Horoscope: ಈ ರಾಶಿಯವರು ಸಂಪತ್ತಿಗಾಗಿ ದುರ್ಮಾರ್ಗವನ್ನು ಹಿಡಿಯುವ ಸಾಧ್ಯತೆ ಇದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 28, 2024 | 12:15 AM

ಆಗಸ್ಟ್​ 28,​ 2024ರ​​ ನಿಮ್ಮ ರಾಶಿಭವಿಷ್ಯ: ಇಂದು ಯಾರನ್ನೂ ಬೇಗನೆ ನಂಬಲಾರಿರಿ. ಸಂಪತ್ತಿಗಾಗಿ ದುರ್ಮಾರ್ಗವನ್ನು ಹಿಡಿಯುವ ಸಾಧ್ಯತೆ ಇದೆ. ಎಷ್ಟೋ ವಿಚಾರಗಳಿಗೆ ನೀವು ನಕಾರಾತ್ಮಕ ಪ್ರತಿಕ್ರಿಯೆ ನೀಡುವಿರಿ. ಕೆಲವು ಸಂದರ್ಭದಲ್ಲಿ ಸುಮ್ಮನಿರುವುದೇ ಲೇಸು ಎಂದು ಅರಿವಾಗುವುದು.. ಹಾಗಾದರೆ ಆಗಸ್ಟ್​ 28ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಈ ರಾಶಿಯವರು ಸಂಪತ್ತಿಗಾಗಿ ದುರ್ಮಾರ್ಗವನ್ನು ಹಿಡಿಯುವ ಸಾಧ್ಯತೆ ಇದೆ
ರಾಶಿ ಭವಿಷ್ಯ
Follow us on

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ದಶಮೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ವ್ಯಾಘಾತ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:45 ಗಂಟೆ, ರಾಹು ಕಾಲ ಮಧ್ಯಾಹ್ನ 12:34 ರಿಂದ 14:07, ಯಮಘಂಡ ಕಾಲ ಬೆಳಗ್ಗೆ 07:55 ರಿಂದ 09:28ರ ವರೆಗೆ, ಗುಳಿಕ ಕಾಲ 11:01 ರಿಂದ12:34ರ ವರೆಗೆ.

ಮೇಷ ರಾಶಿ : ಬಹಳ ಪರಿಶ್ರಮದಿಂದ ಇಂದು ಸ್ಥಳವನ್ನು ತಲುಪುವಿರಿ. ಬೇಡದ ವಿಚಾರಕ್ಕೆ ಮೂಗು ತೂರಿಸುವುದು ಬೇಡ. ನಿಮ್ಮ ಯೋಜನೆಗೆ ಹೊಂದಿಕೆಯಾಗುವಂತಹ ವ್ಯಕ್ತಿಗಳ ಭೇಟಿಯಾಗಲಿದೆ. ಅವರ ಜೊತೆ ಹೆಚ್ಚಿನ ಚರ್ಚೆಗಳನ್ನು ಮಾಡುವಿರಿ. ಆಪ್ತರ ಸಣ್ಣ ಬದಲಾವಣೆಯೂ ನಿಮಗೆ ಸಹಿಸಲು ಕಷ್ಟವಾದೀತು. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯುವರು. ನಿಮಗೆ ಕೊಟ್ಟ ಅಧಿಕಾರವನ್ನು ಸದುಪಯೋಗಿ ಮಾಡಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿ. ಸಿಟ್ಟುಗೊಳ್ಳದೇ ತಾಳ್ಮೆಯಿಂದ ಕಾರ್ಯವನ್ನು ಸವಾಲನ್ನು ಎದುರಿಸುವ ಕಲೆ ಗೊತ್ತಿದೆ. ಅನೇಕ ದಿನಗಳಿಂದ ಮಾಡಬೇಕು ಎಂದುಕೊಂಡ ಕೆಲಸವನ್ನು ನೀವು ಆರಂಭಿಸುವಿರಿ. ದಾಂಪತ್ಯದಲ್ಲಿ ಸುಖವಾಗಿರಲು ಎಲ್ಲಿಗಾದರೂ ಹೋಗಿಬರುವುದು ಉತ್ತಮ.‌ ಹೊಸಪ್ರದೇಶದಿಂದ ನಿಮಗೆ ಉತ್ಸಾಹ ಬರಲಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಭಾವ ನಿಮ್ಮಲ್ಲಿರಲಿ.

