ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು?

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು?

ಸುಷ್ಮಾ ಚಕ್ರೆ
|

Updated on: Jan 06, 2025 | 5:03 PM

ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕ್ಲಿಪ್ ರಾಷ್ಟ್ರೀಯ ಉದ್ಯಾನವನದಲ್ಲಿ ಹಲವಾರು ಸಫಾರಿ ಜೀಪ್‌ಗಳನ್ನು ತೋರಿಸಿದೆ. ಸಫಾರಿ ಜೀಪ್‌ಗಳಲ್ಲಿ ಎರಡು ಘೇಂಡಾಮೃಗಗಳು ಚಾರ್ಜ್ ಮಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಜೀಪಿನೊಂದು ದಿಢೀರ್ ತಿರುವು ಪಡೆದು ತಾಯಿ ಮತ್ತು ಮಗಳು ಜೀಪಿನಿಂದ ಕೆಳಗೆ ಬಿದ್ದಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಾಗೋರಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತಾಯಿ-ಮಗಳು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಅವರು ಘೇಂಡಾಮೃಗ ತಮ್ಮ ಬಳಿ ಬರುವ ಮೊದಲೇ ಜೀಪ್ ಹತ್ತಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಒಂದು ಕೊಂಬಿನ ಘೇಂಡಾಮೃಗಗಳ ತವರೂರಾದ ಅಸ್ಸಾಂನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ಪ್ರಕೃತಿ ಉತ್ಸಾಹಿಗಳಿಗೆ ನೆಚ್ಚಿನ ತಾಣವಾಗಿದೆ. ಜೀಪ್ ಸಫಾರಿ ವೇಳೆ ಪ್ರವಾಸಿಗರಿಗೆ ಒಂದು ಕೊಂಬಿನ ಘೇಂಡಾಮೃಗಗಳು ನೋಡಲು ಸಿಗುತ್ತವೆ. ಆದರೆ ಸಾಮಾನ್ಯವಾಗಿ ಈ ಮೋಜಿನ ಸವಾರಿ ತಾಯಿ-ಮಗಳಿಗೆ ಒಮ್ಮೆ ಸಾವು ಕಣ್ಮುಂದೆ ಬರುವಂತೆ ಮಾಡಿದೆ. ಜೀಪ್​ನಲ್ಲಿ ಸಫಾರಿ ಹೋಗುವಾಗ ತಾಯಿ-ಮಗಳುನ ಆಯತಪ್ಪಿ ಘೇಂಡಾಮೃಗದ ಮುಂದೆಯೇ ಬಿದ್ದಿದ್ದಾರೆ. ಆದರೂ ಅವರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಮೈ ಜುಮ್ಮೆನಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