ಬೆಂಗಳೂರಿನ ಹವಾಮಾನ ಬದಲಾವಣೆಯಿಂದ ವರ್ಷವಿಡಿ ಹರಡಲಿದೆ ಪಿಂಕ್​ ಐ ರೋಗ

| Updated By: ವಿವೇಕ ಬಿರಾದಾರ

Updated on: Oct 15, 2023 | 2:18 PM

ಮದ್ರಾಸ್​ ಐ ರೋಗ ಮಳೆಗಾಲದಲ್ಲಿ ಮಾತ್ರ ಹರಡುತ್ತಿತ್ತು. ಆದರೆ ಇದೀಗ ವರ್ಷವಿಡಿ ರೋಗ ಹರಡುತ್ತದೆ ಎಂಬ ವಿಷಯ ಪೋಷಕರಲ್ಲಿ ಆತಂಕ ಮೂಡಿಸಿದೆ. ಪಿಂಕ್​ ಐ ರೋಗ ವರ್ಷ ಪೂರ್ತಿ ಹರುಡುವುದರಿಂದ ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಹಿಂದುಮುಂದು ನೋಡುತ್ತಿದ್ದಾರೆ.

ಬೆಂಗಳೂರಿನ ಹವಾಮಾನ ಬದಲಾವಣೆಯಿಂದ ವರ್ಷವಿಡಿ ಹರಡಲಿದೆ ಪಿಂಕ್​ ಐ ರೋಗ
ಪಿಂಕ್​ ಐ
Follow us on

ಬೆಂಗಳೂರು ಅ.14: ಮದ್ರಾಸ್​ ಐ (Pink Eye) ಪ್ರಕರಣಗಳು ನಗರದಲ್ಲಿ ಇಳಿಕೆ ಕಂಡರೂ, ಇದು ಜನರಿಗೆ ವರ್ಷ ಪೂರ್ತಿ ಹರಡುತ್ತಿರುತ್ತದೆ ಎಂಬ ಆಘಾತಕಾರಿ ಅಂಶವನ್ನು ಖಾಸಗಿ ಸುದ್ದಿ ಸಂಸ್ಥೆ ಡೆಕ್ಕನ್​ ಹೆರಾಲ್ಡ್​ ವರದಿ ಮಾಡಿದೆ. ಈ ಮೊದಲು ಮದ್ರಾಸ್​ ಐ ರೋಗ ಮಳೆಗಾಲದಲ್ಲಿ ಮಾತ್ರ ಹರಡುತ್ತಿತ್ತು. ಆದರೆ ಇದೀಗ ವರ್ಷವಿಡಿ ರೋಗ ಹರಡುತ್ತದೆ ಎಂಬ ವಿಷಯ ಸಹಜವಾಗಿ ಪೋಷಕರಲ್ಲಿ ಆತಂಕ ಮೂಡಿಸಿದೆ.

ಮದ್ರಾಸ್​ ಐ ರೋಗ ಹೆಚ್ಚಾಗಿ ಮಕ್ಕಳಿಗೆ ಬರುತ್ತದೆ. ಇಷ್ಟು ದಿವಸ ಒಂದು ಋತುವಿನಲ್ಲಿ ಮಾತ್ರ ಭಾದಿಸುತ್ತೆ ಎಂಬ ಸಮಾಧಾನದಲ್ಲಿ ಪೋಷಕರಿದ್ದರು. ಆದರೆ ಇದೀಗ ವರ್ಷ ಪೂರ್ತಿ ಹರುಡುವುದರಿಂದ ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಹಿಂದುಮುಂದು ನೋಡುತ್ತಿದ್ದಾರೆ.

