1993, ಮಾರ್ಚ್ 12 ರಂದು ಯಾರು ಊಹಿಸದಂತ ಘಟನೆ ಭಾರತದಲ್ಲಿ ನಡೆಯಿತು. ದಾವೂದ್ ಇಬ್ರಾಹಿಂ (Dawood Ibrahim) ಮತ್ತು ಗ್ಯಾಂಗ್ ಮುಂಬೈನ ಸರಣಿ ಬಾಂಬ್ ಸ್ಫೋಟವನ್ನು (Bomb Blast) ನಡೆಸಿದರು. ಇದರಲ್ಲಿ ಹಲವು ಭಾರತೀಯರು ಕೊನೆಯುಸಿರೆಳೆದರು. ಈ ಭೀಕರ ಸ್ಪೋಟದ ಕುರಿತು News 9 ಜೊತೆ ಅಮೆರಿಕಾದ ರಕ್ಷಣಾ ಗುಪ್ತಚರ ಸಂಸ್ಥೆಯ ಮಾಜಿ ಅಧಿಕಾರಿ ಓವನ್ ಎಲ್. ಸರ್ಸ್ (Owen L. Sirrs) ಮಾತನಾಡಿದ್ದಾರೆ. 1993 ಸ್ಫೋಟವನ್ನು ಓವನ್ ಸಂಕ್ಷಿಪ್ತವಾಗಿ ವಿವರಿಸಿದ್ದು ಹೀಗೆ…
1993 ರ ಮುಂಬೈ ಬಾಂಬ್ ಸ್ಫೋಟಕ್ಕೆ ಲೆಫ್ಟಿನೆಂಟ್ ಜನರಲ್ ಜಾವೇದ್ ನಾಸಿರ್, ದಾವೂದ್ ಇಬ್ರಾಹಿಂ ಗ್ಯಾಂಗ್ ಆದೇಶ ನೀಡಿದ್ದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಏಕೆಂದರೆ ಇಂದು ನಾಸಿರ್ ಮತ್ತು ಪಾಕಿಸ್ತಾನ ಇಬ್ಬರು ಮಾಡಬಹುದಾದ ಪಿತೂರಿ. 1993ರ ಸ್ಫೋಟದಲ್ಲಿ ಐಎಸ್‌ಐ ಪಾತ್ರದ ಬಗ್ಗೆ ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಗೊತ್ತಿದೆಯೇ? ಅವರು ಪ್ರಧಾನಿಯಾಗಿದ್ದಿದ್ದರಿಂದ ಘಟನೆಯ ಬಗ್ಗೆ ಅವರಿಗೆ ಗೊತ್ತಿತ್ತು ಎಂಬ ಬಲವಾದ ಅನುಮಾನ ನಿಮಗೆ ಬರಬಹುದು. ಆದರೆ ಅದನ್ನು ಸಾಬೀತುಪಡಿಸಲು ಖಂಡಿತವಾಗಿ ನಿಮಗೆ ಸಾಧ್ಯವಿಲ್ಲ. ವೈಯಕ್ತಿಕವಾಗಿ, ಪಾಕಿಸ್ತಾನ ಮತ್ತು ಅದರ ISI ಹಲವು ಹೀನ ಕೃತ್ಯಗಳಲ್ಲಿ ಭಾಗಿಯಾಗಿದೆ . ಹಾಗಾಗಿ ಜನರಲ್ ಜಾವೇದ್ ನಾಸಿರ್ ಪ್ರಕರಣದಲ್ಲಿ ಈ ಕಾರ್ಯಾಚರಣೆಯನ್ನು ಆ ಸಮಯದಲ್ಲಿ ಪ್ರಧಾನಿ ನವಾಜ್ ಷರೀಫ್ ಅವರ ನೇತೃತ್ವದಲ್ಲೇ ಮಾಡಲಾಯಿತು ಎಂದು ನಾವು ಭಾವಿಸುತ್ತೇನೆ. ಏಕೆಂದರೆ 1993 ಸರಣಿ ಸ್ಪೋಟದ ನಂತರ ಷರೀಫ್, ನಾಸಿರ್ ಅನ್ನು ISI ನ ಡೈರೆಕ್ಟರ್ ಜನರಲ್ ಆಗಿ ಆಯ್ಕೆ ಮಾಡಿದರು.
