ಸಂಜನಾಗೆ ಸಮಾಧಾನಕರ ಸಂಗತಿ: ಕೊರೊನಾ ಱಂಡಮ್​ ಟೆಸ್ಟ್ ವರದಿ ಬಂದೇಬಿಡ್ತು!

ಬೆಂಗಳೂರು: ಸಿಸಿಬಿ ಪೊಲೀಸರಿಂದ ಸಂಜನಾ ಗಲ್ರಾನಿ ಬಂಧನದ ಹಿನ್ನೆಲೆಯಲ್ಲಿ ಸಂಜನಾಗೆ ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಾಗುತ್ತಿದೆ. ಇದರ ಜೊತೆಗೆ ಸಂಜನಾಗೆ ಕೊರೊನಾ ಟೆಸ್ಟ್ ಮಾಡಿಸುವುದು ಅಗತ್ಯವಾಗಿದೆ. ಹೀಗಾಗಿ ಆ್ಯಂಟಿಜೆನ್ ಟೆಸ್ಟ್ ಮಾಡಿಸಿದ, ಬಳಿಕ ಆರ್​ಟಿಪಿಸಿಆರ್ ಟೆಸ್ಟ್ ಕೂಡ ಮಾಡಲಾಗುತ್ತೆ. ಸದ್ಯ ನಟಿ ಸಂಜನಾಗೆ ಕೊರೊನಾ ಱಂಡಮ್​ ಟೆಸ್ಟ್​ನಲ್ಲಿ ಕೊರೊನಾ ನೆಗೆಟಿವ್ ಎಂದು ಬಂದಿದೆ. ಇದರಿಂದ ತೀವ್ರ ಸಂಕಟದ ನಡುವೆಯೂ ಸಂಜನಾಗೆ ತುಸು ನೆಮ್ಮದಿ ತಂದಿದೆ. ಈ ಮಧ್ಯೆ, ಸಂಜನಾಗೆ ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮುಂದುವರಿದಿದ್ದು, […]

ಸಂಜನಾಗೆ ಸಮಾಧಾನಕರ ಸಂಗತಿ: ಕೊರೊನಾ ಱಂಡಮ್​ ಟೆಸ್ಟ್ ವರದಿ ಬಂದೇಬಿಡ್ತು!
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Sep 08, 2020 | 3:48 PM

ಬೆಂಗಳೂರು: ಸಿಸಿಬಿ ಪೊಲೀಸರಿಂದ ಸಂಜನಾ ಗಲ್ರಾನಿ ಬಂಧನದ ಹಿನ್ನೆಲೆಯಲ್ಲಿ ಸಂಜನಾಗೆ ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಾಗುತ್ತಿದೆ. ಇದರ ಜೊತೆಗೆ ಸಂಜನಾಗೆ ಕೊರೊನಾ ಟೆಸ್ಟ್ ಮಾಡಿಸುವುದು ಅಗತ್ಯವಾಗಿದೆ. ಹೀಗಾಗಿ ಆ್ಯಂಟಿಜೆನ್ ಟೆಸ್ಟ್ ಮಾಡಿಸಿದ, ಬಳಿಕ ಆರ್​ಟಿಪಿಸಿಆರ್ ಟೆಸ್ಟ್ ಕೂಡ ಮಾಡಲಾಗುತ್ತೆ. ಸದ್ಯ ನಟಿ ಸಂಜನಾಗೆ ಕೊರೊನಾ ಱಂಡಮ್​ ಟೆಸ್ಟ್​ನಲ್ಲಿ ಕೊರೊನಾ ನೆಗೆಟಿವ್ ಎಂದು ಬಂದಿದೆ. ಇದರಿಂದ ತೀವ್ರ ಸಂಕಟದ ನಡುವೆಯೂ ಸಂಜನಾಗೆ ತುಸು ನೆಮ್ಮದಿ ತಂದಿದೆ.

ಈ ಮಧ್ಯೆ, ಸಂಜನಾಗೆ ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮುಂದುವರಿದಿದ್ದು, ಸಿಸಿಬಿ ಅಧಿಕಾರಿಗಳು ರಕ್ತದ ಮಾದರಿ ಪಡೆದು ಫೊರೆನ್ಸಿಕ್ ಲ್ಯಾಬ್​ಗೆ ರವಾನೆ ಮಾಡಲಿದ್ದಾರೆ. ಡ್ರಗ್ಸ್​ ಪಡೆದಿದ್ದಾರಾ, ಇಲ್ವಾ? ಎಂಬುದು ಇದರಿಂದ ಪತ್ತೆಯಾಗಲಿದೆ. ಜೊತೆಗೆ ಸಂಜನಾಗೆ ರಕ್ತ, ಕೂದಲು, ಉಗುರು, ಮೂತ್ರ ಪರೀಕ್ಷೆಯೂ ನಡೆಯಲಿದೆ. 3 ದಿನಕ್ಕೆ ಸಿಸಿಬಿ ಕೈ ಸೇರಲಿದೆ ಬ್ಲಡ್​ ಸ್ಯಾಂಪಲ್ ವರದಿ.

Published On - 3:36 pm, Tue, 8 September 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us