[lazy-load-videos-and-sticky-control id=”vDrXdvYPzPs”]
ಬೆಂಗಳೂರು: ಪೊಲೀಸರ ಯಶಸ್ವಿ ಕಾರ್ಯಾಚರಣೆಯಿಂದ ಬೆಂಗಳೂರಿನಲ್ಲಿ ನಟೋರಿಯಸ್ ಎಟಿಎಂ ಕಳ್ಳರ ಬಂಧನವಾಗಿದೆ. ಸಮರ್ ಜ್ಯೋತ್ ಸಿಂಗ್, ಜಾಫರ್ ಸಾಧಿಕ್, ಯಾಹ್ಯಾ ಬಂಧಿತ ಆರೋಪಿಗಳು.
ಇವರು ಇದೇ ತಿಂಗಳ 10ನೇ ತಾರೀಖು ಜಾಲಹಳ್ಳಿಯ ಮುಖ್ಯರಸ್ತೆಯಲ್ಲಿರುವ ಎಟಿಎಂ ದೋಚಿದ್ದರು. ಸಿಸಿಟಿವಿಗೆ ಬ್ಲಾಕ್ ಸ್ಪ್ರೇ ಹೊಡೆದು ಎಟಿಎಂ ಗ್ಯಾಸ್ ಕಟರ್ ಬಳಸಿ ಹೊಡೆದು ಎಟಿಎಂನಲ್ಲಿದ್ದ 27 ಲಕ್ಷ ರೂ. ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಬಲೆ ಬೀಸಿದ ಖಾಕಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 15 ಲಕ್ಷ ರೂ ನಗದು, ಎರಡು ಬೈಕ್, ಒಂದು ಕಾರ್, ಮೂರು ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ಇವರು ಕುಖ್ಯಾತ ಎಟಿಎಂ ರಾಬರ್ಸ್:
ಇನ್ನು ಈ ಆರೋಪಿಗಳು ಕುಖ್ಯಾತ ಎಟಿಎಂ ರಾಬರ್ಸ್. ಈ ಮೊದಲೇ ಬೆಂಗಳೂರಿನಲ್ಲಿ ಹಲವು ಬಾರಿ ಎಟಿಎಂನಲ್ಲಿನ ಹಣವನ್ನು ಕಳ್ಳತನ ಮಾಡಿದ್ದಾರೆ. ಅಲ್ಲದೆ ಜೈಲಿಗೂ ಹೋಗಿ ಬಂದಿದ್ದಾರೆ. ಸಮರ್ ಜ್ಯೋತ್ ಸಿಂಗ್ ಈ ಹಿಂದೆ ಪರಪ್ಪನ ಅಗ್ರಹಾರ, ಬ್ಯಾಟರಾಯನಪುರ ಸೇರಿದಂತೆ ಹಲವು ಕಡೆ ಎಟಿಎಂ ರಾಬರಿ ಮಾಡಿ ಬ್ಯಾಟರಾಯನಪುರ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ. ಜೈಲುವಾಸ ಬಳಿಕ ಬಿಡುಗಡೆಯಾಗಿ ಮತ್ತದೇ ಕೃತ್ಯದಲ್ಲಿ ಭಾಗಿಯಾಗಿದ್ದ.
Published On - 1:43 pm, Wed, 26 August 20