ವರದಿಯಾದ ಮದರ ಪ್ರಕರಣಗಳ ಸಂಖ್ಯೆ ಆಗಸ್ಟ್‌ನಲ್ಲಿ ದಿನಕ್ಕೆ ನಾಲ್ಕರಿಂದ ಐದು ಮದ್ರಾಸ್​ ಐ ಪ್ರಕರಣಗಳು ವರದಿಯಾಗಿದ್ದವು. ಆದರೆ ಸೆಪ್ಟೆಂಬರ್ ಅಂತ್ಯದಲ್ಲಿ ಮತ್ತು ಅಕ್ಟೋಬರ್ ಆರಂಭದಲ್ಲಿ ವಾರಕ್ಕೆ 7 ರಿಂದ 10 ಪ್ರಕರಣಗಳು ವರದಿಯಾಗಿದ್ದವು. ವಾತಾವರಣ ತಂಪಾಗಿದ್ದರೆ ಮದ್ರಾಸ್​​ ಐ ರೋಗ ಹರಡುತ್ತಲೇ ಇರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Conjunctivitis: ಮಳೆಗಾಲದಲ್ಲಿ ಕಂಡುಬರುವ ಕಾಂಜಂಕ್ಟಿವಿಟಿಸ್ ಸೋಂಕು ಎಂದರೇನು? ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ

ಬೇಸಿಗೆ ಮತ್ತು ಮುಂಗಾರಿನಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತವೆ. ಆದರೆ ಹವಾಮಾನ ಬದಲಾವಣೆಗಳಿಂದ ಮದ್ರಾಸ್​ ಐ ರೋಗ ಎಂದಿಗೂ ಹೋಗುವುದಿಲ್ಲ. ಹವಾಮಾನ ವೈಪರಿತ್ಯದಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕನಿಷ್ಠ 15 ಪ್ರತಿಶತದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗಿವೆ.

ಕಾಂಜಂಕ್ಟಿವಿಟಿಸ್ ಎನ್ನುವುದು ಕಣ್ಣಿನ ಸ್ಥಿತಿಯಾಗಿದ್ದು, ಇದು ಕಣ್ಣುಗಳ ಬಿಳಿಭಾಗವನ್ನು ಆವರಿಸುವ ಪಾರದರ್ಶಕ ಅಂಗಾಂಶ ಪೊರೆಯಾದ ಕಾಂಜಂಕ್ಟಿವಾ ಉರಿಯೂತದ ಕಾರಣದಿಂದಾಗಿ ಕಣ್ಣುಗಳಲ್ಲಿ ಕೆಂಪು, ಊತ ಮತ್ತು ನೀರಿನ ಸ್ರವಿಸುವಿಕೆಯನ್ನು ಪ್ರಸ್ತುತಪಡಿಸುತ್ತದೆ. ಈ ಸಾಂಕ್ರಾಮಿಕ ರೋಗವು ಸಾಮಾನ್ಯವಾಗಿ ಒಂದು ವಾರದವರೆಗೆ ಇರುತ್ತದೆ ಮತ್ತು ಸಾಮಾನ್ಯವಾಗಿ ಕಣ್ಣಿನ ಹನಿಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ.

ಮದ್ರಾಸ್‌ ಐನ ಆರಂಭಿಕ ಲಕ್ಷಣಗಳು ಎಂದರೆ ಕಣ್ಣು, ಕೆಂಪಾಗುವುದು, ತುರಿಕೆ, ಅತಿಯಾಗಿ ನೀರು ಸೋರುವುದು ಹಾಗೂ ಕಣ್ಣುಗಳಲ್ಲಿ ಚುಚ್ಚಿದಂತಹ ಅನುಭವ. ಈ ಸೋಂಕಿನ ಪ್ರಭಾವ ಹೆಚ್ಚಾದಂತೆ ಕಣ್ಣುಗಳನ್ನು ಬೆಳಕಿಗೆ ತೆರೆದುಕೊಳ್ಳುವುದು ಕಷ್ಟವಾಗಬಹುದು ಮತ್ತು ಕಣ್ಣುಗಳಲ್ಲಿ ಬಿಳಿ ಬಣ್ಣದ ಹಿಕ್ಕೆ ಸೋರಬಹುದು

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