕೂತು ವ್ಯರ್ಥ ಕಾಲಹರಣ ಮಾಡುತ್ತಿದ್ದ ಮಹಿಳೆಯರು ಸ್ವ-ಸಹಾಯ ಗುಂಪಿನ ಜೊತೆ ಸೇರಿ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ!
ಅಕಳು ಸೆಗಣಿಯಿಂದ ಸುಮಾರು 500 ವಸ್ತುಗಳನ್ನು ಇಲ್ಲಿ ತಯಾರಿಸಲಾಗುತ್ತದೆ ಮತ್ತು ಅವುಗಳಿಗೆ ಮಾರ್ಕೆಟ್ ನಲ್ಲಿ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ.
ಬಿಹಾರ: ರಾಜ್ಯದ ಅರಾಹ್ ಹೆಸರಿನ ಸ್ಥಳದಲ್ಲಿರುವ ಸ್ವ-ಸಹಾಯ ಗುಂಪೊಂದು (NGO) ಅಲ್ಲಿಮ ಹತ್ತಾರು ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕು ನಡೆಸುವ ಅವಕಾಶ ಕಲ್ಪಿಸಿದೆ. ಸುಮಾರು 70 ಮಹಿಳೆಯರು ಗೋವರ್ಧನ ಗೋ ಸೇವಾ ಕೇಂದ್ರ (Govardhan Go Seva Kendra) ಹೆಸರಿನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ಹಸುವಿನ ಸೆಗಣಿ (cow dung) ಬಳಸಿ ಪೆನ್ ಸ್ಟ್ಯಾಂಡ್, ನಾಮಪಲಕ, ಬೀಗದಕೈ ಚೈನು ಮತ್ತು ಆಟಿಕೆಗಳನ್ನು ತಯಾರಿಸುತ್ತಾರೆ.
‘ಕಳೆದ 2-3 ತಿಂಗಳುಗಳಿಂದ ನಾವು ಇಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ಇಲ್ಲಿಯ ಕೆಲಸ ಬಹಳ ಸಂತೃಪ್ತಿಯನ್ನು ನೀಡಿದೆ. ಇಲ್ಲಿ ಕೆಲಸಕ್ಕೆ ಬರುವ ಮೊದಲು ನಾವು ಸೋಂಭೇರಿಗಳಾಗಿ ಮನೆಯಲ್ಲಿರುತ್ತಿದ್ದೆವು ಇಲ್ಲವೇ ಒಂದೆಡೆ ಸೇರಿ ಹರಟುತ್ತಾ ಕಾಲಹರಣ ಮಾಡುತ್ತಿದ್ದೆವು. ಆದರೆ ಈಗ ನನ್ನಂತೆಯೇ ಹಲವಾರು ಮಹಿಳೆಯರು ಇಲ್ಲಿ ಕೆಲಸಕ್ಕೆ ಬರುತ್ತಿದ್ದಾರೆ ಮತ್ತು ಹಸುವಿನ ಸೆಗಣಿಯಿಂದ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಎಲ್ಲ ಬಹಳ ಚೆನ್ನಾಗಿ ನಡೆಯುತ್ತಿದೆ ಮತ್ತು ನಾವೆಲ್ಲ ಬಹಳ ಸಂತೋಷದಿಂದ ಕೆಲಸ ಮಾಡುತ್ತಿದ್ದೇವೆ,’ ಎಂದು ಕೇಂದ್ರದಲ್ಲಿ ಕೆಲಸ ಮಾಡುತ್ತಾ ಸ್ವಾವಲಂಬಿ ಬದುಕು ನಡೆಸುತ್ತಿರುವ ಮೀನಾ ಹೇಳುತ್ತಾರೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ, ತಪ್ಪಾಗಿ ದೇಶಿ ಪ್ರಯಾಣಿಕರ ಗೇಟ್ನಲ್ಲಿ ಇಳಿದ ಶ್ರೀಲಂಕಾದ 30 ಪ್ರಯಾಣಿಕರು
ತಮ್ಮ ಮನೆಗೆಲಸಗಳನ್ನು ತೀರಿಸಿಕೊಂಡ ಬಳಿಕವೇ ಮಹಿಳೆಯರು ಇಲ್ಲಿಗೆ ಕೆಲಸಕ್ಕೆ ಬರುತ್ತಾರೆ.
