ರೈಲ್ವೆ ಸಚಿವಾಲಯವು ಡೆಪ್ಯುಟೇಶನ್ ಆಧಾರದ ಮೇಲೆ 12 ಸಹಾಯಕ ಪ್ರೋಗ್ರಾಮರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ರೈಲ್ವೆ ಸಚಿವಾಲಯದ ನೇಮಕಾತಿ 2023 ರ ಅಧಿಕೃತ ಅಧಿಸೂಚನೆಯ ಅನುಸಾರವಾಗಿ, ಆಯ್ಕೆಯಾದ ಅಭ್ಯರ್ಥಿಗೆ 44900 ರಿಂದ 142400 ರೂ.ಗಳ ನಡುವೆ ಮಾಸಿಕ ಸಂಭಾವನೆ ನೀಡಲಾಗುತ್ತದೆ. ರೈಲ್ವೇ ನೇಮಕಾತಿ 2023 ರ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವಂತೆ, ಪೋಸ್ಟಿಂಗ್ ಸ್ಥಳವು ಹೊಸ ದೆಹಲಿ ಆಗಿರುತ್ತದೆ.
ಅರ್ಜಿ ಸಲ್ಲಿಸ ವಯೋಮಿತಿ 56 ವರ್ಷ. ರೈಲ್ವೇ ನೇಮಕಾತಿ 2023ರ ಸಚಿವಾಲಯದ ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಹ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾದ ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು Deputy Secretary, Room No. 110-C Rail Bhawan, Raisina Road, New Delhi-110001 ವಿಳಾಸಕ್ಕೆ ಕಳಿಸಬೇಕು.
ಅಧಿಕಾರಾವಧಿ– ನೇಮಕಾತಿಯು ಆರಂಭದಲ್ಲಿ 3 ವರ್ಷಗಳ ಅವಧಿಗೆ ಇರುತ್ತದೆ.
ಸಹಾಯಕ ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಯನ್ನು ಹೊಂದಿರಬೇಕು.
ಪೇ ಮ್ಯಾಟ್ರಿಕ್ಸ್‌ನಲ್ಲಿ (ರೂ.35400-112400) ಮಟ್ಟ-6 ರಲ್ಲಿ 05 (ಐದು) ವರ್ಷಗಳ ಸೇವೆಯೊಂದಿಗೆ ಅಥವಾ ಇದಕ್ಕೆ ಸಮವಾದ, ಪೋಷಕ ವರ್ಗ ಅಥವಾ ಇಲಾಖೆಯಲ್ಲಿ ನಿಯಮಿತ ಆಧಾರದ ಮೇಲೆ ನೇಮಕಾತಿ ಹೊಂದಿರಬೇಕು.
ರೈಲ್ವೆ ಸಚಿವಾಲಯದ ನೇಮಕಾತಿ 2023 ಅಧಿಸೂಚನೆಯ ಪ್ರಕಾರ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾದ ಅರ್ಜಿ ನಮೂನೆಯನ್ನುಸರಿಯಾಗಿ ಭರ್ತಿ ಮಾಡಿ ಮೇಲೆ ನೀಡಿರುವ ವಿಳಾಸಕ್ಕೆ ಅಧಿಸೂಚನೆ ಪ್ರಕಟವಾದ 60 ದಿನಗಳ ಒಳಗೆ ಕಲಿಸತಕ್ಕದ್ದು.
ಅಧಿಕೃತ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