UPSC 2023: ನಾಗರಿಕ ಸೇವೆಗಳ ಪರೀಕ್ಷೆ ನೋಂದಣಿಗೆ ಇಂದೇ ಕೊನೆ ದಿನಾಂಕ: ನೋಂದಣಿ ಪ್ರಕ್ರಿಯೆ ಹೀಗಿದೆ

|

Updated on: Feb 21, 2023 | 6:02 PM

ಅರ್ಹ ಅಭ್ಯರ್ಥಿಗಳಿಗೆ ಪರೀಕ್ಷೆ ಪ್ರಾರಂಭವಾಗುವ ಮೂರು ವಾರಗಳ ಮೊದಲು ಇ-ಅಡ್ಮಿಟ್ ಕಾರ್ಡ್ ಅನ್ನು ನೀಡಲಾ ಗುತ್ತದೆ. ಇ-ಅಡ್ಮಿಟ್ ಕಾರ್ಡ್ ಅನ್ನು ಅಭ್ಯರ್ಥಿಗಳು ಡೌನ್‌ಲೋಡ್ ಮಾಡಲು UPSC ವೆಬ್‌ಸೈಟ್‌ ಅನ್ನು upsconline.nic.in ಪರಿಶೀಲಿಸಬೇಕು. UPSC ಪ್ರವೇಶ ಪತ್ರಗಳನ್ನು ಅಂಚೆ ಮೂಲಕ ಕಳುಹಿಸುವುದಿಲ್ಲ.

UPSC 2023: ನಾಗರಿಕ ಸೇವೆಗಳ ಪರೀಕ್ಷೆ ನೋಂದಣಿಗೆ ಇಂದೇ ಕೊನೆ ದಿನಾಂಕ: ನೋಂದಣಿ ಪ್ರಕ್ರಿಯೆ ಹೀಗಿದೆ
ಯುಪಿಎಸ್​ಸಿ 2023
Image Credit source: India TV
Follow us on

UPSC ನಾಗರಿಕ ಸೇವೆಗಳ ಪರೀಕ್ಷೆ 2023 ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಂದು (ಫೆಬ್ರವರಿ 21), ಸಂಜೆ 6:00 ರವರೆಗೆ ಆನ್‌ಲೈನ್ ಅರ್ಜಿಗಳನ್ನು ಭರ್ತಿ ಮಾಡಬಹುದು.ಅರ್ಹ ಅಭ್ಯರ್ಥಿಗಳಿಗೆ ಪರೀಕ್ಷೆ ಪ್ರಾರಂಭವಾಗುವ ಮೂರು ವಾರಗಳ ಮೊದಲು ಇ-ಅಡ್ಮಿಟ್ ಕಾರ್ಡ್ ಅನ್ನು ನೀಡಲಾ ಗುತ್ತದೆ. ಇ-ಅಡ್ಮಿಟ್ ಕಾರ್ಡ್ ಅನ್ನು ಅಭ್ಯರ್ಥಿಗಳು ಡೌನ್‌ಲೋಡ್ ಮಾಡಲು UPSC ವೆಬ್‌ಸೈಟ್‌ ಅನ್ನು upsconline.nic.in ಪರಿಶೀಲಿಸಬೇಕು. UPSC ಪ್ರವೇಶ ಪತ್ರಗಳನ್ನು ಅಂಚೆ ಮೂಲಕ ಕಳುಹಿಸುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು upsconline.nic.in ವೆಬ್‌ಸೈಟ್ ಬಳಸಿಕೊಂಡು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿದಾರರು ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಒನ್ ಟೈಮ್ ರಿಜಿಸ್ಟ್ರೇಶನ್ (OTR) ಪ್ಲಾಟ್‌ಫಾರ್ಮ್‌ನಲ್ಲಿ ಮೊದಲು ಸ್ವತಃ ನೋಂದಾಯಿಸಿಕೊಳ್ಳುವುದು ಅತ್ಯಗತ್ಯ ಮತ್ತು ನಂತರ ಪರೀಕ್ಷೆಗಾಗಿ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಲು ಅವಕಾಶವಿರುತ್ತದೆ. OTR ಅನ್ನು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ನೋಂದಾಯಿಸಬೇಕು. ಇದನ್ನು ವರ್ಷದ ಯಾವುದೇ ಸಮಯದಲ್ಲಿ ಮಾಡಬಹುದು. ಅಭ್ಯರ್ಥಿಯು ಈಗಾಗಲೇ ನೋಂದಾಯಿಸಿಕೊಂಡಿದ್ದರೆ, ಪರೀಕ್ಷೆಗಾಗಿ ಆನ್‌ಲೈನ್ ಅರ್ಜಿಯನ್ನು ನೇರವಾಗಿ ಭರ್ತಿ ಮಾಡಬಹುದು.

OTR ಪ್ರೊಫೈಲ್‌ನಲ್ಲಿ ಬದಲಾವಣೆ ಮಾಡುವುದು ಹೇಗೆ?

