ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 18ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಮಾತಿಗೆ ಮನ್ನಣೆ, ಗೌರವ ಹೆಚ್ಚಾಗಲಿದೆ. ದಿನದ ಕೊನೆಗೆ ಪಾರ್ಟಿಗಳಿಗೆ ಆಹ್ವಾನ ಬರಲಿದೆ. ರಾಜಕಾರಣದಲ್ಲಿ ಇರುವವರಿಗೆ ದೊಡ್ಡದಾದ ಅನಿರೀಕ್ಷಿತವಾದ ಬೆಳವಣಿಗೆ ಎದುರಾಗಲಿದೆ. ಕೆಲವು ಕೆಲಸಗಳನ್ನು ಮೊದಲಿಂದ ಶುರು ಮಾಡಬೇಕಾದರೂ ಅದು ನಿಮ್ಮ ಪಾಲಿಗೆ ಅನುಕೂಲವಾಗಿ ಪರಿಣಮಿಸಲಿದೆ. ಮನೆ ದೇವರ ಸ್ಮರಣೆಯನ್ನು ಮಾಡಿದಲ್ಲಿ ನಿಮ್ಮ ಕೆಲಸ- ಕಾರ್ಯಗಳು ಸರಾಗವಾಗಿ ಮುಗಿಯುವುದಕ್ಕೆ ಅನುಕೂಲ ಒದಗಿ ಬರಲಿದೆ.
ನಿಮ್ಮ ತಾಳ್ಮೆ- ಸಂಯಮವು ಈ ದಿನ ಫಲ ನೀಡಲಿದೆ. ಈ ಹಿಂದೆ ನಿಮ್ಮ ಜತೆ ಕೆಲಸ ಮಾಡಿದವರು ಸಹಾಯ ಕೇಳಿಕೊಂಡು ಬರುವಂಥ ಸಾಧ್ಯತೆ ಇದೆ. ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಏಕಕಾಲದಲ್ಲಿ ಮಾಡಬೇಕಾಗುತ್ತದೆ. ತೀರ್ಥಕ್ಷೇತ್ರಗಳಿಗೆ ತೆರಳುವುದಕ್ಕೆ ಸ್ನೇಹಿತರು- ಸಂಬಂಧಿಕರಿಂದ ಆಹ್ವಾನ ಬರಲಿದೆ. ಷೇರು- ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಪರಿಣತರ ಜತೆಗೆ ಚರ್ಚೆ ಮಾಡಲಿದ್ದೀರಿ. ನಿಮ್ಮ ಕೈಕೆಳಗೆ ಕೆಲಸ ಮಾಡುವವರು ದೊಡ್ಡ ಮಟ್ಟದಲ್ಲಿ ನೆರವಾಗಲಿದ್ದಾರೆ.
ಗಾಸಿಪ್ ಮಾತನಾಡುವ ಜಾಗದಲ್ಲಿ ಸಮಯ ಕಳೆಯದಿರುವುದು ಈ ದಿನ ಬಹಳ ಮುಖ್ಯವಾಗುತ್ತದೆ. ಪ್ರೀತಿ ಪ್ರೇಮ ಹೇಳಿಕೊಳ್ಳಬೇಕು ಅಂದುಕೊಂಡಿದ್ದಲ್ಲಿ ಸನ್ನಿವೇಶವನ್ನು ಸರಿಯಾಗಿ ಅವಲೋಕಿಸಿ ಮುಂದಕ್ಕೆ ಹೆಜ್ಜೆ ಇಡಿ. ಕುಟುಂಬ ವ್ಯಾಪಾರದಲ್ಲಿ ತೊಡಗಿರುವವರಿಗೆ ಹೊಸದಾಗಿ ಹೂಡಿಕೆ ಮಾಡಬೇಕು ಎಂದು ಆಲೋಚನೆ ಬರಲಿದೆ. ಮೊಬೈಲ್ ಫೋನ್, ಲ್ಯಾಪ್ ಟಾಪ್ ಇತರ ಯಾವುದಾದರೂ ವಸ್ತುಗಳನ್ನು ಇತರರ ಸಲುವಾಗಿ ಖರೀದಿ ಮಾಡುವಂಥ ಸಾಧ್ಯತೆ ಇದೆ. ಸಾಲ ಮಾಡುವವರಾಗಿದ್ದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡಿ.
