ಬೆಂಗಳೂರು, (ಜುಲೈ 08): ವಾಹನಕ್ಕೆ ಬೇಕಾಬಿಟ್ಟಿ ಎಕ್ಸ್‌ಟ್ರಾ ಲೈಟ್ ಅಳವಡಿಸಿಕೊಂಡು ಚಲಾಯಿಸುವ ವಾಹನ ಚಾಲಕರು ಇನ್ನು ಮುಂದೆ ಎಚ್ಚರ ವಹಿಸಬೇಕಿದೆ. ಹೈ ಬೀಮ್ ಲೈಟ್ ಉಪಯೋಗಿಸುತ್ತಿದ್ದ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ನಾಟಕದಾದ್ಯಂತ ಈ ವಾರ ಅಂದರೆ ಜುಲೈ 01ರಿಂದ ಜುಲೈ 7ರ ವರೆಗೆ 8244 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ರಾತ್ರಿ ವೇಳೆ ಹೈ ಬೀಮ್ ಲೈಟ್ ಉಪಯೋಗದಿಂದ ಅಪಘಾತ (Accidents) ಪ್ರಕರಣಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು, ಹೀಗೆ ಹಾಕಿಕೊಂಡು ಚಲಾಯಿಸಿದವರ ವಿರುದ್ಧ ಕೇಸ್ ಜಡಿದಿದ್ದಾರೆ. ಈ ಮೂಲಕ ಹೈ ಬೀಮ್ ಎಲ್ ಇಡಿ ಹೆಡ್ ಲೈಟ್ ಹೊಂದಿರುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ಮೊದಲ ರಾಜ್ಯ ಕರ್ನಾಟಕ ಎನಿಸಿಕೊಂಡಿದೆ.
ಕಾರು, ಬೈಕ್ ಹಾಗೂ ಇತರ ವಾಹನಗಳಲ್ಲಿ ಕಣ್ಣುಕುಕ್ಕುವಂಥ ಎಲ್ಇಡಿ ಲೈಟ್ಗಳನ್ನು ಅಳವಡಿಸಿ ಇತರರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಜುಲೈನಿಂದ ಕಾರ್ಯಾಚರಣೆ ರಂಭಿಸುವುದಾಗಿ ತಿಳಿಸಿದ್ದ ಕರ್ನಾಟಕ ಸಂಚಾರ ಪೊಲೀಸರು ಇದೀಗ ಬಿಸಿಮುಟ್ಟಿಸಲು ಆರಂಭಿಸಿದ್ದು, ಕೇವಲ ಒಂದೇ ವಾರದಲ್ಲಿ (ಏಳು ದಿನ) ಎಲ್ಲಾ ಜಿಲ್ಲೆಗಳಲ್ಲಿ ಸೇರಿಸಿದಂತೆ ಕರ್ನಾಟಕದಲ್ಲಿ ಒಟ್ಟು 8244 ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಅಲ್ಲದೇ ಕ್ರಮ ಕೈಗೊಂಡ ಅಧಿಕಾರಿಗಳಿಗೆ, ಸಿಬ್ಬಂದಿಗೆ ಅಲೋಕ್ ಕುಮಾರ್ ಅವರು ಎಕ್ಸ್ನಲ್ಲಿ ಶ್ಲಾಘಿಸಿದ್ದಾರೆ.
Karnataka is the first state to have gone for massive crackdown against vehicles with high beam LED Headlights
8244 cases booked in one week
Kudos to our officers & men
Appreciate the law abiding citizens using legally permitted Headlights & keeping our roads safe pic.twitter.com/CNJvtENjkx
— alok kumar (@alokkumar6994) July 8, 2024
ತೀಕ್ಷ್ಣ ಬೆಳಕು ಸೂಸುವಂಥ ಎಲ್ಇಡಿ ಲೈಟ್ಗಳನ್ನು ಅಳವಡಿಸಿದ ಅತಿಹೆಚ್ಚು ಪ್ರಕರಣಗಳು ಬೆಂಗಳೂರಿನ ನಗರ ಜಿಲ್ಲೆಯಲ್ಲೇ ಎನ್ನುವುದು ವರದಿಯಾಗಿವೆ. ನಗರದಲ್ಲಿ ಏಳು ದಿನಗಳಲ್ಲಿ ಅಂದರೆ ಜುಲೈ 01 ರಿಂದ ಜುಲೈ 7ರ ವರೆಗೆ ಬರೋಬ್ಬರಿ 3354 ಕೇಸ್ ದಾಖಲಾಗಿವೆ. ನಂತರದ ಸ್ಥಾನಗಳಲ್ಲಿ ರಾಯಚೂರು (386, ಮೈಸೂರು ನಗರ (381), ಮಂಗಳೂರು ನಗರ (325) ಇವೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಈ ಪ್ರಕರಣ ದಾಖಲಾಗಿದ್ದು, ನಿಮ್ಮ ಜಿಲ್ಲೆಗಳಲ್ಲಿ ಎಷ್ಟು ಕೇಸ್ ದಾಖಲಾಗಿವೆ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿಕೊಳ್ಳಿ.
Published On - 10:47 pm, Mon, 8 July 24