Renault: ಕೈಗರ್, ಕ್ವಿಡ್ ಮತ್ತು ಟ್ರೈಬರ್ ಅರ್ಬನ್ ನೈಟ್ ಲಿಮಿಟೆಡ್ ಎಡಿಷನ್ ಬಿಡುಗಡೆ

ರೆನಾಲ್ಟ್ ಇಂಡಿಯಾ ಕಂಪನಿಯು ಕೈಗರ್, ಕ್ವಿಡ್ ಮತ್ತು ಟ್ರೈಬರ್ ಕಾರುಗಳಲ್ಲಿ ಹೊಸದಾಗಿ ಅರ್ಬನ್ ನೈಟ್ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಿದೆ.

Renault: ಕೈಗರ್, ಕ್ವಿಡ್ ಮತ್ತು ಟ್ರೈಬರ್ ಅರ್ಬನ್ ನೈಟ್ ಲಿಮಿಟೆಡ್ ಎಡಿಷನ್ ಬಿಡುಗಡೆ
ಕೈಗರ್, ಕ್ವಿಡ್ ಮತ್ತು ಟ್ರೈಬರ್ ಅರ್ಬನ್ ನೈಟ್ ಲಿಮಿಟೆಡ್ ಎಡಿಷನ್ ಬಿಡುಗಡೆ
Praveen Sannamani

Updated on: Sep 03, 2023 | 7:54 PM

ಹೊಸ ಕಾರುಗಳ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ರೆನಾಲ್ಟ್ ಇಂಡಿಯಾ(Renult India) ಕಂಪನಿಯು ಕೈಗರ್, ಕ್ವಿಡ್ ಮತ್ತು ಟ್ರೈಬರ್ ಕಾರುಗಳಲ್ಲಿ ಹೊಸದಾಗಿ ಅರ್ಬನ್ ನೈಟ್ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಿದೆ. ಹೊಸ ಲಿಮಿಟೆಡ್ ಎಡಿಷನ್ ಕಾರುಗಳು ಟಾಪ್ ಎಂಡ್ ವೆರಿಯೆಂಟ್ ಆಧರಿಸಿ ಬಿಡುಗಡೆಯಾಗಿದ್ದು, ಬೆಲೆ ಕೂಡಾ ತುಸು ದುಬಾರಿಯಾಗಿರಲಿದೆ.

ಹೊಸ ಫೀಚರ್ಸ್ ಗಳೊಂದಿಗೆ ಆಕರ್ಷಕ ಬಣ್ಣದ ಆಯ್ಕೆ ಹೊಂದಿರುವ ಅರ್ಬನ್ ನೈಟ್ ಲಿಮಿಟೆಡ್ ಎಡಿಷನ್ ಕಾರುಗಳು ಸ್ಟ್ಯಾಂಡರ್ಡ್ ಕಾರಿನ ಟಾಪ್ ಎಂಡ್ ಮಾದರಿಗಿಂತ ರೂ. 7 ಸಾವಿರದಿಂದ ರೂ. 15 ಸಾವಿರದಷ್ಟು ದುಬಾರಿಯಾಗಿದ್ದು, ಕೆಲವೇ ಕೆಲವು ಯುನಿಟ್ ಗಳು ಮಾತ್ರ ಖರೀದಿಗೆ ಲಭ್ಯವಿರಲಿವೆ.

ರೆನಾಲ್ಟ್ ಕಂಪನಿಯ ಮಾಹಿತಿ ಪ್ರಕಾರ ಪ್ರತಿ ಕಾರು ಮಾದರಿಯಲ್ಲಿ 300 ಯುನಿಟ್ ಲಿಮಿಟೆಡ್ ಎಡಿಷನ್ ಖರೀದಿಗೆ ಲಭ್ಯವಿರಲಿದ್ದು, ಬ್ಲ್ಯಾಕ್ ಬಣ್ಣದೊಂದಿಗೆ ಫ್ರಂಟ್ ಅಂಡ್ ರಿಯರ್ ಬಂಪರ್, ಬೂಟ್ ಲಿಡ್ ಮತ್ತು ಡೋರ್ ಗಳ ಮೇಲೆ ಸಿಲ್ವರ್ ಆಕ್ಸೆಂಟ್ ನೀಡಲಾಗಿದೆ. ಹಾಗೆಯೇ ಹೊಳೆಯುವ ಸ್ಕಫ್ ಪ್ಲೇಟ್ ಮತ್ತು ಪೆಡಲ್ ಲ್ಯಾಂಪ್ ನೀಡಲಾಗಿದ್ದು, ಸುರಕ್ಷತೆಗಾಗಿ ರಿಯರ್ ವ್ಯೂ ಮಿರರ್ ಹೊಂದಿರಲಿವೆ.

ಇದನ್ನೂ ಓದಿ: ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳಿವು!

ಇನ್ನು ಹೊಸ ಕಾರುಗಳ ಎಂಜಿನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ನೀಡಲಾಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವಂತೆ 1.0 ಲೀಟರ್ ಎನ್ಎ ಪೆಟ್ರೋಲ್ ಮತ್ತು 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿದೆ.

Praveen Sannamani

Praveen Sannamani is a enthusiast and passionate Journalist in Kannada Language. Automobile and Current affairs are the interested areas

Follow Us