ನಿಮ್ಮ ಆಪ್ತರ ಹಣಕಾಸಿನ ಅಗತ್ಯ ತೀವ್ರವಾಗುತ್ತದೆ. ನಿಮಗೆ ಅವರ ಅಗತ್ಯವನ್ನು ಪೂರೈಸುವಷ್ಟು ಸಾಮರ್ಥ್ಯ ಇಲ್ಲದಿದ್ದರೂ ಪ್ರಯತ್ನ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ತಾಯಿಯ ಅನಾರೋಗ್ಯ ನಿಮ್ಮನ್ನು ಚಿಂತೆಗೆ ಈಡು ಮಾಡಲಿದೆ. ಹೊಸಬರು ಪರಿಚಯ ಆಗಿ, ಬಣ್ಣದ ಮಾತನಾಡುತ್ತಿದ್ದಾರೆ ಅಂತಾದಲ್ಲಿ ತಕ್ಷಣವೇ ಎಚ್ಚೆತ್ತುಕೊಳ್ಳುವುದು ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚಿನ ನಿಗಾ ಮಾಡಬೇಕಾಗುತ್ತದೆ. ದಿಢೀರ್ ಪ್ರಯಾಣ ಮಾಡಬೇಕಾಗಬಹುದು.
ನಿಮ್ಮ ಗುಣ- ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳಲೇ ಬೇಕು ಎಂದು ಬಲವಾಗಿ ಅನಿಸಲು ಶುರುವಾಗಲಿದೆ. ಆದಾಯ ಮೂಲ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ತೀವ್ರಗೊಳಿಸಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸಿ ಮನೆಗೆ ಅಗತ್ಯ ಇರುವಂಥ ವಸ್ತುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಮಕ್ಕಳ ಭವಿಷ್ಯದ ಸಲುವಾಗಿ ಹಣವನ್ನು ಹೂಡಿಕೆ ಮಾಡುವ ಬಗ್ಗೆ ಕುಟುಂಬದ ಸದಸ್ಯರ ಜತೆಗೆ ಚರ್ಚೆ ನಡೆಸಲಿದ್ದೀರಿ. ಪ್ರೇಮಿಗಳಿಗೆ, ನವ ವಿವಾಹಿತರಿಗೆ ವಿರಹ ವೇದನೆ ಅನುಭವಿಸುವ ಯೋಗ ಇದೆ.
ನೀವು ತೊಡಗಿಕೊಂಡಿರುವ ಕೆಲಸದಲ್ಲಿ ಮಾಮೂಲಿಗಿಂತ ಹೆಚ್ಚಿನ ಶ್ರಮವನ್ನು ಹಾಕಬೇಕಾಗುತ್ತದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಅನುಮಾನ ಮೂಡುವಂಥ ಸನ್ನಿವೇಶ ಸೃಷ್ಟಿ ಆದಲ್ಲಿ ಇತರರ ನೆರವನ್ನು ತೆಗೆದುಕೊಳ್ಳಿ. ಚೈನ್ ಕಂಪನಿಗಳಲ್ಲಿ ಹಣ ಹೂಡುವಂತೆ ಬಹಳ ಆಪ್ತರಿಂದಲೇ ಒತ್ತಡ ಬರುವಂಥ ಸಾಧ್ಯತೆಗಳಿವೆ. ಈ ಒತ್ತಡಕ್ಕೆ ಒಂದು ವೇಳೆ ಮಣಿದರೆ ಹಣ ಕಳೆದುಕೊಂಡಂತೆಯೇ ಸರಿ. ಆದ್ದರಿಂದ ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ಹಣ ಕಳೆದುಕೊಳ್ಳುವಂಥ ಸ್ಕೀಮ್ ಗಳಿಗೆ ತಗುಲಿಕೊಳ್ಳಬೇಡಿ.
