ದೆಹಲಿ: ಮೆಗಾಸ್ಟಾರ್ ಚಿರಂಜೀವಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ನಟ ಚಿರಂಜೀವಿಗೆ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ.
‘ಆಚಾರ್ಯ’ ಶೂಟಿಂಗ್ಗೂ ಮುನ್ನ ಕೊವಿಡ್-19 ಟೆಸ್ಟ್ ಮಾಡಿಸಿದಾಗ ಸೋಂಕು ಇರುವುದು ದೃಢವಾಗಿದೆ. ಈ ಬಗ್ಗೆ ಸ್ವತಃ ಚಿರಂಜೀವಿ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
65 ವರ್ಷ ವಯಸ್ಸಿನ ಚಿರಂಜೀವಿ ಆಗಸ್ಟ್ 22 1955ರಲ್ಲಿ ಜನಿಸಿದ್ರು. ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಹಾಗೂ ಕೋಟ್ಯಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಲ್ಲದೆ ಇವರು ಅಕ್ಟೋಬರ್ 27, 2012 ರಿಂದ 15 ಮೇ 2014 ರವರೆಗೆ ಭಾರತ ಸರ್ಕಾರದ ಪ್ರವಾಸೋದ್ಯಮ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: ನಟ ಆಹುತಿ ರಾಜಶೇಖರ್ಗೆ ಕೊರೊನಾ ಸೋಂಕು, ತಾರಾ ಪತ್ನಿಯೂ ಗಂಭೀರ
Published On - 11:08 am, Mon, 9 November 20