ನಾಸಿರ್ ಅವರನ್ನು ಪಾಕಿಸ್ತಾನದ ತಬ್ಲಿಘಿ ಜನರಲ್ ಎಂದು ಏಕೆ ಪರಿಗಣಿಸಲಾಗಿದೆ?
ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರ ನಡುವೆ ಪಾಕಿಸ್ತಾನದೊಳಗೆ ನಡೆಯುತ್ತಿರುವ ನಿರಂತರ ಅಧಿಕಾರದ ಹೋರಾಟದ ಬಗ್ಗೆ ನಮಗೆ ತಿಳಿದಿದೆ. ಜಾವೇದ್ ನಾಸಿರ್ ನಿರ್ಧಾರದ ಬಗ್ಗೆ ನನಗೆ ಹೊಳೆಯುವ ವಿಷಯವೆಂದರೆ, ಆಗಿನ ಸೇನಾ ಮುಖ್ಯಸ್ಥರಿಗೆ ತಮ್ಮ ಪಕ್ಕದಲ್ಲಿ ಡೈರೆಕ್ಟರ್ ಜನರಲ್ ಆಗಿ ನಾಸಿರ್ ಅವರನ್ನು ತರುವ ಯಾವ ಆಲೋಚನೆಯು ಇರಲಿಲ್ಲ. ಅಂದು ನಾಸಿರ್ ಅನ್ನು ಪ್ರಧಾನಿ ನವಾಜ್ ಷರೀಫ್ ಆಯ್ಕೆ ಮಾಡಿದ್ದರು. ಜಾವಿದ್ ನಾಸಿರ್ ಅವರ ಪಾತ್ರದ ಬಗ್ಗೆ, ಅವರ ರಾಜಕೀಯ ಒಲವಿನ ಬಗ್ಗೆ, ಅವರು ನಿಜವಾಗಿ ಯಾವ ದಿಕ್ಕಿನತ್ತ ಸಾಗಲಿದ್ದಾರೆ ಎಂಬುದರ ಬಗ್ಗೆ ಪ್ರಧಾನಿಗೆ ಎಷ್ಟು ತಿಳಿದಿದೆ ಎಂದು ನಾನು ಯೋಚಿಸಿದೆ. ನಾಸಿರ್’ಗೆ ಗುಪ್ತಚರ ಹಿನ್ನೆಲೆ ಇರಲಿಲ್ಲ. ಅವರು ಇಂಜಿನಿಯರಿಂಗ್ ಅಧಿಕಾರಿಯಾಗಿದ್ದರು. ಅವರು ನಿಸ್ಸಂಶಯವಾಗಿ, ವಾಸ್ತವವಾಗಿ, ತಬ್ಲೀಘಿ ಜಮಾತ್‌ನ ಸ್ವಯಂ ಘೋಷಿತ ಸದಸ್ಯರಾಗಿದ್ದರು.
