ಬೇಸಿಗೆಯ (Summer) ಬಿಸಿಲು ಚರ್ಮದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ಅದನ್ನು ನಿಭಾಯಿಸಲು ಸರಿಯಾದ ಆರೈಕೆಯ ಅಗತ್ಯವಿರುತ್ತದೆ. ನಂತರದ ಜೀವನದಲ್ಲಿ ಗಂಭೀರವಾದ ಚರ್ಮದ ಪರಿಸ್ಥಿತಿಗಳನ್ನು ತಪ್ಪಿಸಲು ಬೇಸಿಗೆ ತಿಂಗಳುಗಳಲ್ಲಿ ಪ್ರತಿನಿತ್ಯ ತ್ವಚೆಯ ಆರೈಕೆ ಮಾಡುವುದು ಅಗತ್ಯ ಎಂದು ತಜ್ಞರು ಸೂಚಿಸುತ್ತಾರೆ. ಡರ್ಮಟಾಲಜಿ ಮತ್ತು ಅಸ್ಥೆಟಿಕ್ ಕನ್ಸಲ್ಟೆಂಟ್, ಲೇಸರ್ ತಜ್ಞೆ ಮತ್ತು ಸ್ಕಿನ್‌ಫಿನಿಟಿ ಡರ್ಮಾದ ಸಂಸ್ಥಾಪಕಿ ಡಾ ಇಪ್ಶಿತಾ ಜೋಹ್ರಿ (Dr. Ipshita Johri) ಅವರ ಪ್ರಕಾರ, ಬೇಸಿಗೆಯಲ್ಲಿ ಸೂಕ್ಷ್ಮ ಚರ್ಮ (Sensitive Skin) ಹೊಂದಿರುವ ಜನರು ಕೆಂಪು ಉರಿಯೂತದ ರೂಪದಲ್ಲಿ ಬೆವರು ಸಾಲೆಯನ್ನು (Heat Rash) ಬೆಳೆಸಿಕೊಳ್ಳಬಹುದು.
“ಬೇಸಿಗೆಯ ಶಾಖದಿಂದ ತಪ್ಪಿಸಿಕೊಳ್ಳುವುದು ಸವಾಲಿನ ಸಂಗಾತಿ. ಸೂರ್ಯನ ಶಾಖದಿಂದ ನಿರ್ದಿಷ್ಟ ಜನರಲ್ಲಿ, ಕುತ್ತಿಗೆ, ಎದೆ, ತೋಳುಗಳು, ಕಾಲುಗಳು ಮತ್ತು ಮುಖದ ಮುಂಭಾಗದಲ್ಲಿ ದದ್ದುಗಳು ಕಾಣಿಸಿಕೊಳ್ಳಬಹುದು” ಎಂದು ಡಾ ಜೋಹ್ರಿ ಹೇಳಿದರು.
ತೀವ್ರವಾದ ಬೇಸಿಗೆಯ ಬಿಸಿಲಿನಲ್ಲಿ ನೀವು ಸನ್‌ಬರ್ನ್‌ಗೆ ಒಳಗಾಗಿದ್ದರೆ, ಚೆನ್ನಾಗಿ ಹೈಡ್ರೇಟ್ ಆಗುವುದನ್ನು ಮರೆಯಬೇಡಿ. ಸನ್‌ಬರ್ನ್ ಆದ ಜಾಗಗಳಿಗೆ ತಂಪಾದ ತಂಪಾದ ಪದಾರ್ಥಗಳು ಎಂದರೆ ಐಸ್ ಕ್ಯೂಬ್‌ಗಳು, ಅಲೋವೆರಾ ಮತ್ತು ಮುಲ್ತಾನಿ ಮಿಟ್ಟಿ ಇಟ್ಟು ಸುಧಾರಿಸಿಕೊಳ್ಳಿ. ಇವು ನಿಮ್ಮ ಚರ್ಮವನ್ನು ತಂಪಾಗಿಸುವ ಪರಿಣಾಮಗಳನ್ನು ಹೊಂದಿವೆ,” ಎಂದು ಡಾ ಜೋಹ್ರಿ ಇಂಡಿಯಾ ಟುಡೇಗೆ ಹೇಳಿದರು.
ಸನ್‌ಬರ್ನ್‌ಗೆ ಐಸ್ ಕ್ಯೂಬ್‌ಗಳನ್ನು ಇಟ್ಟರೆ ಇದು ನಿಮ್ಮ ಚರ್ಮವನ್ನು ಶಾಂತಗೊಳಿಸುತ್ತದೆ. ಅಲೋವೆರಾ ತುರಿಕೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ರೋಸ್ ವಾಟರ್‌ನೊಂದಿಗೆ ಮುಲ್ತಾನಿ ಮಿಟ್ಟಿ ಸೇರಿಸಿ ಫೇಸ್ ಪ್ಯಾಕ್ ಹಾಕಿದರೆ ಸನ್‌ಬರ್ನ್ ಮತ್ತು ಬೆವರು ಸಾಲೆಯನ್ನು ನಿಯಂತ್ರಿಸಬಹುದು.
“ನಿಮ್ಮ ಚರ್ಮದ ರಂಧ್ರಗಳನ್ನು ಮುಚ್ಚುವ ಕಣಗಳನ್ನು ಸ್ನಾನ ಮಾಡುವಾಗ ಮೃದುವಾಗಿ ಉಜ್ಜುವುದರಿಂದ ತೆಗೆದು ಹಾಕಬಹುದು. ಇದನ್ನು ಕಠಿಣವಾದ ಸ್ಕ್ರಬ್ಬಿಂಗ್ ಬಳಸದೆಯೇ ಸ್ವಚ್ಛಗೊಳಿಸಬಹುದು. ಇದಕ್ಕೆ ಬದಲಾಗಿ, ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಲು ಒರಟಾದ ವಾಶ್ ಕ್ಲಾತ್ ಅಥವಾ ಲೈಟ್ ಸೋಪ್ ಅನ್ನು ಬಳಸಿ,” ಎಂದು ತಜ್ಞರು ತಿಳಿಸಿದ್ದಾರೆ.
