Horoscope: ನಿತ್ಯಭವಿಷ್ಯ; ಈ ರಾಶಿಯವರಿಗೆ ಇಂದು ನೋವನ್ನು ನುಂಗಿ ಬದುಕುವ ರೀತಿಯು ಗೊತ್ತಾಗಲಿದೆ

|

Updated on: Mar 27, 2024 | 12:15 AM

ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರಾಗಿದ್ದರೇ, 27 ಮಾರ್ಚ್​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ನಿತ್ಯಭವಿಷ್ಯ; ಈ ರಾಶಿಯವರಿಗೆ ಇಂದು ನೋವನ್ನು ನುಂಗಿ ಬದುಕುವ ರೀತಿಯು ಗೊತ್ತಾಗಲಿದೆ
ದಿನಭವಿಷ್ಯ
Image Credit source: freepik
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರೇ? ಹಾಗಿದ್ದರೆ ಇಂದಿನ (ಮಾರ್ಚ್​​​​ 27) ರಾಶಿ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಚಿತ್ರಾ, ಯೋಗ : ವ್ಯಾಘಾತ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 32 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:38 ರಿಂದ 02:09ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:04 ರಿಂದ 09:35ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:07 ರಿಂದ 12:38ರ ವರೆಗೆ.

ಮೇಷ ರಾಶಿ : ಯಾವುದನ್ನೂ ಮಾತನಾಡಿದಷ್ಟು ಸುಲಭವಾಗಿ ಮಾಡಲಾಗದು. ತಾಳ್ಮೆಯಿಂದ ಕೆಲಸವನ್ನು ಮಾಡುವುದು ಉತ್ತಮ. ದುಡುಕುವ ಸನ್ನಿವೇಶದಲ್ಲಿ ಸುಮ್ಮನಿದ್ದುಬಿಡುವುದು ಉತ್ತಮ. ವಿದ್ಯಾರ್ಥಿಗಳು ತಮ್ಮ ಬುದ್ಧಿವಂತಿಕೆಯನ್ನು ತೋರಿಸಬಹುದು. ಪ್ರಣಯಕ್ಕೆ ಈ ದಿನವು ಒಳ್ಳೆಯದು. ಆದಷ್ಟು ನೀರಿನಿಂದ ದೂರವಿರಿ. ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ಯಾರಿಗಾದರೂ ಹಣವನ್ನು ನೀಡಲು ಸಂಗಾತಿಯಿಂದ ಒತ್ತಡ ಬರಬಹುದು. ನಿಮ್ಮ ಚರ ಸ್ವತ್ತನ್ನು ರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಬರಬಹುದು. ಸ್ನೇಹಿತರಿಂದ ಅಲ್ಪ ಆರ್ಥಿಕ ಲಾಭವು ನಿಮಗೆ ಸಿಗುವುದು. ಆರಾಮಾಗಿ ಇರಲು ನೀವು ಹೆಚ್ಚು ಇಷ್ಟಪಡುವಿರಿ. ನಿಮಗೆ ಹೊಂದಿಕೆಯಾಗದ ಕೆಲಸಕ್ಕೆ ಸೇರಿಕೊಂಡು ಕಷ್ಟಪಡುವಿರಿ.

ವೃಷಭ ರಾಶಿ : ನಿಮ್ಮ ಕೆಲಸದ ಸ್ಥಳವನ್ನು ಬಿಡಬೇಕಾಗಿಬರಬಹುದು. ನಿಮಗೆ ತೃಪ್ತಿಯಾಗುವ ಕೆಲಸವನ್ನು ಮಾಡುವಿರಿ. ಹೂಡಿಕೆಯ ಕಾರಣ ಆರ್ಥಿಕವಾಗಿ ಕಷ್ಟವಾಗಬಹುದು. ನಿಮ್ಮ ಕಾರ್ಯದಿಂದ ಖ್ಯಾತಿಯು ಸಿಗಲಿದೆ.‌ ಕುಟುಂಬದ ಜೊತೆಗಿನ ನಿಮ್ಮ ಈ ದಿನವು ಉತ್ತಮವಾಗಿರುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು. ಹಣದಿಂದ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳುವಿರಿ. ನೋವನ್ನು ನುಂಗಿ ಬದುಕುವ ರೀತಿಯು ನಿಮಗೆ ಗೊತ್ತಾಗಲಿದೆ. ಇನ್ನೊಬ್ಬರನ್ನು ನೋವನ್ನು ನೀವು ಅರ್ಥ ಮಾಡಿಕೊಳ್ಳದೇ ವ್ಯವಹತಿಸುವಿರಿ. ನೂತನ ವಸ್ತುಗಳನ್ನು ಖರೀದಿಸುವಿರಿ. ಮಾತಿನಿಂದ ನಿಮ್ಮ ಬಗ್ಗೆ ಇರುವ ಸ್ವಭಾವವು ಬದಲಾಗುವುದು.

