ಪ್ರತಿ ವರ್ಷ ಜುಲೈ 28 ರಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಸ್ಯಾಮ್ಯುಯೆಲ್ ಬ್ಲೂಮ್‌ಬರ್ಗ್ ಅವರ ಜನ್ಮದಿನದಂದು ಹೆಪಟೈಟಿಸ್ ದಿನ(World Hepatitis Day) ಎಂದು ಆಚರಿಸಲಾಗುತ್ತದೆ. ಬ್ಲೂಮ್‌ಬರ್ಗ್ ಹೆಪಟೈಟಿಸ್(Hepatitis) ಬಿ ವೈರಸ್ (ಎಚ್‌ಬಿವಿ) ಅನ್ನು ಕಂಡುಹಿಡಿದರು. ಹೆಪ್-ಬಿ ವೈರಸ್‌ಗೆ ಚಿಕಿತ್ಸೆ ನೀಡಲು, ರೋಗನಿರ್ಣಯ ಪರೀಕ್ಷೆ ಮತ್ತು ಲಸಿಕೆಯನ್ನು ಸಹ ಇವರು ಅಭಿವೃದ್ಧಿಪಡಿಸಿದರು. ಹೀಗಾಗಿ ಹೆಪಟೈಟಿಸ್ ದಿನವನ್ನು ಅವರ ಜನ್ಮದಿನದಂದೇ ಆಚರಿಸಲಾಗುತ್ತದೆ. ಸದ್ಯ ಹೆಚ್ಚುತ್ತಿರುವ ಹೆಪಟೈಟಿಸ್ ರೋಗದ ಬಗ್ಗೆ ವಿಶೇಷ ಜಾಗೃತಿ ಮತ್ತು ಅರಿವು ಮೂಡಿಸಲು ಆಚರಿಸಲಾಗುವ ಈ ದಿನದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Migraine Headache: ಮೈಗ್ರೇನ್ ತಲೆ ನೋವಿನ ಕಿರಿಕಿರಿಯಿಂದ ಮುಕ್ತಿಗೆ ಇಲ್ಲಿದೆ ಸರಳ ಪರಿಹಾರ
ಯಕೃತ್ತಿನಲ್ಲಿ (ಲಿವರ್) ಉರಿಯೂತವನ್ನುಂಟು ಮಾಡುವ ಲಕ್ಷಣಗಳು ಅಥವಾ ರೋಗಗಳಿಗೆ ಹೆಪಟೈಟಿಸ್ ಎಂದು ಹೇಳಲಾಗುತ್ತದೆ. ಈ ಉರಿಯೂತ ಸತತ ಮದ್ಯಪಾನ ಸೇವನೆಯಿಂದ ಅಥವಾ ವೈರಸ್‌ಗಳಿಂದ ಹೆಪಟೈಟಿಸ್ ಅನ್ನು ಹೆಪಟೈಟಿಸ್ ಎ,ಬಿ, ಸಿ ಮತ್ತು ಡೆಲ್ಟಾ ಫ್ಯಾಕ್ಟರ್ ಎಂದು ಗುರುತಿಸಲಾಗುವ ವೈರಸ್‌ಗಳಿಂದ ಹರಡಬಹುದು.
