Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 11ರ ದಿನಭವಿಷ್ಯ 

| Updated By: Rakesh Nayak Manchi

Updated on: Jun 11, 2023 | 9:42 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 11 ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 11ರ ದಿನಭವಿಷ್ಯ 
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 11ರ ದಿನಭವಿಷ್ಯ 
Image Credit source: freepik
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 11ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಶುಭ ಕಾರ್ಯಗಳಿಗೆ ಓಡಾಟ ಮಾಡಬೇಕಾದ ಸನ್ನಿವೇಶ ಇದೆ. ಹಣಕಾಸು ಹರಿವು ನಿಮ್ಮ ಇಂದಿನ ಆದ್ಯತೆ ಆಗಲಿದೆ. ಸ್ವಂತ ವ್ಯವಹಾರ ಮಾಡುತ್ತಿರುವವರಿಗೆ ಹಾಕುತ್ತಿರುವ ಶ್ರಮ ಏನೇನೂ ಸಾಲುತ್ತಿಲ್ಲ ಎಂದು ಬಲವಾಗಿ ಅನಿಸುತ್ತದೆ. ಯಾವುದೇ ಲಾಭಾಪೇಕ್ಷೆ ಇಲ್ಲದೆ ನೀವು ಮಾಡಿದ ಕೆಲಸದಿಂದ ಅನುಕೂಲ ಆಗುವಂಥ ಸಾಧ್ಯತೆ ಇದೆ. ಸಂಗಾತಿ ಜತೆಗೆ ಮಾತುಕತೆ ಆಡುವಾಗ ಪಾರದರ್ಶಕವಾಗಿ ನಡೆದುಕೊಳ್ಳಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಯಾರದಾದರೂ ಸಲಹೆ ಕೇಳಬೇಕಲ್ಲ ಎಂದು ಚಡಪಡಿಸುವಂಥ ದಿನ ಇದಾಗಿರುತ್ತದೆ. ಪೂರ್ಣ ಪ್ರಮಾಣದಲ್ಲಿ ನಂಬಿಕೆ ಇಲ್ಲ ಅಂತಾದಲ್ಲಿ ಅಂಥ ವಿಚಾರಗಳಲ್ಲಿ ಖಂಡಿತಾ ಪರಿಣತರ ಸಲಹೆಯನ್ನು ತೆಗೆದುಕೊಳ್ಳಿ. ಮುಖಕ್ಕೆ ಹೊಡೆದಂತೆ ಮಾತನಾಡುತ್ತೇನೆ ಎಂಬ ಧೋರಣೆ ಬೇಡ. ಹಳೇ ಪ್ರೇಮ ಪ್ರಕರಣಗಳು ಇದ್ದಲ್ಲಿ, ಈ ದಿನ ಅದು ನೆನಪಾಗುವ, ಆ ವ್ಯಕ್ತಿಯ ಜತೆಗೆ ಸಮಯ ಕಳೆಯುವಂಥ ಯೋಗಗಳು ಕಂಡುಬರುತ್ತಿವೆ. ವೈಯಕ್ತಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ಎಚ್ಚರ ವಹಿಸಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನೀವು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ಕೆಲವು ಮೆಚ್ಚುಗೆ ಮಾತುಗಳನ್ನು ಕೇಳಿಸಿಕೊಳ್ಳಲಿದ್ದೀರಿ. ಹಿಮ್ಮಡಿ, ಮೀನಖಂಡದ ಮೇಲೆ ಒತ್ತಡ ಬೀಳುವಂಥ ಕೆಲಸ ಮಾಡದಿರುವುದು