ಶಿವಮೊಗ್ಗದ ರಾಗಿಗುಡ್ಡದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು (ಮಾರ್ಚ್ 24) ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ (Rashtriya Raksha University)) ಮೂರನೇ ಕ್ಯಾಂಪಸ್ ಅನ್ನು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಎಂಟು ಎಕರೆ ಜಾಗದಲ್ಲಿ ಕ್ಯಾಂಪಸ್ ಸ್ಥಾಪಿಸಲಾಗಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವಿಶ್ವವಿದ್ಯಾನಿಲಯ ಕ್ಯಾಂಪಸ್ ಉದ್ಯೋಗ ಹುಡುಕುತ್ತಿರುವ ಸಾವಿರಾರು ಯುವಕರಿಗೆ ಸಹಾಯ ಮಾಡುತ್ತದೆ. ರಾಜ್ಯದ ಆಂತರಿಕ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲಾಗಿದೆ
ವಿದ್ಯಾರ್ಥಿಗಳಿಗೆ ಪೊಲೀಸ್ ವಿಜ್ಞಾನದಲ್ಲಿ ಡಿಪ್ಲೊಮಾ, ಸೈಬರ್ ಭದ್ರತೆ ಮತ್ತು ಸೈಬರ್ ಕಾನೂನಿನಲ್ಲಿ ಪಿಜಿ ಡಿಪ್ಲೊಮಾ, ಕಾರ್ಪೊರೇಟ್ ಭದ್ರತಾ ನಿರ್ವಹಣೆಯಲ್ಲಿ ಮೂಲ ಕೋರ್ಸ್, ಕರಾವಳಿ ಭದ್ರತೆ ಮತ್ತು ಕಾನೂನು ಜಾರಿಯಲ್ಲಿ ಪ್ರಮಾಣಪತ್ರ ಕೋರ್ಸ್, ರಸ್ತೆ ಸಂಚಾರ ಸುರಕ್ಷತೆ ನಿರ್ವಹಣೆಯಲ್ಲಿ ಎರಡು ವಾರಗಳ ಪ್ರಮಾಣಪತ್ರ ಕಾರ್ಯಕ್ರಮ ಹೀಗೆ ಹತ್ತು ಹಲವು ಕೋರ್ಸ್‌ಗಳನ್ನು ನೀಡುತ್ತದೆ. ಈ ವರ್ಷದ ಆಗಸ್ಟ್‌ನಲ್ಲಿ ಈ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು. ರಾಜ್ಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಗತ್ಯವಿರುವ ತರಬೇತಿ ಮತ್ತು ಸಂಶೋಧನೆಗೆ ಕ್ಯಾಂಪಸ್ ಸಹಾಯ ಮಾಡುತ್ತದೆ.
ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯವನ್ನು ಮೊದಲು ರಕ್ಷಾ ಶಕ್ತಿ ವಿಶ್ವವಿದ್ಯಾನಿಲಯ ಎಂದು ಕರೆಯಲಾಗಿತ್ತು. ರಾಷ್ಟೀಯ ಶಕ್ತಿ ವಿಶ್ವವಿದ್ಯಾಲಯ 2009 ರಲ್ಲಿ ಗುಜರಾತ್ ಸರ್ಕಾರವು ಸ್ಥಾಪಿಸಿತು. ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯವು ಗುಜರಾತ್‌ನ ಗಾಂಧಿನಗರದಲ್ಲಿರುವ ಭಾರತದ ಮೊದಲ ಆಂತರಿಕ ಭದ್ರತಾ ಸಂಸ್ಥೆಯಾಗಿದೆ. ಸಂಸತ್ತಿನ ಕಾಯಿದೆಯ ಮೂಲಕ ಈ ವಿಶ್ವವಿದ್ಯಾಲಯ್ವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಎಂದು ಗುರುತಿಸಲಾಗಿದೆ.
ಗುಜರಾತ್ನಲ್ಲಿರುವ ರಾಷ್ಟೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸೆರಾಲ್ವು ಅರ್ಹತಾ ಮಾನದಂಡಗಳು ಕೆಳಗೆ ನೀಡಲಾಗಿದೆ. ಇದೇ ಮಾದರಿಯನ್ನು ಶಿವಮೊಗ್ಗದಲ್ಲೂ ಅನುಸರಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಜುಲೈನಲ್ಲಿ ನೀಟ್ ಪಿಜಿ 2023 ಕೌನ್ಸೆಲಿಂಗ್ ಸಾಧ್ಯತೆ; ಸ್ಕೋರ್ ಕಾರ್ಡ್ ಮಾರ್ಚ್ 25 ಕ್ಕೆ ಬಿಡುಗಡೆ
ಅರ್ಹತಾ ಮಾನದಂಡಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅಲ್ಲಿ ಕ್ಲಿಕ್ ಮಾಡಿ
ರಾಷ್ಟೀಯ ರಕ್ಷಾ ವಿಶ್ವವಿದ್ಯಾಲಯ ರೂ. 50,000 ದಿಂದ ರೂ. 2,50,000 ವರೆಗೂ ವಿವಿಧ ಉತ್ತಮ ಮಟ್ಟದ ಕೋರ್ಸ್ಗಳನ್ನೂ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಿದೆ. ಹಾಸ್ಟೆಲ್ ಅಲ್ಲಿ ಇರಲು ಬಯಸುವ ವಿದ್ಯಾರ್ಥಿಗಳು ಒಂದು ವರ್ಷಕ್ಕೆ ರೂ. 18,000 ಪಾವತಿಸಬೇಕಾಗುತ್ತದೆ.
ಇಲ್ಲಿ ಕಾಲೇಜು ಶುಲ್ಕದ pdf ಅನ್ನು ಪರಿಶೀಲಿಸಿ
“ನಮ್ಮ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಇನ್ಫೋಸಿಸ್ ಮತ್ತು ಮೈಕ್ರೋಸಾಫ್ಟ್‌ನಂತಹ ಕಂಪನಿಗಳಲ್ಲಿ ಇಂಟರ್ನ್ಶಿಪ್ ಮಾಡುವ ಅವಕಾಶ ಸಿಕ್ಕಿದೆ. ಕೆಲವರು ವಿವಿಧ ಪ್ರದೇಶಗಳ ಸೈಬರ್ ಸೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅತ್ಯಧಿಕ ಸ್ಟೈಫಂಡ್ ಪ್ಯಾಕೇಜ್ 12 LPA ಆಗಿದೆ. ಕ್ಯಾಂಪಸ್‌ನಲ್ಲಿರಲಿ ಅಥವಾ ಕ್ಯಾಂಪಸ್‌ನಿಂದ ಹೊರಗಿರಲಿ ಎಲ್ಲ ವಿದ್ಯಾರ್ಥಿಗಳಿಗೆ ಪ್ಲೇಸ್‌ಮೆಂಟ್ ಸಿಕ್ಕಿದೆ” ಎಂದು ಗುಜರಾತಿನ ರಾಷ್ಟೀಯ ರಕ್ಷಾ ವಿದ್ಯಾಲಯದ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.
Published On - 12:24 pm, Fri, 24 March 23