ಪಳನಿ ದೇವಾಲಯ ಪ್ರಸಾದದ ಬಗ್ಗೆ ಹೇಳಿಕೆ, ತಮಿಳು ನಿರ್ದೇಶನಕನ ಬಂಧನ

|

Updated on: Sep 24, 2024 | 5:14 PM

ತಿರುಪತಿ ಪ್ರಸಾದವಾದ ಲಡ್ಡುವಿನಲ್ಲಿ ದನದ ಕೊಬ್ಬು ಪತ್ತೆಯಾಗಿರುವುದು ದೇಶದಾದ್ಯಂತ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೆ ತಮಿಳು ನಿರ್ದೇಶಕರೊಬ್ಬರನ್ನು ಪಳನಿ ದೇವಾಲಯದ ಪ್ರಸಾದದ ಬಗ್ಗೆ ನೀಡಲಾಗಿರುವ ಹೇಳಿಕೆ ಕಾರಣಕ್ಕೆ ತಿರಚ್ಚಿ ಪೊಲೀಸರು ಬಂಧಿಸಿದ್ದಾರೆ.

ಪಳನಿ ದೇವಾಲಯ ಪ್ರಸಾದದ ಬಗ್ಗೆ ಹೇಳಿಕೆ, ತಮಿಳು ನಿರ್ದೇಶನಕನ ಬಂಧನ
Follow us on

ತಿರುಪತಿ ಪ್ರಸಾದವಾದ ಲಡ್ಡುವಿನಲ್ಲಿ ದನದ ಕೊಬ್ಬು ಪತ್ತೆಯಾಗಿರುವುದು ಕೋಲಾಹಲ ಎಬ್ಬಿಸಿದೆ. ಲಡ್ಡು ಮಾಡಲು ಬಳಸಲಾದ ತುಪ್ಪದಲ್ಲಿ ದನದ ಕೊಬ್ಬು ಪತ್ತೆಯಾಗಿದೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿತರಣೆಯಾಗುತ್ತಿರುವ ಪ್ರಸಾದದ ಸ್ವಚ್ಛತೆ ಬಗ್ಗೆ ಸ್ಥಳೀಯ ಸರ್ಕಾರ ಹಾಗೂ ದೇವಾಲಯದ ಆಡಳಿತ ಮಂಡಳಿಗಳು ಜಾಗೃತೆಯಾಗಿವೆ. ಇನ್ನು ಕೆಲವರು ಈ ವಿಷಯವಾಗಿ ತಮಗೆ ತೋಚಿದಂತೆ ಹೇಳಿಕೆಗಳನ್ನು ನೀಡುತ್ತಿದ್ದು, ತಿರುಪತಿ ಮಾತ್ರವೇ ಅಲ್ಲ, ಬೇರೆ ಕೆಲವು ದೇವಾಲಯಗಳ ಪ್ರಸಾದಗಳಲ್ಲಿಯೂ ಇಂಥಹಾ ಕಲಬೆರೆಕೆ ಸಾಮಾನ್ಯ ಎಂದಿದ್ದಾರೆ.

ಇದೀಗ ತಮಿಳು ನಿರ್ದೇಶಕರೊಬ್ಬರನ್ನು ದೇವಾಲಯದ ಪ್ರಸಾದದ ಕುರಿತಾಗಿನ ಹೇಳಿಕಗೆ ತಿರುಚಿ ಪೊಲೀಸರು ಬಂಧಿಸಿದ್ದಾರೆ. ‘ಬಕಾಸುರನ್’, ‘ದ್ರೌಪದಿ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿ ಚರ್ಚೆಯಲ್ಲಿರುವ ನಿರ್ದೇಶಕ ಮೋಹನ್ ಜಿ ಕ್ಷತ್ರಿಯನ್ ಅವರನ್ನು ತಿರುಚಿ ಪೊಲೀಸರು ಬಂಧಿಸಿದ್ದಾರೆ. ಪಳನಿ ದೇವಾಲಯದ ಪ್ರಸಾದದ ಕುರಿತಾದ ಹೇಳಿಕೆಯಿಂದಾಗಿ ಮಹೇಶ್ ಅವರನ್ನು ಬಂಧಿಸಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ತಿರುಪತಿ ಲಡ್ಡು ಪ್ರಕರಣ: ಕರ್ನಾಟಕದ ಎಲ್ಲ ಮುಜರಾಯಿ ದೇಗುಲಗಳ ಪ್ರಸಾದ ಪರೀಕ್ಷೆಗೆ ಸೂಚನೆ

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದ ಮೋಹನ್ ಜಿ, ‘ಪಳನಿ ದೇವಾಲಯದಲ್ಲಿ ನೀಡಲಾಗುವ ಪಂಚಾಮೃತ ಪ್ರಸಾದದಲ್ಲಿ ಮಕ್ಕಳಾಗದೇ ಇರುವ ರೀತಿ ಮಾತ್ರೆಗಳನ್ನು ಬೆರೆಸುತ್ತಿದ್ದರು, ಅಲ್ಲಿ ಕೆಲಸ ಮಾಡುವವರೇ ನನಗೆ ಗೊತ್ತಿರುವವರೇ ಇದನ್ನು ನನಗೆ ಹೇಳಿದ್ದರು’ ಎಂದಿದ್ದರು. ಇದರ ಬಗ್ಗೆ ದೇವಾಲಯವಾಗಲಿ, ಸರ್ಕಾರವಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ, ಆದರೆ ಅಲ್ಲಿ ಕೆಲಸ ಮಾಡುತ್ತಿದ್ದವರೇ ಹೇಳಿಕೊಂಡಿರುವ ವಿಷಯ ಇದು’ ಎಂದಿದ್ದರು ಮೋಹನ್.

ಹೇಳಿಕೆ ಆಧರಿಸಿ ತಿರುಚಿ ಪೊಲೀಸರು ಮೋಹನ್ ಅವರನ್ನು ಚೆನ್ನೈನಲ್ಲಿ ಬಂಧಿಸಿ ತಿರುಚಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಕೆಲವ ಮಾಧ್ಯಮಗಳು ವರದಿ ಮಾಡಿವೆ. ಮೋಹನ್ ಜಿ, ತಮ್ಮ ಹಿಂದೂಪರ ಹೇಳಿಕೆಗಳಿಂದ ಜನಪ್ರಿಯರು. ಅವರ ‘ದ್ರೌಪದಿ’ ಸಿನಿಮಾ ಜಾತಿ ವ್ಯವಸ್ಥೆಗೆ ಬೆಂಬಲ ನೀಡುವ ಅಂಶಗಳನ್ನು ಒಳಗೊಂಡಿದೆ, ಮರ್ಯಾದಾ ಹತ್ಯೆಯನ್ನು ಬೆಂಬಲಿಸುತ್ತಿದೆ ಎಂಬ ಆರೋಪ ಎದುರಿಸಿತ್ತು. ಈಗ ಮೋಹನ್ ಬಂಧನದ ಬೆನ್ನಲ್ಲೆ ಪಳನಿ ದೇವಾಲಯದ ಪ್ರಸಾದವನ್ನು ಸಹ ಪರೀಕ್ಷೆಗೆ ಒಳಪಡಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