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧವನ್ನು ಪ್ರಚೋದಿಸಲು 1993 ಮತ್ತು 2008 ರಲ್ಲಿ ದಾಳಿ ನಡೆಸಲಾಯಿತು. ಎರಡೂ ಸಂದರ್ಭಗಳಲ್ಲಿ ಭಾರತದ ಪ್ರತಿಕ್ರಿಯೆ ನೋಡಿ ನನಗೆ ಆಶ್ಚರ್ಯ ಉಂಟಾಯಿತು. ಆದರೂ ಇದೇನು ಅಷ್ಟು ಆಶ್ಚರ್ಯ ಪಡುವ ವಿಷಯವಲ್ಲ, ಏಕೆಂದರೆ ಹಿಂದಿನಿಂದಲೂ ಭಾರತ ಅಂತಹ ತೀವ್ರವಾದ ತಿರುಗೇಟು ನೀಡಿಲ್ಲ. ಭಾರತವು ದಾಳಿಯಿಂದ ಪ್ರಜಾಪ್ರಭುತ್ವಕ್ಕೆ ಆಗುವ ಹಾನಿಯ ಬಗ್ಗೆ ಯೋಚಿಸುತ್ತೀರಿ ಆದರೆ ಪ್ರತಿಕ್ರಿಯಿಸಲು ಸಾರ್ವಜನಿಕ ಒತ್ತಡ ನಿಮ್ಮನ್ನು ತಡೆಯುತ್ತದೆ. ಭಾರತ ಮನಸು ಮಾಡಿದ್ದರೆ ದೊಡ್ಡ ಪ್ರಮಾಣದ ಯುದ್ಧದ ಮುಖಾಂತರ 2008 ರ ಘಟನೆಗೆ ಪ್ರತಿಕ್ರಿಯೆ ನೀಡಬಹುದಿತ್ತು. ಆದರೆ ಭಾರತ ಇಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ.
ಭಾರತವು ದೃಢವಾದ ಪುರಾವೆಗಳನ್ನು ಒದಗಿಸಿದರೂ, 1993 ಘಟನೆಯ ಬಗ್ಗೆ ಅಂತರರಾಷ್ಟ್ರೀಯ ಪ್ರತಿಕ್ರಿಯೆಯು ಆಕ್ರೋಶದಿಂದ ದೂರವಿತ್ತು. ಇದಕ್ಕೆ ಆಗಿನ ಅಮೆರಿಕಾದ ಪರಿಸ್ಥಿತಿ ಕಾರಣ ಎಂದು ಹೇಳಬಹುದು. ಅಮೆರಿಕದ ಶೀತಲ ಸಮರವು 1993 ರಲ್ಲಿ ಕೊನೆಗೊಂಡಿತು. ಅಂದರೆ, ಇದು ಕ್ಲಿಂಟನ್ ಆಡಳಿತದ ಮೊದಲ ವರ್ಷವಾಗಿತ್ತು. ಪ್ರಪಂಚದಾದ್ಯಂತ ನಮ್ಮ ಮಿಲಿಟರಿ ಉಪಸ್ಥಿತಿಯನ್ನು ಕಡಿಮೆ ಮಾಡುವುದು ಎಲ್ಲರ ನೇರ ಉದ್ದೇಶವಾಗಿತ್ತು. CIA ಅವರು ದಶಕಗಳಿಂದ ಈ ಭಯೋತ್ಪಾದಕ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತಿದ್ದಾರೆ ಎಂದು ಹೇಳಬಹುದು. ಬಹುಶಃ ಇರಾನಿನ ಭಯೋತ್ಪಾದಕ ಗುಂಪುಗಳ ವಿಷಯದಲ್ಲಿ ಅದು ನಿಜವಾಗಿರಬಹುದು. ಆದರೆ ಪಾಕಿಸ್ತಾನ ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯ ವಿಷಯಕ್ಕೆ ಬಂದಾಗ, ಇದು ಹೊಸ ಅಜೆಂಡಾ ಐಟಂ ಎಂದು ನಾನು ಭಾವಿಸುತ್ತೇನೆ.
ಬಾಬರಿ ಮಸೀದಿ ಧ್ವಂಸಕ್ಕೆ ಪ್ರತಿಕ್ರಿಯೆಯಾಗಿ ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನ ಮಾಧ್ಯಮ ಹೇಳುವುದು ಸೂಕ್ತವಲ್ಲ. ನಾನು ವೈಯಕ್ತಿಕವಾಗಿ ಇವೆರಡನ್ನು ಒಂದೇ ರೀತಿಯಲ್ಲಿ ನೋಡುವುದಿಲ್ಲ. ಪಾಕಿಸ್ತಾನಕ್ಕೆ ಬಾಬರಿ ಮಸೀದಿ ಒಂದು ಅನುಕೂಲಕರ ನೆಪ ಎಂದು ನಾನು ಭಾವಿಸುತ್ತೇನೆ. ಭಾರತವನ್ನು ಮತ್ತಷ್ಟು ದುರ್ಬಲಗೊಳಿಸಲು ಪಾಕಿಸ್ತಾನಕ್ಕೆ ಇದು ಒಂದು ಮಾರ್ಗವಾಗಿತ್ತು. ಮತ್ತು ಕಾಶ್ಮೀರದ ವಿಷಯದಲ್ಲಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವದು ಪಾಕಿಸ್ತಾನದ ಗುರಿಯಾಗಿತ್ತು.
