ನೌಕರರ ಮುಷ್ಕರ: ಮನೆ ಮನೆ ಕಸ ಸಂಗ್ರಹಿಸಿದ ಹಾಸನ ನಗರಸಭೆ ಅಧ್ಯಕ್ಷ
ನೇರ ವೇತನಪಾವತಿಗೆ ಆಗ್ರಹಿಸಿ ಹಾಸನ ನಗರಸಭೆ ಹೊರಗುತ್ತಿಗೆ ನೌಕರರು ಮತ್ತು ಕಸ ಸಂಗ್ರಹ ವಾಹನ ಚಾಲಕರು ಕಳೆದ ಒಂದು ವಾರದಿಂದ ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಕಸ ಸಂಗ್ರಹ ಕಾರ್ಯ ಸಂಪೂರ್ಣ ಸ್ಥಗಿತವಾಗಿದೆ.
ಹಾಸನ: ನೇರ ವೇತನಪಾವತಿಗೆ ಆಗ್ರಹಿಸಿ ನಗರಸಭೆ ಹೊರಗುತ್ತಿಗೆ ನೌಕರರು ಮತ್ತು ಕಸ ಸಂಗ್ರಹ ವಾಹನ ಚಾಲಕರು ಕಳೆದ ಒಂದು ವಾರದಿಂದ ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಕಸ ಸಂಗ್ರಹ ಕಾರ್ಯ ಸಂಪೂರ್ಣ ಸ್ಥಗಿತವಾಗಿದೆ. ಇದರಿಂದ ಹಾಸನ ನಗರಸಭೆ (Hassan Municipality) ಅಧ್ಯಕ್ಷ ಮೋಹನ್ ಖುದ್ದು ತಾವೆ 34ನೇ ವಾರ್ಡ್ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸಿದ್ದಾರೆ. ಮೋಹನ್ ಮನೆ ಮನೆಗೆ ತೆರಳಿ ಕೆಲ ನಗರಸಭೆ ಸದಸ್ಯರ ಜತೆ ಸೇರಿ ಕಸ ಸಂಗ್ರಹಿಸುತ್ತಿದ್ದಾರೆ. ನಗರಸಭೆ ಅಧ್ಯಕ್ಷರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published on: Mar 19, 2023 10:27 AM