ಸಂಬಂಧಿಕರ ಮನೆಗೆ ತೆರಳುವುದಕ್ಕೆ ಆಹ್ವಾನ ಬರಲಿದೆ. ಪುಷ್ಕಳವಾದ ಭೋಜನ ಸವಿಯಲಿದ್ದೀರಿ. ಹೊಸ ಬಟ್ಟೆಯನ್ನು ಉಡುಗೊರೆಯಾಗಿ ಪಡೆಯುವಂಥ ಯೋಗ ಇದೆ. ನೆನಪಿನ ಶಕ್ತಿಯ ಕಾರಣಕ್ಕೆ ಹಲವು ನಷ್ಟಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಅಥವಾ ತಡೆಯುವುದಕ್ಕೆ ನೀವು ಸಫಲರಾಗುತ್ತೀರಿ. ನಲವತ್ತು ವರ್ಷ ಮೇಲ್ಪಟ್ಟವರಿಗೆ ಆ ವಯಸ್ಸಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಸುಸ್ತು, ದಣಿವು, ಕಣ್ಣು ಕತ್ತಲೆ ಬರುವುದು ಇಂಥ ಸಮಸ್ಯೆಗಳು ಕಾಡಲಿದೆ.
ಈ ಮಾತು ನಾನು ಆಡಿಯೇ ಇಲ್ಲ, ಹೀಗೆ ಹೇಳಿಯೇ ಇಲ್ಲ ಎಂದು ನಿಮ್ಮನ್ನು ನೀವು ಸಾಬೀತು ಮಾಡಿಕೊಳ್ಳುವುದು ಸವಾಲಾಗಲಿದೆ. ಪತಿ- ಪತ್ನಿಯರ ಮಧ್ಯೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಮೂಡುವಂಥ ಸಾಧ್ಯತೆಗಳಿವೆ. ಈ ದಿನ ರೈಲು- ಬಸ್ಸಿನಲ್ಲಿ ದೂರ ಪ್ರಯಾಣ ಮಾಡುವಂಥವರು ಮುಖ್ಯ ವಸ್ತುಗಳ ಕಡೆಗೆ ಲಕ್ಷ್ಯವನ್ನು ನೀಡಿ. ಈ ದಿನ ಸಾಧ್ಯವಾದಲ್ಲಿ ದುರ್ಗಾದೇವಿಯ ದೇವಸ್ಥಾನಕ್ಕೆ ತೆರಳಿ, ದರ್ಶನವನ್ನು ಪಡೆಯಿರಿ. ಅಥವಾ ಮೊಬೈಲ್ ಫೋನ್ ಡಿಪಿ ಆಗಿ ದುರ್ಗಾ ದೇವಿ ಚಿತ್ರವನ್ನು ಹಾಕಿಕೊಳ್ಳಿ.
ಸಂತಾನಕ್ಕಾಗಿ ಪ್ರಯತ್ನವನ್ನು ಪಡುತ್ತಿದ್ದಲ್ಲಿ ಶುಭ ಸುದ್ದಿ ಕೇಳಿಬರುವ ಯೋಗ ಇದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸ್ನೇಹಿತರ ಸಹಾಯದಿಂದ ಅವಕಾಶಗಳ ಬಗ್ಗೆ ಮಾಹಿತಿ ದೊರೆಯಲಿದೆ. ಇತರರ ವೈಯಕ್ತಿಕ ವಿಚಾರಗಳನ್ನು ರಹಸ್ಯ ಎಂದು ನಿಮ್ಮೆದುರು ಹೇಳಿಕೊಂಡಲ್ಲಿ ಅದು ಇತರರ ಮುಂದೆ ಪ್ರಸ್ತಾವ ಮಾಡಬೇಡಿ ಅಥವಾ ಇಂಥ ವಿಷಯಗಳನ್ನು ಚರ್ಚೆ ಮಾಡುವುದಕ್ಕೇ ಹೋಗಬೇಡಿ. ಸೋದರ ಮಾವನ ಜತೆಗೆ ತಿಕ್ಕಾಟ ಆಗಬಹುದು.