ಹೆಪಟೈಟಿಸ್ ಯಕೃತ್ತನ್ನು ಅಥವಾ ಪಿತ್ತಜನಕಾಂಗವನ್ನು ನಿಧಾನವಾಗಿ ನಾಶಪಡಿಸುವ ಒಂದು ಕಾಯಿಲೆ. ಹೆಪಟೈಟಿಸ್ ಸೋಂಕಿನಲ್ಲಿ ಎ, ಬಿ, ಡಿ, ಇ ಎಂಬ ವಿಧಗಳಿವೆ. ಹೀಗಾಗಿ ಈ ರೋಗದ ವಿರುದ್ಧ ಮುನ್ನೆಚ್ಚರಿಕೆ ವಹಿಸುವುದು, ಈ ರೋಗದ ಲಕ್ಷಣಗಳನ್ನು ಅರಿಯುವುದು ಮುಖ್ಯ. ಆದರೆ ಈ ಕಾಯಿಲೆ ಬಗ್ಗೆ ಹೆಚ್ಚಿನ ಜನರಲ್ಲಿ ನಿರ್ಲಕ್ಷ್ಯ ಭಾವನೆ ಇದೆ. ಈ ಕಾರಣದಿಂದಾಗಿ ಲಕ್ಷಾಂತರ ಜನರು ಹೆಪಟೈಟಿಸ್ ನಿಂದಾಗಿ ಸಾವಿಗೀಡಾಗಿದ್ದಾರೆ. ಹೆಪಟೈಟಿಸ್ ಎ ಮತ್ತು ಇ ಅಷ್ಟು ಅಪಾಯಕಾರಿಯಲ್ಲ. ಆದರೆ ಹೆಪಟೈಟಿಸ್ ಬಿ, ಸಿ ಮತ್ತು ಡಿ ವೈರಸ್ಗಳು ಯಕೃತ್ತಿನ ಶಕ್ತಿಯನ್ನು ಕುಂದಿಸುತ್ತದೆ. ಕ್ರಮೇಣ ಯಕೃತ್ತಿನ ಕ್ಯಾನ್ಸರ್ಗೆ ಇದು ಕಾರಣವಾಗುತ್ತದೆ. ಹೀಗಾಗಿ ಹೆಪಟೈಟಿಸ್ ದಿನವನ್ನು ಈ ವೈರಸ್‌ಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮುಖ್ಯ ಉದ್ದೇಶದಿಂದ ಆಚರಿಸಲಾಗುತ್ತದೆ.
ರಕ್ತ ಪರೀಕ್ಷೆಗಳಿಂದ ಹೆಪಟೈಟಿಸ್ ಬಿ ವೈರಸ್ ಅನ್ನು ಕಂಡುಹಿಡಿಯಬಹುದು. ಹೆಪಟೈಟಿಸ್ ಬಿ ಮತ್ತು ಸಿ ವೈರಸ್ ಪತ್ತೆಗಾಗಿ ಜನರು ಸ್ವಯಂಪ್ರೇರಿತವಾಗಿ ರಕ್ತ ಪರೀಕ್ಷೆಗೆ ಮುಂದಾಗಬೇಕು. ಈ ವಿಷಯವನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕಾಗಿದೆ. ಹೆಪಟೈಟಿಸ್ ಬಿ ಮತ್ತು ಸಿ ವೈರಸ್ಗಳು 10 ರಿಂದ 15 ವರ್ಷಗಳವರೆಗೆ ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಅಂತಿಮವಾಗಿ ಪಿತ್ತಜನಕಾಂಗವು ಸಂಪೂರ್ಣವಾಗಿ ಅಸಮರ್ಥವಾಗುತ್ತದೆ. ಆ ಹಂತದಲ್ಲಿ ಪಿತ್ತಜನಕಾಂಗದ ಕಸಿ ಹೊರತುಪಡಿಸಿ ಯಾವುದೇ ಚಿಕಿತ್ಸೆಯು ಕಾರ್ಯನಿರ್ವಹಿಸುವುದಿಲ್ಲ.
ಸ್ವಚ್ಛವಾದ ನೀರು ಮತ್ತು ಆಹಾರ ಸೇವನೆ, ಮತ್ತೊಬ್ಬರಿಂದ ರಕ್ತ ಪಡೆಯುವಾಗ ಸಾಕಷ್ಟು ಮುಂಜಾಗ್ರತೆ ವಹಿಸುವುದು, *ಚೆನ್ನಾಗಿ ಬೇಯಿಸದೇ ಮಾಂಸ ತಿನ್ನಬಾರದು, ಒಬ್ಬರಿಗೆ ಬಳಸಿದ ಸೂಜಿ ಮತ್ತೊಬ್ಬರಿಗೆ ಬಳಸಬಾರದು. ಒಬ್ಬರು ಬಳಸಿದ ಬ್ಲೇಡ್/ ರೇಜರ್ ಮತ್ತೊಬ್ಬರು ಬಳಸಬಾರದು, ಹೆಪಟೈಟಿಸ್ ಇರುವ ವ್ಯಕ್ತಿ ಬಳಸಿದ ಟೂತ್‌ಬ್ರೆಷ್ ಮುಟ್ಟಬಾರದು, ಹೆಪಟೈಟಿಸ್ ಇರುವ ವ್ಯಕ್ತಿಯ ರಕ್ತವನ್ನು ಬರಿಕೈಯಿಂದ ಮುಟ್ಟಬಾರದು.
ಇನ್ನಷ್ಟು ಹೆಲ್ತ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