Assembly Session: ಸದನದಲ್ಲಿ ಹಿರಿಯ ಜೆಡಿಎಸ್ ಶಾಸಕ ರೇವಣ್ಣ ಪೊಲೀಸ್ ಅಧಿಕಾರಿ ವಿರುದ್ಧ ಬಳಸಿದ ಪದ ಅನಾವಶ್ಯಕವಾಗಿತ್ತು!

|

Updated on: Jul 16, 2024 | 7:12 PM

ರೇವಣ್ಣ ಅವರೇ ಹೇಳುವ ಹಾಗೆ 4 ದಶಕಗಳಿಂದ ರಾಜಕಾರಣದಲ್ಲಿರುವ ಅವರು ಸದನದಲ್ಲಿ ಬಳಸುವ ಪದಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯ ವಿರುದ್ಧ ಅವರು ಹಾಗೆಲ್ಲ ಮಾತಾಡುವ ಅವಶ್ಯಕತೆ ಇರಲಿಲ್ಲ, ಅಧಿಕಾರಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ, ಮಹಿಳೆ ದೂರು ನೀಡಲು ಬಂದಾಗ ಅಧಿಕಾರಿಯು ರೇವಣ್ಣನಿಗೆ ಪೋನ್ ಮಾಡಿ ದೂರು ತಗೊಳ್ಲಾ ಅಂತ ಕೇಳಬೇಕಿತ್ತೇ?

ಬೆಂಗಳೂರು: ವಿಧಾನಸಭಾ ಅಧಿವೇಶನದಲ್ಲಿ ನಿನ್ನೆ ಮುಗುಮ್ಮಾಗಿದ್ದ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಇಂದು ಮಾತಾಡಿದರು. ಮಾತಾಡುವ ಭರದಲ್ಲಿ ಅವರು ರಾಜ್ಯ ಪೊಲೀಸ್ ವ್ಯವಸ್ಥೆಯ ಅತ್ಯುನ್ನತ ಅಧಿಕಾರಿಗೆ ನಾಲಾಯಕ್ ಎಂಬ  ಪದ ಬಳಸಿದರು. ಇದು ಅವರು ಹತಾಷೆಯೂ ಅಗಿರಬಹುದು. ಸದನದಲ್ಲಿ ರೆವಣ್ಣ ಮಾತಾಡಲು ನಿಂತಾಗ ಅವರ ಎಡಭಾಗದಿಂದ ಕಾಂಗ್ರೆಸ್ ಶಾಸಕರೊಬ್ಬರು ಏನನ್ನೋ ಹೇಳಲು ಬಯಸುತ್ತಾರೆ. ಆಗ ರೇವಣ್ಣ ಅಸಹನೆಯಿಂದ ಕೂತ್ಕೊಳ್ರಿ ಹೇಳ್ತೀನಿ ಎನ್ನುತ್ತಾರೆ. ಮುಂದುವರಿದು ಮಾತಾಡುವ ಅವರು ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೇರಿಸಲಿ, ನನ್ನ ಅಭ್ಯಂತರವಿಲ್ಲ, ಅದರೆ ಒಬ್ಬ ಮಹಿಳೆ ಡಿಜಿ ಕಚೇರಿಗೆ ಹೋಗಿ 40 ವರ್ಷಗಳಿಂದ ರಾಜಕಾರಣದಲ್ಲಿರುವ ನನ್ನ ವಿರುದ್ಧ ದೂರು ಹೇಳಿದರೆ ಅದನ್ನು ಬರೆಸಿಕೊಳ್ಳುತ್ತಾನಲ್ಲ? ಅವನು ಡಿಜಿನಾ? ಡಿಜಿಯಾಗಲು ನಾಲಾಯಕ್ಕು ಅವನು ಅಂತ ಹೇಳಿದಾಗ ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ, ನರೇಂದ್ರ ಸ್ವಾಮಿ ತಿರುಗಿ ಬೀಳುತ್ತಾರೆ. ನಿಮ್ಮ ಮಗ ಮಾಡಬಾರದ ನೀಚ ಕೆಲಸಗಳನ್ನೆಲ್ಲ ಮಾಡಿದ್ದಾನೆ, ಯಾವ ನೈತಿಕತೆಯಿಂದ ಬೇರೆಯವರ ವಿರುದ್ಧ ಮಾತಾಡುತ್ತೀರಿ ಅಂತ ಮುಗಿಬೀಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಒಂಟಿತನಕ್ಕೆ ಒಗ್ಗಿಕೊಳ್ಳುತ್ತಿರುವ ಹೆಚ್ ಡಿ ರೇವಣ್ಣ ಒಂಟಿಯಾಗಿಯೇ ಸದನದಿಂದ ಹೊರಬಂದರು!