ಭಾರತದಲ್ಲಿ ಇವಿ ಕಾರು ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ಆರಂಭಿಸಿದ ವಿನ್‌ಫಾಸ್ಟ್ ಇವಿ

|

Updated on: Jun 10, 2024 | 10:26 PM

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನಗುಣವಾಗಿ ಹಲವಾರು ಹೊಸ ಇವಿ ವಾಹನಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ವಿನ್​ಫಾಸ್ಟ್ ಎಲೆಕ್ಟ್ಕಿಕ್ ಕೂಡಾ ಭಾರತಕ್ಕೆ ಎಂಟ್ರಿ ನೀಡುತ್ತಿದ್ದು, ಹಲವಾರು ಇವಿ ಕಾರು ಬಿಡುಗಡೆ ಮಾಡುತ್ತಿದೆ.

ಭಾರತದಲ್ಲಿ ಇವಿ ಕಾರು ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ಆರಂಭಿಸಿದ ವಿನ್‌ಫಾಸ್ಟ್ ಇವಿ
ವಿನ್‌ಫಾಸ್ಟ್ ಇವಿ
Follow us on

ಜಾಗತಿಕ ಮಾರುಕಟ್ಟೆಯಲ್ಲಿ ವಿನೂತನ ಎಲೆಕ್ಟ್ರಿಕ್ ಕಾರುಗಳ ಮೂಲಕ ಹೊಸ ಸಂಚಲನ ಮೂಡಿಸುತ್ತಿರುವ ವಿನ್​ಫಾಸ್ಟ್ ಕಂಪನಿ ಇದೀಗ ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗುತ್ತಿದೆ. ವಿಯೆಟ್ನಾಂ ಮೂಲದ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿರುವ ವಿನ್​ಫಾಸ್ಟ್ ಮುಂಬರುವ ಕೆಲವೇ ದಿನಗಳಲ್ಲಿ ಹೊಸ ಹೊಸ ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಸಿದ್ದಪಡಿಸಿದೆ. ಭಾರತದಲ್ಲಿ ಇವಿ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕಾಗಿ ಈಗಾಗಲೇ ವಿವಿಧ ಹಂತದ ಮಾರುಕಟ್ಟೆ ಅಧ್ಯಯನ ನಡೆಸುತ್ತಿದ್ದು, ಇದೀಗ ಹೊಸ ಇವಿ ಕಾರುಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ವಿನ್​ಫಾಸ್ಟ್ ಕಂಪನಿಯು ಮಧ್ಯಮ ಕ್ರಮಾಂಕದ ಇವಿ ಕಾರುಗಳ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಭಾರತದಲ್ಲಿ ಮೊದಲ ಹಂತವಾಗಿ VF e34 ಎಲೆಕ್ಟ್ರಿಕ್ ಎಸ್ ಯುವಿ ಕಾರು ಬಿಡುಗಡೆ ಮಾಡುವ ಸುಳಿವು ನೀಡಿದೆ. ವಿನ್​ಫಾಸ್ಟ್ ಹೊಸ ಕಾರು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್ ಯುವಿ400 ಇವಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಇದು ವಿನೂತನ ಫೀಚರ್ಸ್ ಮತ್ತು ಪರ್ಫಾಮೆನ್ಸ್ ನೊಂದಿಗೆ 350 ರಿಂದ 400 ಕಿ.ಮೀ ಮೈಲೇಜ್ ಪ್ರೇರಿತ ಬ್ಯಾಟರಿ ಆಯ್ಕೆ ಪಡೆದುಕೊಳ್ಳಲಿದೆ.

ಹಾಗೆಯೇ VF e34 ಎಲೆಕ್ಟ್ರಿಕ್ ಕಾರು ಹಲವಾರು ವಿನೂತನ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾಗಲಿದ್ದು, ಸದ್ಯಕ್ಕೆ ಹೊಸ ಇವಿ ಕಾರುಗಳನ್ನು ವಿನ್​ಫಾಸ್ಟ್ ಕಂಪನಿಯು ಸಿಬಿಯು ಆಮದು ನೀತಿ ಅಡಿ ಮಾರಾಟಗೊಳಿಸಲು ನಿರ್ಧರಿಸಿದೆ. ಹೀಗಾಗಿ ಹೊಸ ಕಾರು ಈ ವರ್ಷಾಂತ್ಯಕ್ಕೆ ಇಲ್ಲವೇ 2025ರ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಬೆಲೆಯಲ್ಲೂ ಗಮನಸೆಳೆಯಲಿದೆ. ನಂತರವಷ್ಟೇ ಭಾರತದಲ್ಲಿ ಪೂರ್ಣಪ್ರಮಾಣದ ಕಾರ್ಯಾಚರಣೆ ನಡೆಸಲಿದ್ದು, ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಘೋಷಣೆ ಮಾಡುತ್ತಿದೆ. ಇದಕ್ಕಾಗಿ ವಿನ್​ಫಾಸ್ಟ್ ತಮಿಳುನಾಡು ಸರ್ಕಾರದೊಂದಿಗೆ ಈಗಾಗಲೇ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, ಹೊಸ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕ ನಿರ್ಮಾಣಕ್ಕೆ ಚಾಲನೆ ನೀಡಿದೆ.

ಮೊದಲ ಹಂತದ ಘಟಕದ ಮೂಲಕ ವಾರ್ಷಿಕವಾಗಿ 1.50 ಲಕ್ಷ ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವ ಗುರಿಹೊಂದಿದ್ದು, ಇದಕ್ಕಾಗಿ ಮೊದಲ ಹಂತದಲ್ಲಿಯೇ ರೂ. 4165 ಕೋಟಿ ಹೂಡಿಕೆ ಮಾಡುತ್ತಿದೆ. ಈ ಮೂಲಕ ಸ್ಥಳೀಯವಾಗಿ 3500 ಉದ್ಯೋಗಿಗಳನ್ನು ಸೃಷ್ಠಿಸುವ ಭರವಸೆ ನೀಡಿದ್ದು, ಈ ಮೂಲಕ ಕಂಪನಿಯು ಮಧ್ಯಮ ಕ್ರಮಾಂಕದ ಕಾರುಗಳು ಮಾತ್ರವಲ್ಲದೆ ಐಷಾರಾಮಿ ಇವಿ ಕಾರುಗಳನ್ನು ಸಹ ಪರಿಚಯಿಸುವ ಯೋಜನೆಯಲ್ಲಿದೆ.