ಉತ್ತಮ. ಪ್ರವಾಸಕ್ಕೆ ತೆರಳಬೇಕು ಎಂದುಕೊಂಡಿದ್ದಲ್ಲಿ ಹಣಕಾಸಿನ ಲೆಕ್ಕಾಚಾರವನ್ನು ಸರಿಯಾಗಿ ಹಾಕಿಕೊಳ್ಳಿ. ಕೃಷಿಕರಿಗೆ ಹೂಡಿಕೆ ಮಾಡಬೇಕಾದ ಅನಿವಾರ್ಯ ಕಂಡುಬರಲಿದೆ. ಇದಕ್ಕಾಗಿ ಹಣ ಸಾಲ ಮಾಡಬೇಕಾದಂಥ ಸನ್ನಿವೇಶ ಸೃಷ್ಟಿ ಆಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನೀವು ಎಷ್ಟೇ ಶ್ರಮ ಹಾಕಿದರೂ ಕೆಲವು ಕೆಲಸಗಳನ್ನು ಈ ದಿನ ಪೂರ್ಣ ಮಾಡುವುದಕ್ಕೆ ಸಾಧ್ಯ ಆಗುವುದೇ ಇಲ್ಲ. ಇತರರ ಸಾಮರ್ಥ್ಯವನ್ನು ಈ ಕಾರಣದಿಂದ ನಿಮ್ಮ ಜತೆಗೆ ಹೋಲಿಕೆ ಮಾಡಿಕೊಳ್ಳದಿರಿ. ಹಣ- ಸಮಯ, ಶಿಫಾರಸು ಎಂದು ಹಠಕ್ಕೆ ಬಿದ್ದು, ಕೆಲಸ ಮುಗಿಸಲೇ ಬೇಕು ಎಂದು ಹೊರಟರೆ ನಿಮಗೆ ನಷ್ಟವಾದೀತು. ಹೊಂದಾಣಿಕೆ ಮಾಡಿಕೊಂಡಲ್ಲಿ ವ್ಯಾಪಾರ ಸ್ಥಳದಲ್ಲಿ ನೆಮ್ಮದಿಯಿಂದ ಇರಬಹುದು. ಅನಿಸಿದ್ದನ್ನು ನೇರಾನೇರ ಹೇಳಿಬಿಡ್ತೀನಿ ಎಂದುಕೊಳ್ಳದಿರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ತುಂಬ ಸಮಾಧಾನವಾಗಿ ದಿನ ಕಳೆಯುವುದರ ಕಡೆಗೆ ಆಲೋಚನೆ ಮಾಡಿ. ಬರಬೇಕಾದ ಹಣ ಇದ್ದಲ್ಲಿ ಅದನ್ನು ಫಾಲೋ ಅಪ್ ಮಾಡುವುದು ಮುಖ್ಯವಾಗುತ್ತದೆ. ದೀರ್ಘ ಕಾಲದಿಂದ ನಿರೀಕ್ಷೆ ಮಾಡುತ್ತಿದ್ದ ಅವಕಾಶವೊಂದು ಈಗ ದೊರೆಯುವ ಸಾಧ್ಯತೆಗಳಿವೆ. ಸ್ನೇಹಿತರು ನಿಮ್ಮಿಂದ ಆರ್ಥಿಕ ಸಹಾಯವನ್ನು ಬಯಸಿ ಬರುವಂಥ ಸಾಧ್ಯತೆ ಇದೆ. ಕ್ರೆಡಿಟ್ ಕಾರ್ಡ್ ಬಳಸುವಂಥವರು ಖರ್ಚಿನ ಮೇಲೆ ಹಿಡಿತ ಸಾಧಿಸುವುದು ಬಹಳ ಮುಖ್ಯ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಫ್ಯಾಷನ್ ಡಿಸೈನಿಂಗ್, ಚಿನ್ನಾಭರಣಗಳು ಕುಸುರಿ ಕೆಲಸದಲ್ಲಿ ತೊಡಗಿಕೊಂಡವರಿಗೆ ಕೀರ್ತಿ, ಪ್ರತಿಷ್ಠೆಗಳು ಹೆಚ್ಚಾಗಲಿವೆ. ಯೂಟ್ಯೂಬರ್ ಗಳಾಗಿ ವೃತ್ತಿಯನ್ನು ಆರಿಸಿಕೊಂಡಿರುವವರಿಗೆ ಆದಾಯದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡುಬರಲಿದೆ. ಸ್ವಂತ ವ್ಯಾಪಾರ, ವ್ಯವಹಾರ ಮಾಡಿಕೊಂಡು ಇರುವವರಿಗೆ ಹೆಚ್ಚಿನ ಆದಾಯ ಮೂಲಗಳು ತೆರೆದುಕೊಳ್ಳಲಿವೆ. ಸಂತಾನ ಅಪೇಕ್ಷಿತರಿಗೆ ಶುಭವಾದ ಬೆಳವಣಿಗೆಗಳು ಆಗಲಿವೆ, ಮನಸ್ಸಿಗೆ ನೆಮ್ಮದಿಯಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7

ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ. ಕೆಲಸ- ಕಾರ್ಯಗಳು ತುಂಬ ಅಚ್ಚುಕಟ್ಟಾಗಿ ಮುಗಿಯಲಿವೆ. ನಿಮ್ಮ ಮಾತಿನ ಮೂಲಕ ಮಾಡುವ ಶಿಫಾರಸುಗಳಿಗೆ ತೂಕ ಸಿಗಲಿದೆ. ರಾಜಕಾರಣವನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರಿಗೆ ಸವಾಲಿನ ದಿನವಾಗಿರುತ್ತದೆ. ನಿಮ್ಮ ಧೈರ್ಯದ ನಿರ್ಧಾರಗಳಿಂದ ನಾಲ್ಕಾರು ಜನರಿಗೆ ಅನುಕೂಲ ಆಗಲಿದೆ. ವಿವಾಹಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಸಂಬಂಧದಲ್ಲೇ ವಧು/ವರ ದೊರೆಯುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನೀವಾಗಿಯೇ ಮಾಡಿಕೊಂಡಂಥ ಜವಾಬ್ದಾರಿಯನ್ನು ಪೂರ್ಣಗೊಳಿಸಲು ಈ ದಿನ ಹರಸಾಹಸ ಪಡುತ್ತೀರಿ. ಯಾರಿಂದಲೋ ಸಹಾಯ ಕೇಳಿ, ಇಲ್ಲ ಎನಿಸಿಕೊಂಡು ಅವಮಾನಕ್ಕೆ ಗುರಿಯಾದಂತೆ ಎಂದು ನಿಮಗೇ ಎನಿಸುತ್ತದೆ. ಎಲೆಕ್ಟ್ರಿಕಲ್ ಉಪಕರಣಗಳಿಗಾಗಿ ಹಣ ಖರ್ಚು ಮಾಡುವಂಥ ಯೋಗ ಇದೆ. ವ್ಯಾಪಾರ- ವ್ಯವಹಾರ ಸ್ಥಳದಲ್ಲಿ ನಿಮ್ಮಿಂದ ನಿರೀಕ್ಷೆ ಮಾಡುವುದು ವಿಪರೀತ ಹೆಚ್ಚಾಗಲಿದೆ. ಇದರಿಂದ ಸ್ವಲ್ಪ ಮಟ್ಟಿಗೆ ಒತ್ತಡದ ಸನ್ನಿವೇಶ ಇರುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಕೈಲಿ ಹಣವಿದೆ ಅಂತಾದರೆ ಕೂಡಿಡುವ ಬಗ್ಗೆ, ಅಂದರೆ ಸೇವಿಂಗ್ಸ್ ಬಗ್ಗೆ ಮಾತ್ರ ಆಲೋಚನೆಯನ್ನು ಮಾಡಿ. ಯಾವುದೇ ಕಾರಣಕ್ಕೂ ಹೂಡಿಕೆ ಮಾಡುವ ಕುರಿತು ಮನಸ್ಸು ಹರಿಸಬೇಡಿ. ಮೊದಲ ಬಾರಿಗೆ ಪರಿಚಯವಾದವರು, ಆಕರ್ಷಕವಾಗಿ ಮಾತನಾಡಿದರು ಎಂಬ ಕಾರಣಕ್ಕೆ ಅವರಿಗೆ ನಿಮ್ಮ ವೈಯಕ್ತಿಕ ವಿಚಾರಗಳನ್ನು ಹೇಳದಿರಿ. ಎಲ್ಲರೂ ಅನುಸರಿಸುವ ದಾರಿ ಸರಿಯಾಗಿಯೇ ಇರಬೇಕು ಎಂಬ ನಂಬಿಕೆ ಈ ದಿನ ಬೇಡ.

ಲೇಖನ- ಎನ್‌.ಕೆ.ಸ್ವಾತಿ

Published On - 12:59 am, Sun, 11 June 23