ಮಿಥುನ ರಾಶಿ : ನಿಮಗೆ ಇಂದು ವ್ಯವಸಾಯದ ಕುರಿತು ಆಸಕ್ತಿಯು ಬರಬಹುದು. ಆದಾಯದ ನಿಖರತೆಯನ್ನು ಸ್ಪಷ್ಟವಾಗಿಸಿಕೊಂಡು ಏನನ್ನಾದರೂ ಖರೀದಿಸುವಿರಿ. ನಿತ್ಯದ ಕಾರ್ಯವನ್ನು ಬೇರೆ ವಿಧಾನದಲ್ಲಿ ಮಾಡಿ ಯಶಸ್ಸು ಕಾಣುವಿರಿ. ನಿಮ್ಮ ಆಲೋಚನೆಗಳು ಅಸ್ಥಿರ ಮತ್ತು ದ್ವಂದ್ವಗಳಿಂದ ಕೂಡಿರುತ್ತದೆ. ವಾಹನ ಸೌಕರ್ಯವು ಪ್ರಾಪ್ತಿಯಾಗಲಿದೆ. ಹೊಸ ಬಟ್ಟೆ ಖರೀದಿಸಲಾಗುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ. ಹೊಸ ಉದ್ಯಮವನ್ನು ಆರಂಭಿಸಲು ನಿಮಗೆ ಧೈರ್ಯವು ಸಾಲದು. ಅಪರಿಚಿತರ ಜೊತೆ ಸಲುಗೆ ಅನವಶ್ಯಕ. ಉದ್ಯಮವನ್ನು ನಡೆಸಲು ಇನ್ನೊಬ್ಬರ ಜೊತೆ ಸೇರಿಕೊಳ್ಳುವಿರಿ. ದಾಂಪತ್ಯ ಜೀವನದಲ್ಲಿ ನಿಮ್ಮ ಸ್ಥಾನವು ಮುಖ್ಯವಾದಂತೆ ತೋರುವುದು. ಮಕ್ಕಳ ಬಗ್ಗೆ ಕಾಳಜಿಯ ಅಗತ್ಯ ಇರುವುದು.

ಕಟಕ ರಾಶಿ : ನಿಮ್ಮ ಆಕಾರ್ಷಕ ಸ್ವಭಾವದಿಂದ ಬೇಕಾದುದನ್ನು ಪಡೆಯುವಿರಿ. ವ್ಯಾಪಾರದಲ್ಲಿ ಇಂದು ಗಮನಾರ್ಹ ಬದಲಾವಣೆ ಅಗಲಿದೆ. ಸುಲಭವಾದ ಕಾರ್ಯವನ್ನು ಕಷ್ಟದಿಂದ ಮಾಡಬೇಕಾಗುವುದು. ರೋಗಕ್ಕೆ ಸೂಕ್ತ ಚಿಕಿತ್ಸೆಯನ್ನು ಮಾಡಿಕೊಳ್ಳುವ ಕಡೆ ಗಮನವಿರಲಿ. ಅತಿಯಾದ ನಿಮ್ಮ ಸೂಕ್ಷ್ಮ ಸ್ವಭಾವದಿಂದ ನಿಮಗೇ ತೊಂದರೆಯಾಗುತ್ತದೆ. ಕಾನೂನು ಬಾಹಿರ ಚಟುವಟಿಕೆಗಳನ್ನು ಆದಷ್ಟು ತಪ್ಪಿಸಿ. ಮನಸ್ಸಿನ ಶಾಂತಿಯನ್ನು ಪಡೆಯಲು ಶ್ರಮಿಸಬೇಕು. ನಿಮ್ಮ ಹೊಸ ಕರ್ತವ್ಯವನ್ನು ಮರೆಯಬಹುದು. ಅಲ್ಪದರಲ್ಲಿ ನೀವು ಪಾರಾಗಿ ನೆಮ್ಮದಿ ಪಡೆಯುವಿರಿ. ದುರಭ್ಯಾಸವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಮನೆಗೆ ಬೇಕಾದ ವಸ್ತುಗಳ ಖರೀದಿ ನಡೆಸುವಿರಿ. ಆಗಬೇಕಾದ ಕೆಲಸಗಳ ಬಗ್ಗೆ ನಿಮಗೆ ಆತಂಕ ಇರುವುದು. ಅಗತ್ಯವಾದಷ್ಟನ್ನು ಮಾತ್ರ ಬಳಸಿಕೊಳ್ಳಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