ಯಾರು ತಮ್ಮ ಆದಾಯದ ಮೇಲೆ ಕಟ್ಟಬೇಕಾದ ವಾಸ್ತವ ತೆರಿಗೆಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿದ್ದಲ್ಲಿ ಆದಾಯ ತೆರಿಗೆ ಮರುಪಾವತಿ (Refund) ಕ್ಲೇಮ್ ಮಾಡುವುದಕ್ಕೆ ಅರ್ಹರಿರುತ್ತಾರೆ. ಟಿಡಿಎಸ್ ಹೆಚ್ಚಿನ ಮೊತ್ತವನ್ನು ಉದ್ಯೋಗದಾತರು ಕಡಿತಗೊಳಿಸಿದ್ದಲ್ಲಿ ಅಥವಾ ಠೇವಣಿ ಮಾಡಿದ ಮೊತ್ತದ ಮೇಲಿನ ಬಡ್ಡಿ ಆದಾಯಕ್ಕೆ ಹೆಚ್ಚಿನ ಟಿಡಿಎಸ್ ಕಡಿತ ಮಾಡಿದ್ದಲ್ಲಿ, ಹೆಚ್ಚಿನ ಮುಂಗಡ ತೆರಿಗೆ ಪಾವತಿ ಮುಂತಾದವನ್ನು ಮಾಡಿದ್ದಲ್ಲಿ ಈ ಆದಾಯ ತೆರಿಗೆ ರಿಟರ್ನ್ಸ್ ಅಥವಾ ಐಟಿಆರ್ ರೀಫಂಡ್ ಅನ್ನು ಕ್ಲೇಮ್ ಮಾಡಬಹುದು.
ವ್ಯಕ್ತಿಯು ಆದಾಯ ತೆರಿಗೆ ಮರುಪಾವತಿಗೆ ಹೇಗೆ ಅರ್ಹರಾಗುತ್ತಾರೆ ಎಂಬುದರ ಕುರಿತು ಮಾತನಾಡಿರುವ ಸೆಬಿ ನೋಂದಾಯಿತ ತೆರಿಗೆ ಮತ್ತು ಹೂಡಿಕೆ ತಜ್ಞರು, “ಆದಾಯ ತೆರಿಗೆ ಮರುಪಾವತಿಯನ್ನು ಭರ್ತಿ ಮಾಡುವ ಮತ್ತು ಕ್ಲೇಮ್ ಮಾಡುವ ಯಾವುದೇ ಐಟಿಆರ್ ಫಾರ್ಮ್ ಇಲ್ಲ. ಆದಾಯ ತೆರಿಗೆ ಪಾವತಿದಾರರು ಐಟಿಆರ್ ಅನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು ಮತ್ತು ಒಬ್ಬರ ಐಟಿಆರ್ ಮರುಪಾವತಿಗೆ ಸಂಪೂರ್ಣ ಬಡ್ಡಿಯನ್ನು ಪಡೆಯಬೇಕು. ಆದಾಯ ತೆರಿಗೆ ಇಲಾಖೆಯು ಮೌಲ್ಯಮಾಪನ ವರ್ಷಕ್ಕೆ ತನ್ನ ಆದಾಯವನ್ನು ಪರಿಶೀಲಿಸುತ್ತದೆ ಮತ್ತು ಯಾವುದೇ ಹೆಚ್ಚುವರಿ ಟಿಡಿಎಸ್ ಕಡಿತ ಅಥವಾ ಹೆಚ್ಚಿನ ಮುಂಗಡ ತೆರಿಗೆ ಪಾವತಿಯನ್ನು ಕಂಡರೆ, ಅದು ಐಟಿಆರ್ ಮರುಪಾವತಿಯ ಮೂಲಕ ತೆರಿಗೆದಾರರ ಹೆಚ್ಚುವರಿ ಪಾವತಿಯನ್ನು ತಾನಾಗಿಯೇ ಮರುಪಾವತಿ ಮಾಡುತ್ತದೆ. ವಾರ್ಷಿಕ ಆದಾಯ ರು. 2.5 ಲಕ್ಷಕ್ಕಿಂತ ಕಡಿಮೆ ಇರುವಾಗಲೂ ಆದಾಯ ಗಳಿಸುವ ವ್ಯಕ್ತಿ ನೀಡಿದ ನಿಗದಿತ ದಿನಾಂಕದೊಳಗೆ ಐಟಿಆರ್ ಸಲ್ಲಿಸುವುದು ಮತ್ತು ಮರುಪಾವತಿ ಪಡೆಯುವುದು ಮುಖ್ಯವಾಗಿದೆ.” ಎಂದು ಹೇಳಿದ್ದಾರೆ.