‘ಇಲ್ಲಿ ಬಂದು ಕೆಲಸ ಮಾಡುವುದು ನಮಗೆ ಬಹಳ ಇಷ್ಟವಾಗುತ್ತಿದೆ. ಮಹಿಳಾ ಸಬಲೀಕರಣ ಅಂದರೇನು ಅಂತ ಗೊತ್ತಾಗುತ್ತಿದೆ. ಹೆಣ್ಣುಮಕ್ಕಳು ಇಲ್ಲಿಗೆ ಬರುವ ಮೊದಲು ಮನೆಗೆಲಸಗಳನ್ನು ಮುಗಿಸಿಕೊಂಡೇ ಬರುತ್ತಾರೆ, ಮನೆಯಲ್ಲಿ ಕೂತು ವ್ಯರ್ಥವಾಗಿ ಹೊತ್ತು ಕಳೆಯುವ ಬದಲು ಇಲ್ಲಿ ಬಂದು ಕೆಲಸ ಮಾಡುತ್ತಾರೆ,’ ಅಂತ ಮತ್ತೊಬ್ಬ ಮಹಿಳೆ ಪೂನಂ ಕುಮಾರಿ ಹೇಳುತ್ತಾರೆ.
‘ಬೆಳಗ್ಗೆ ಹತ್ತು ಗಂಟೆಗೆಲ್ಲ ಮನೆಗೆಲಸಗಳನ್ನು ಮಾಡಿಕೊಂಡು ಇಲ್ಲಿಗೆ ಬರುತ್ತೇವೆ. ಹಣತೆಗಳನ್ನು ತಯಾರಿಸುವ ತರಬೇತಿಯನ್ನು ನಮಗೆ ನೀಡಿದ್ದಾರೆ. ಹಣತೆಗಳನ್ನು ತಯಾರಿಸಿದ ಬಳಿಕ ನಾವೇ ಅವುಗಳಿಗೆ ಬಣ್ಣವನ್ನೂ ಹಚ್ಚುತ್ತೇವೆ,’ ಎಂದು ಪೂರ್ಣಿಮಾ ಕುಮಾರಿ ಹೇಳುತ್ತಾರೆ.
ಅಕಳು ಸೆಗಣಿಯಿಂದ ಸುಮಾರು 500 ವಸ್ತುಗಳನ್ನು ಇಲ್ಲಿ ತಯಾರಿಸಲಾಗುತ್ತದೆ ಮತ್ತು ಅವುಗಳಿಗೆ ಮಾರ್ಕೆಟ್ ನಲ್ಲಿ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ.
‘ಮಾರ್ಕೆಟ್ ಗಳಲ್ಲಿ ಸಿಗುತ್ತಿರುವ ಪ್ರತಿಕ್ರಿಯೆ ಎಷ್ಟು ಆಶಾದಾಯಕವಾಗಿದೆ ಅಂದರೆ ಬೇಡಿಕೆಗಳೊಂದಿಗೆ ಏಗುವುದು ನಮಗೆ ಸಾಧ್ಯವಾಗುತ್ತಿಲ್ಲ. ವಸ್ತುಗಳನ್ನು ತಯಾರಿಸಲು ಮತ್ತು ಒಣಗಿಸಲು ಸಮಯ ಹಿಡಿಯುತ್ತದೆ. ಮಾರ್ಕೆಟ್ ಬೇಡಿಕೆಯೊಂದಿಗೆ ವೇಗ ಕಾಯ್ದುಕೊಳ್ಳುವುದು ಬಹಳ ಕಷ್ಟವಾಗುತ್ತಿದೆ,’ ಎಂದು ಸುಧೀರ್ ಕುಮಾರ್ ಹೇಳುತ್ತಾರೆ.
ಇದನ್ನೂ ಓದಿ: ಜರ್ಮನಿಯ ವಶದಲ್ಲಿರುವ ಮಗಳನ್ನು ಕರೆ ತರಲು ಪ್ರಧಾನಿ ಮೋದಿ, ವಿದೇಶಾಂಗ ಸಚಿವರಿಗೆ ಮನವಿ ಮಾಡಿದ ಭಾರತೀಯ ದಂಪತಿ
ಸ್ವ-ಸಹಾಯ ಗುಂಪಿನ ಜೊತೆ ಸ್ಟಾರ್ಟ್ ಅಪ್ ಕೂಡ ಆಗಿರುವ ಗೋವರ್ಧನ್ ಗೋ ಸೇವಾ ಕೇಂದ್ರ ಒಂದು ಅರ್ಥಪೂರ್ಣ ಉದ್ದೇಶದೊಂದಿಗೆ ಕೆಲಸ ಮಾಡುತ್ತಾ, ಮಧ್ಯಮ ವರ್ಗ ಹಿನ್ನೆಲೆಯ ಗೃಹಿಣಿಯರಿಗೆ ಕೆಲಸ ಒದಗಿಸಿ ಅವರ ಕುಟುಂಬಗಳಿಗೆ ಹೆಚ್ಚುವರಿ ಆದಾಯ ಕಲ್ಪಿಸುವುದರ ಜೊತೆಗೆ ಹಸುವಿನ ಸೆಗಣಿಯ ಸದುಪಯೋಗ ಮಾಡುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