ಬೆಂಗಳೂರು ವಿಮಾನ ನಿಲ್ದಾಣದಲ್ಲಿ, ತಪ್ಪಾಗಿ ದೇಶಿ ಪ್ರಯಾಣಿಕರ ಗೇಟ್​ನಲ್ಲಿ​ ಇಳಿದ ಶ್ರೀಲಂಕಾದ 30 ಪ್ರಯಾಣಿಕರು

ಶ್ರೀಲಂಕಾದ, ಕೊಲಂಬೊದಿಂದ ಬೆಂಗಳೂರಿಗೆ ಬಂದಿದ್ದ 30 ಜನ ಪ್ರಯಾಣಿಕರನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಅಂತರಾಷ್ಟ್ರೀಯ ಆಗಮನದ ಗೇಟ್, ಬದಲಾಗಿ ದೇಶಿ ಪ್ರಯಾಣಿಕರ ಗೇಟ್​ನಲ್ಲಿ ತಪ್ಪಾಗಿ ಇಳಿಸಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ, ತಪ್ಪಾಗಿ ದೇಶಿ ಪ್ರಯಾಣಿಕರ ಗೇಟ್​ನಲ್ಲಿ​ ಇಳಿದ ಶ್ರೀಲಂಕಾದ 30 ಪ್ರಯಾಣಿಕರು
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
Follow us
ವಿವೇಕ ಬಿರಾದಾರ
|

Updated on:Mar 18, 2023 | 2:26 PM

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಬೆಂಗಳೂರಲ್ಲಿ (Bengaluru) ಭದ್ರತಾ ಲೋಪವೊಂದು ಸಂಭವಿಸಿದೆ. ಶ್ರೀಲಂಕಾದ, (Srilanka) ಕೊಲಂಬೊದಿಂದ (Colombo) ಬೆಂಗಳೂರಿಗೆ ಬಂದಿದ್ದ 30 ಜನ ಪ್ರಯಾಣಿಕರನ್ನು ಅಂತರಾಷ್ಟ್ರೀಯ ಆಗಮನದ ಗೇಟ್, ಬದಲಾಗಿ ದೇಶಿ ಪ್ರಯಾಣಿಕರ ಗೇಟ್​ನಲ್ಲಿ ತಪ್ಪಾಗಿ ಇಳಿಸಲಾಗಿದೆ. ಶುಕ್ರವಾರ (ಮಾ.17) ಯುಎಲ್​ 173 ವಿಮಾನದ ಮೂಲಕ ಬಂದ ಶ್ರೀಲಂಕಾದ ಪ್ರಯಾಣಿಕರನ್ನು ದೇಶೀಯ ಆಗಮನದ ಬಸ್​ ಗೇಟ್​​​ನಲ್ಲಿ ಇಳಿಸಲಾಗಿದೆ ಎಂದು ಬೆಂಗಳೂರು ಇಂಟರ್​ನ್ಯಾಶನಲ್​ ಏರ್​ಪೋರ್ಟ್​ ಲಿಮಿಟೆಡ್​) ವಕ್ತಾರರು ತಿಳಿಸಿದ್ದಾರೆ.

ಕೂಡಲೆ ಟರ್ಮಿನಲ್​ ಕಾರ್ಯಾಚರಣೆ ತಂಡ ಸ್ಥಳಕ್ಕೆ ಧಾವಿಸಿ, ಘಟನೆ ಬಗ್ಗೆ ಸಿಐಎಸ್​ಫ್​ ಮತ್ತು ಇಮಿಗ್ರೇಷನ್​ಗೆ ತಿಳಿಸಿದರು. ನಂತರ ಸಿಐಎಸ್​ಫ್​, ಇಮಿಗ್ರೇಷನ್ ಜೊತೆಗೆ ಟರ್ಮಿನಲ್​ ಕಾರ್ಯಾಚರಣೆ ತಂಡಕ್ಕೆ ಸೂಚನೆ ನೀಡಲಾಯಿತು, ಪ್ರಯಾಣಿಕರನ್ನು ತಕ್ಷಣವೇ ಪ್ರವಾಸಕ್ಕೆ ಅಂತಾರಾಷ್ಟ್ರೀಯ ಆಗಮನಕ್ಕೆ ಸ್ಥಳಾಂತರಿಸಲಾಯಿತು. ನಂತರ ಪ್ರಯಾಣಿಕರು ಅಂತರಾಷ್ಟ್ರೀಯ ಬ್ಯಾಗೇಜ್ ಕ್ಲೈಮ್ ಪ್ರದೇಶಕ್ಕೆ ತೆರಳಿದರು ಎಂದು ಬಿಐಎಎಲ್ ವಕ್ತಾರರು ಹೇಳಿದರು.

ಇದನ್ನೂ ಓದಿ: ಟರ್ಮಿನಲ್ 2ರಿಂದ ವಿಸ್ತಾರ ವಿಮಾನ ಸೇವೆ; ಮಾರ್ಚ್ 26ರಿಂದ ಲಭ್ಯ

ವಿಮಾನ ನಿಲ್ದಾಣದಲ್ಲಿನ ಪರಿಸ್ಥಿತಿಗೆ ಮಾನವ ದೋಷ ಕಾರಣವಾಗಿದ್ದು ಅದು ಅಂತಿಮವಾಗಿ ಗೊಂದಲಕ್ಕೆ ಕಾರಣವಾಯಿತು. ಆದರೂ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಐಎಎಲ್ ಹೇಳಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:22 pm, Sat, 18 March 23

ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