ಇನ್ನು ಜನರಲ್ ನಾಸಿರ್ ಬಗ್ಗೆ ಹೇಳುವುದಾದರೆ ಅವರ ಅಧಿಕಾರಾವಧಿಯು ಅಧಿಕೃತವಾಗಿ ಕೊನೆಗೊಳ್ಳುವ ಮೊದಲು ಅವರನ್ನು ವಜಾಗೊಳಿಸಿದ ರೀತಿ ಗಮನಾರ್ಹವಾಗಿದೆ. ಪಾಕಿಸ್ತಾನಕ್ಕೆ ಅಮೇರಿಕಾ ಒತ್ತಡ ಹಾಕಿದ್ದೆ ಇದಕ್ಕೆ ಕಾರಣ ಎಂದು ನಾನು ಭಾವಿಸುತ್ತೇನೆ. ಗುಪ್ತಚರವನ್ನು ಐಎಸ್‌ಐ ಮುಂದೆ ಮಂಡಿಸಲಾಯಿತು, ಬಹುಶಃ ಸಿಐಎ ಈ ಎಲ್ಲಾ ಗುಂಪುಗಳಿಗೆ ಜನರಲ್ ನಾಸಿರ್‌ನ ಮಾಡಿದ ಕೃತ್ಯವನ್ನು ಮನವರಿಕೆ ಮಾಡಿಸಿತ್ತು ಎಂದು ನಾನು ಊಹಿಸಬಲ್ಲೆ, ಆದರೆ ಇದರ ಬಗ್ಗೆ ನನ್ನ ಬಳಿ ಯಾವುದೇ ಪುರಾವೆಗಳಿಲ್ಲ. ಜನರಲ್ ನಾಸಿರ್ ಇಂದಿಗೂ ತಬ್ಲೀಘಿ ಜಮಾತ್‌ನ ಹೆಮ್ಮೆಯ ಸದಸ್ಯ.
ಭಾರತವು ಈ ನಿರ್ದಿಷ್ಟ ಸಮಸ್ಯೆಯ ಬಗ್ಗೆ ಏಕೆ ಕಾಳಜಿ ವಹಿಸುತ್ತದೆ ಮತ್ತು ಏಕೆ ಇದು ಕೇವಲ ಭಾರತ-ಪಾಕಿಸ್ತಾನದ ಸಮಸ್ಯೆ ಅಲ್ಲ, ಆದರೆ ಒಂದು ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಯಾಗಿದೆ ಎಂದು ಜಗತ್ತಿಗೆ ಹೆಚ್ಚು ಸ್ಪಷ್ಟಪಡಿಸಬೇಕು. ಈ ಭಯೋತ್ಪಾದನೆ ಸಮಸ್ಯೆಯ ಬಗ್ಗೆ ಬಹಳಷ್ಟು ದೇಶಗಳು ಚಿಂತಿಸಬೇಕಾಗಿದೆ ಎಂಬುದು ನನ್ನ ಅಭಿಪ್ರಾಯ. ಹೀಗೆಂದು ಓವನ್ ಎಲ್. ಸರ್ಸ್ ಅವರ 1993 ಮುಂಬೈ ಸರಣಿ ಸ್ಫೋಟವನ್ನು ವಿಶ್ಲೇಷಿಸಿದರು.
Published On - 8:00 am, Sun, 12 March 23