ವಿಜಯನಗರ: ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎಂದು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪಾಗಲ್ ಪ್ರೇಮಿ

ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ದುಗ್ಗಮ್ಮ ದೇವಿ ಜಾತ್ರೆಯಲ್ಲಿ ಪ್ರೀತಿಸಿದವಳು ಸಿಗಲಿಲ್ಲ ಎಂದು ಆಕೆಯನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.

ವಿಜಯನಗರ: ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎಂದು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪಾಗಲ್ ಪ್ರೇಮಿ
ಆರೋಪಿ ಮೂಕಪ್ಪನವರ ಹನುಮಂತ, ಮೃತ ಮಹಿಳೆ ಪ್ರತಿಭಾ

Updated on: Mar 07, 2023 | 8:20 AM

ವಿಜಯನಗರ: ಪ್ರೀತಿಸಿದವಳು ಸಿಗಲಿಲ್ಲ ಎಂದು ಆಕೆಯನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ದುಗ್ಗಮ್ಮ ದೇವಿ ಜಾತ್ರೆಯಲ್ಲಿ ನಡೆದಿದೆ. ಆರೋಪಿ ಮೂಕಪ್ಪನವರ ಹನುಮಂತನ ಎಂಬಾತ ಪ್ರತಿಭಾಳನ್ನ ಪ್ರೀತಿಸುವುದಾಗಿ ಹೇಳಿಕೊಂಡು ಗ್ರಾಮದಲ್ಲಿ ಸುತ್ತುತ್ತಿದ್ದ. ಇದಾದ ಬಳಿಕ ಪ್ರತಿಭಾಳನ್ನ ರಾಣೆಬೆನ್ನೂರಿನ‌ ನಾಗರಾಜ್ ಎಂಬುವವರ ಜೊತೆ ಮದುವೆ ಮಾಡಿಕೊಡಲಾಗಿತ್ತು. ಜೊತೆಗೆ ಆಕೆಗೆ ಓರ್ವ ಗಂಡು ಮಗು ಸಹ‌ ಇದೆ.

ಮದುವೆಯಾದ ಬಳಿಕ ಚೆನ್ನಾಗಿ ಜೀವನ ನಡೆಸುತ್ತಿದ್ದ ಪ್ರತಿಭಾ ಚಿಕ್ಕಮ್ಮನ ಊರಿಗೆ ಜಾತ್ರೆಗೆ ಬಂದಿದ್ದಳು. ಇನ್ನೇನು ತನ್ನೂರಿಗೆ ಹೋಗಬೇಕು ಎನ್ನವಷ್ಟರಲ್ಲಿ ಪಾಗಲ್ ಪ್ರೇಮಿ ಹನುಮಂತ ಆಕೆಯನ್ನ ನಡು ರಸ್ತೆಯಲ್ಲಿ ಮನ ಬಂದಂತೆ ದೇಹದ ಬಹುತೇಕ‌ ಭಾಗಳಿಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರಗಾಯಗೊಂಡಿದ್ದ ಮಹಿಳೆಯನ್ನ ಆಸ್ಪತ್ರೆಗೆ ದಾಖಲು ಮಾಡುವ ಮಾರ್ಗಮಧ್ಯಯೇ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. ಈ ಕುರಿತು ಹಲವಾಗಲು‌ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದ್ದು, ಆರೋಪಿ ಮೂಕಪ್ಪನವರ ಹನುಮಂತನನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಬೆಳಗಾವಿ: ರಾತ್ರಿ ಮನೆಯಿಂದ ಆಚೆ ಹೋದವ ಬರ್ಬರವಾಗಿ ಕೊಲೆಯಾದ, ಆಂಟಿಗಾಗಿ ಬಿತ್ತು ಹೆಣ

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ

ಹುಬ್ಬಳ್ಳಿ: ನಗರದ ಯಲ್ಲಾಪೂರ ಓಣಿಯ ಮೆಹನೂಬ್ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಮೆಡಿಕಲ್ ಶಾಪ್ ಬಂದ್ ಮಾಡಿ ಮನೆಗೆ ಹೋಗುವಾಗ ಮೈನು ಎಂಬುವವರ ಮೇಲೆ ವಾಹನದಲ್ಲಿ ಬಂದು ಹಲ್ಲೆ ಮಾಡಲಾಗಿದೆ. ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಹಲ್ಲೆ ಮಾಡಿದ ಗ್ಯಾಂಗ್​ಗೆ ಬಲೆ ಬಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us