ಆದ್ದರಿಂದ, ಐಟಿಆರ್ ಸಲ್ಲಿಸಿದ ನಂತರ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ಲಾಗ್ ಇನ್ ಮಾಡುವ ಮೂಲಕ ಐಟಿಆರ್ ಮರುಪಾವತಿಯನ್ನು ಪರಿಶೀಲಿಸುತ್ತಿರಬೇಕು. ಈಗ ಹೊಸ ಆದಾಯ ತೆರಿಗೆ ಪೋರ್ಟಲ್ ಪ್ರಾರಂಭವಾದ ನಂತರ, ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ – incometax.gov.in/iec/foportalನಲ್ಲಿ ಲಾಗಿನ್ ಮಾಡಬಹುದು ಮತ್ತು ಆದಾಯ ತೆರಿಗೆ ಮರುಪಾವತಿ ಸ್ಥಿತಿಯನ್ನು ಪರಿಶೀಲಿಸಬಹುದು.
ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಐಟಿಆರ್ ಮರುಪಾವತಿ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?
ಈ ಮೇಲೆ ತಿಳಿಸಿದಂತೆ ಆದಾಯ ತೆರಿಗೆ ಪಾವತಿದಾರರು ಹೊಸ ಆದಾಯದ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಾಗಿನ್ ಮಾಡಬೇಕಾಗುತ್ತದೆ ಮತ್ತು ಹಂತ ಹಂತವಾಗಿ ಕೆಳಗೆ ತಿಳಿಸಲಾದ ವಿಧಾನವವನ್ನು ಅನುಸರಿಸಿ:
1] ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಾಗಿನ್ ಮಾಡಿ – incometax.gov.in/iec/foportal;
2] ನಿಮ್ಮ ಐಡಿ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಬಳಸಿ ಲಾಗಿನ್ ಮಾಡಿ;
3] “view ರಿಟರ್ನ್ಸ್ / ಫಾರ್ಮ್‌ಗಳನ್ನು” ಆಯ್ಕೆ ಮಾಡಿ.
4] ಆ ನಂತರ ಡ್ರಾಪ್ ಡೌನ್ ಮೆನುವಿನಿಂದ ‘ಆದಾಯ ತೆರಿಗೆ ರಿಟರ್ನ್ಸ್’ ಆಯ್ಕೆ ಮಾಡಿ;
5] ಸಂಬಂಧಿತ ಆದಾಯ ತೆರಿಗೆ ಅಸೆಸ್ಮೆಂಟ್ ವರ್ಷವನ್ನು ನಮೂದಿಸಿ;
6] ‘ಸಲ್ಲಿಸು’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ; ಮತ್ತು
7] ಡ್ರಾಪ್ ಡೌನ್ ಮೆನುವಿನಿಂದ ಸ್ವೀಕೃತಿ ಸಂಖ್ಯೆಯನ್ನು ಆಯ್ಕೆ ಮಾಡಿ.
ಇದನ್ನೂ ಓದಿ: Real Estate New TDS Rules: ಆಸ್ತಿ ವಹಿವಾಟುಗಳಿಗೆ ಹೊಸ ಟಿಡಿಎಸ್ ನಿಯಮ: ನಿಮಗೆ ಗೊತ್ತಿರಬೇಕಾದ ಸಂಗತಿಗಳಿವು