ಸಡಿಲವಾದ ಬಟ್ಟೆಗಳನ್ನು ಧರಿಸುವ ಮೂಲಕ ನೀವು ಕಿರಿಕಿರಿಯನ್ನು ಕಡಿಮೆ ಮಾಡಬಹುದು. “ಇದು ನಿಮ್ಮ ಚರ್ಮದ ಮೇಲೆ ಗಾಳಿ ಓಡಾಡಿ ಬೆವರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉದ್ದವಾದ ಪ್ಯಾಂಟ್ ಮತ್ತು ಉದ್ದನೆಯ ತೋಳಿನ ಅಂಗಿ ಅಥವಾ ಟಾಪ್ ಮತ್ತು ನಿಮ್ಮ ಮುಖ, ಕುತ್ತಿಗೆ, ಕಿವಿಗಳನ್ನು ಮುಚ್ಚುವ ಟೋಪಿ ಅಥವಾ ಸ್ಕಾರ್ಫ್ ಅನ್ನು ಧರಿಸಿ. ಅಲ್ಲದೆ, ನೀವು ಹಾಕುವ ಬಟ್ಟೆಯ ಮೇಲೆ ಗಮನವಿರಲಿ. ಹಗುರವಾದ ಹತ್ತಿಯಿಂದ ಮಾಡಲ್ಪಡುವ ಬಟ್ಟೆಗಳು ನಿಮ್ಮ ಚರ್ಮಕ್ಕೆ ಹೆಚ್ಚು ಉಸಿರಾಡಲು ಅಣು ಮಾಡಿಕೊಡುತ್ತದೆ,” ಎಂದು ಚರ್ಮರೋಗ ತಜ್ಞರು ಹೇಳಿದರು.
SPF 30 ರವರೆಗಿನ “ವೈಡ್ ಸ್ಪೆಕ್ಟ್ರಮ್” ರಕ್ಷಣೆಯನ್ನು ಹೊಂದಿರುವ ಸನ್‌ಸ್ಕ್ರೀನ್ ಅನ್ನು ಆರಿಸಿ. ವಿಶಾಲವಾದ ಸ್ಪೆಕ್ಟ್ರಮ್ ಹೊಂದಿರುವ ಸನ್‌ಸ್ಕ್ರೀನ್‌ಗಳು ನಿಮ್ಮನ್ನು UVA ಮತ್ತು UVB ವಿಕಿರಣದಿಂದ ರಕ್ಷಿಸುತ್ತದೆ, ಇದು ಸನ್‌ಬರ್ನ್‌ನ ಪ್ರಾಥಮಿಕ ಕಾರಣಗಳಾಗಿವೆ. “ನೀವು ಕನಿಷ್ಟ ಪ್ರತಿ ದಿನ 2-3 ಗಂಟೆಗಳಿಗೊಮ್ಮೆ ಸನ್‌ಸ್ಕ್ರೀನ್ ಅನ್ನು ಹಚ್ಚಿಕೊಳ್ಳಬೇಕು. ಅದರಲ್ಲೂ ನೀವು ಈಜುತ್ತಿದ್ದರೆ ಅಥವಾ ಹೆಚ್ಚು ಬೆವರುತ್ತಿದ್ದರೆ ಇನ್ನು ಹೆಚ್ಚು ಬಾರಿ ಸನ್‌ಸ್ಕ್ರೀನ್ ಬಳಸಬೇಕು” ಎಂದು ಡಾ ಜೋಹ್ರಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಹೆಚ್ಚಾಗುತ್ತಿರುವ ಎಚ್3ಎನ್2 ವೈರಸ್ನ ಲಕ್ಷಣ ಹಾಗೂ ಚಿಕಿತ್ಸೆಯ ಕುರಿತು ಮಾಹಿತಿ ಇಲ್ಲಿದೆ
ಬೇಸಿಗೆಯಲ್ಲಿ ನಿರ್ಜಲೀಕರಣವು ಅಥವಾ ಡಿಹೈಡ್ರೇಷನ್ ತುಂಬಾ ಸಾಮಾನ್ಯ. ಆದ್ದರಿಂದ ಒಂದೆರಡು ಗ್ಲಾಸ್ ನೀರು ಸಾಕಾಗುವುದಿಲ್ಲ. “ನೀವು ಹೊರಗೆ ಹೋಗುತ್ತಿದ್ದರೆ ಯಾವಾಗಲೂ ನೀರಿನ ಬಾಟಲಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ನಿಮ್ಮ ದೇಹವನ್ನು ಹೈಡ್ರೇಟ್ ಮಾಡಲು ಮತ್ತು ಚರ್ಮವನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಹಣ್ಣಿನ ರಸ, ನಿಂಬೆ ಪಾನಕವನ್ನು ಸೇವಿಸಿ, ಜೊತೆಗೆ ಸೌತೆಕಾಯಿಗಳು ಮತ್ತು ಕಲ್ಲಂಗಡಿಗಳಂತಹ ಹೆಚ್ಚಿನ ನೀರಿನ ಅಂಶವಿರುವ ಹಣ್ಣುಗಳನ್ನು ಸೇವಿಸಿ,” ಎಂದು ಡಾ ಜೋಹ್ರಿ ತಿಳಿದರು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:24 pm, Tue, 7 March 23