OTR ಪ್ರೊಫೈಲ್‌ನಲ್ಲಿ ಬದಲಾವಣೆಯನ್ನು ಮಾಡಲು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಅವಕಾಶವಿರುತ್ತದೆ. ನೀವು ಯಾವ ಪರೀಕ್ಷೆಗೆ ಅರ್ಜಿ ಸಲ್ಲಿಸಿರುತ್ತೀರೋ ಆ ಪರೀಕ್ಷೆಯ ಅರ್ಜಿಯ ಮುಕ್ತಾಯ ದಿನಾಂಕದ ನಂತರ, 7 ದಿನಗಳ ಅವಧಿ ಮುಗಿಯುವವರೆಗೆ OTR ಪ್ರೊಫೈಲ್‌ನಲ್ಲಿ ಬದಲಾವಣೆ ಮಾಡಬಹುದು. ಒಂದು ವೇಳೆ, OTR ನೋಂದಣಿಯ ನಂತರ UPSC 2023 ಅಭ್ಯರ್ಥಿಯ ಮೊದಲ ಪರೀಕ್ಷೆಯಾಗಿದ್ದಲ್ಲಿ OTR ಅನ್ನು ಮಾರ್ಪಡಿಸುವ ಕೊನೆಯ ದಿನಾಂಕ 28.02.2023 ಆಗಿರುತ್ತದೆ.

ಅರ್ಜಿ ನಮೂನೆಯಲ್ಲಿ ಬದಲಾವಣೆ (OTR ಪ್ರೊಫೈಲ್ ಹೊರತುಪಡಿಸಿ)

ಈ ಪರೀಕ್ಷೆಯ ಅರ್ಜಿಯ ವಿಂಡೋವನ್ನು ಮುಚ್ಚುವ ಮರುದಿನದಿಂದ ಅಂದರೆ ನಾಳೆಯಿಂದ (ಫೆಬ್ರವರಿ 22) ಯಾವುದೇ ಕ್ಷೇತ್ರ(ಗಳಲ್ಲಿ) ತಿದ್ದುಪಡಿ(ಗಳನ್ನು) ಮಾಡುವ ಸೌಲಭ್ಯವನ್ನು ನೀಡಲು ಆಯೋಗವು ನಿರ್ಧರಿಸಿದೆ. 22.02.2023 ರಿಂದ 28.02.2023 ಅವಧಿಯಲ್ಲಿ ಅಭ್ಯರ್ಥಿಯು ತನ್ನ ಪರೀಕ್ಷಾ ಅರ್ಜಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲು ಬಯಸಿದರೆ, OTR ಪ್ಲಾಟ್‌ಫಾರ್ಮ್‌ಗೆ ಲಾಗಿನ್ ಆದ ಬಳಿಕ ಬದಲಾವಣೆಗೆ ಅವಕಾಶವಿರುತ್ತದೆ.

ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಿದ ನಂತರ ಹಿಂಪಡೆಯಲು ಅವಕಾಶವಿರುವುದಿಲ್ಲ.

ಅಭ್ಯರ್ಥಿಗಳು ಒಂದು ಫೋಟೋ ಗುರುತಿನ ಚೀಟಿಯ ವಿವರಗಳನ್ನು ಹೊಂದಿರಬೇಕು. ಉದಾಹರಣೆಗೆ ಆಧಾರ್ ಕಾರ್ಡ್/ಮತದಾರ ಕಾರ್ಡ್/ಪ್ಯಾನ್ ಕಾರ್ಡ್/ಪಾಸ್‌ಪೋರ್ಟ್/ಚಾಲನಾ ಪರವಾನಗಿ/ರಾಜ್ಯ/ಕೇಂದ್ರ ಸರ್ಕಾರದಿಂದ ನೀಡಲಾದ ಯಾವುದೇ ಇತರ ಫೋಟೋ ಗುರುತಿನ ಚೀಟಿ ಇದ್ದಾರೆ ಸಾಕು.

ಅಭ್ಯರ್ಥಿಗಳು ಒಂದು ಫೋಟೋ ಗುರುತಿನ ಚೀಟಿಯ ವಿವರಗಳನ್ನು ಹೊಂದಿರಬೇಕು. ಉದಾಹರಣೆಗೆ ಆಧಾರ್ ಕಾರ್ಡ್/ಮತದಾರ ಕಾರ್ಡ್/ಪ್ಯಾನ್ ಕಾರ್ಡ್/ಪಾಸ್‌ಪೋರ್ಟ್/ಚಾಲನಾ ಪರವಾನಗಿ/ರಾಜ್ಯ/ಕೇಂದ್ರ ಸರ್ಕಾರದಿಂದ ನೀಡಲಾದ ಯಾವುದೇ ಇತರ ಫೋಟೋ ಗುರುತಿನ ಚೀಟಿ ಇದ್ದಾರೆ ಸಾಕು.

ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ಫೋಟೋ ಐಡಿ ಕಾರ್ಡ್‌ನ ವಿವರಗಳನ್ನು ಅಭ್ಯರ್ಥಿಯು ಒದಗಿಸಬೇಕಾಗುತ್ತದೆ. ಫೋಟೋ ID ಕಾರ್ಡ್ ಅನ್ನು ಭವಿಷ್ಯದ ಎಲ್ಲಾ ಉಲ್ಲೇಖಗಳಿಗಾಗಿ ಬಳಸಲಾಗುತ್ತದೆ ಮತ್ತು ಪರೀಕ್ಷೆ/ವ್ಯಕ್ತಿತ್ವ ಪರೀಕ್ಷೆಗೆ ಹಾಜರಾಗುವಾಗ ಅಭ್ಯರ್ಥಿಯು ಈ ಫೋಟೋ ID ಕಾರ್ಡ್ ಅನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು.

ತಪ್ಪು ಉತ್ತರಗಳಿಗೆ ದಂಡ: ಆಬ್ಜೆಕ್ಟಿವ್ ಟೈಪ್ ಪ್ರಶ್ನೆ ಪತ್ರಿಕೆಗಳಲ್ಲಿ ಅಭ್ಯರ್ಥಿಯು ಗುರುತಿಸಿದ ತಪ್ಪು ಉತ್ತರಗಳಿಗೆ ಪೆನಾಲ್ಟಿ (ಋಣಾತ್ಮಕ ಗುರುತು) ಇರುತ್ತದೆ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು.

ಅಭ್ಯರ್ಥಿಗಳಿಗೆ ಸೂಚನೆ

ತಮ್ಮ ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದೇ ಮಾರ್ಗದರ್ಶನ/ಮಾಹಿತಿ/ಸ್ಪಷ್ಟೀಕರಣದ ಸಂದರ್ಭದಲ್ಲಿ ಅಭ್ಯರ್ಥಿಗಳು ಯುಪಿಎಸ್‌ಸಿ ಕ್ಯಾಂಪಸ್‌ನ ಗೇಟ್ ‘ಸಿ’ ಬಳಿ ಇರುವ ಫೆಸಿಲಿಟೇಶನ್ ಕೌಂಟರ್ ಅನ್ನು ವೈಯಕ್ತಿಕವಾಗಿ ಅಥವಾ ದೂರವಾಣಿ ಸಂಖ್ಯೆ 011-23385271/011-23381125/011-230985 ಮೂಲಕ ಸಂಪರ್ಕಿಸಬಹುದು. ಕೆಲಸದ ದಿನಗಳಲ್ಲಿ 10.00 ರಿಂದ 5.00 ಗಂಟೆಗಳ ನಡುವೆ ಸಂಪರ್ಕಿಸಬಹುದು.

ಇದನ್ನೂ ಓದಿ: SSLC, PUC ಎಕ್ಸಾಂ ಕುರಿತು ಮಹತ್ವದ ಸಭೆ: ಇದೇ ಮೊದಲ ಬಾರಿಗೆ ಪಿಯುಸಿಗೆ ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳು

ಮೊಬೈಲ್ ಫೋನ್ ನಿಷೇಧ

ಯಾವುದೇ ಮೊಬೈಲ್ ಫೋನ್ (ಸ್ವಿಚ್ ಆಫ್ ಮೋಡ್‌ನಲ್ಲಿಯೂ ಸಹ), ಪೇಜರ್, ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು, ಪ್ರೊಗ್ರಾಮೆಬಲ್ ಸಾಧನ, ಪೆನ್ ಡ್ರೈವ್, ಸ್ಮಾರ್ಟ್ ವಾಚ್‌ಗಳು ಇತ್ಯಾದಿ ಮಾಧ್ಯಮ ಅಥವಾ ಕ್ಯಾಮೆರಾ, ಬ್ಲೂ ಟೂತ್ ಸಾಧನಗಳು, ಯಾವುದೇ ಇತರ ಉಪಕರಣಗಳು ಅಥವಾ ಸಂಬಂಧಿತ ಪರಿಕರಗಳ ಬಳಕೆಯನ್ನು ನಿಷೇಧಿಸಲಾಗಿದೆ. ಪರೀಕ್ಷೆಯ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಮೋಡ್ ನಲ್ಲಿದ್ದರೂ ಅಧಿಕಾರಿಗಳು ನಿಮ್ಮ ಮೇಲೆ ಕತ್ತಿನ ಕ್ರಮ ತೆಗೆದುಕೊಳ್ಳಬಹುದು. ಈ ಸೂಚನೆಗಳ ಯಾವುದೇ ಉಲ್ಲಂಘನೆ ಮಾಡಿದಲ್ಲಿ ನಿಮ್ಮನ್ನು ಮುಂದಿನ ಯಾವುದೇ ಪರೀಕ್ಷೆಗಳನ್ನು ಬರೆಯದಂತೆ ತಡೆಯುವ ಎಲ್ಲ ಹಕ್ಕು ಅಧಿಕಾರಿಗಳಿಗಿರುತ್ತದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Tue, 21 February 23