ವೃಷಭ ರಾಶಿ : ಇಂದು ಎಲ್ಲದಕ್ಕೂ ವಿರೋಧ ಮಾಡುವುದು ನಿಮಗೇ ಇದು ಸರಿ ಕಾಣದು. ವಿಷಯ ಹಳೆಯದಾದರೂ ನಿಮ್ಮ ಬುದ್ಧಿಗೆ ಕೆಲಸವು ಸಾಕಷ್ಟು ಸಿಗುತ್ತದೆ. ಇಂದು ನೀವು ಕೆಲಸದಿಂದ ವಿಶ್ರಾಂತಿ ಪಡೆಯುವಿರಿ. ಮಕ್ಕಳು ನಿಮ್ಮ ಕೆಲಸಗಳನ್ನು ಮಾಡಿಕೊಡುವರು. ಯಾರ ಋಣವನ್ನೂ ಇಟ್ಟುಕೊಳ್ಳಲು ಬಯಸಲಾರಿರಿ. ನಿಮ್ಮ ವಿವಾಹವನ್ನು ಮಾಡಿಸಲು ಬಂಧುಗಳು ಮಾಡಿದ ಪ್ರಯತ್ನವು ನಿಷ್ಪ್ರಯೋಜಕವಾದೀತು. ರಾಜಕಾರಣದಲ್ಲಿ ನಿಮ್ಮ ಪ್ರಭಾವ ಕಡಿಮೆಯಾದೀತು. ಇಂದು ಯಾರನ್ನೂ ಬೇಗನೆ ನಂಬಲಾರಿರಿ. ಸಂಪತ್ತಿಗಾಗಿ ದುರ್ಮಾರ್ಗವನ್ನು ಹಿಡಿಯುವ ಸಾಧ್ಯತೆ ಇದೆ. ಎಷ್ಟೋ ವಿಚಾರಗಳಿಗೆ ನೀವು ನಕಾರಾತ್ಮಕ ಪ್ರತಿಕ್ರಿಯೆ ನೀಡುವಿರಿ. ಕೆಲವು ಸಂದರ್ಭದಲ್ಲಿ ಸುಮ್ಮನಿರುವುದೇ ಲೇಸು ಎಂದು ಅರಿವಾಗುವುದು. ಅವರೂ ನಿಮ್ಮ ಯಶಸ್ಸಿನ ಪಾಲುದಾರರು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಯಾರಾದರೂ ನಿಮ್ಮ ಗುಟ್ಟನ್ನು ಹೊರಹಾಕಬಹುದು. ನಿಮ್ಮ ರಹಸ್ಯವನ್ನು ಬಿಟ್ಟುಕೊಡಲಾರಿರಿ. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು.

ಮಿಥುನ ರಾಶಿ : ಇಂದು ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ನಿಮ್ಮ ದೃಷ್ಟಿ ಬದಲಾದರೆ ಎಲ್ಲವೂ ತಾನಾಗಿಯೇ ಬದಲಾಗುತ್ತದೆ. ಇಂದು‌ ನೀವು ಸಣ್ಣ ವಿಚಾರವೆಂದು ಕಡೆಗಣಿಸಿದ್ದು ದೊಡ್ಡದಾಗಬಹುದು. ಸರಳವಿಧಾನವನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಇಂದಿನ ಹಣದ ಅವಶ್ಯಕತೆಯನ್ನು ಸಹೋದರನ ಮೂಲಕ ಪೂರೈಸಿಕೊಳ್ಳುವಿರಿ. ಆಸ್ತಿಯ ವಿಚಾರವಾಗಿ ನ್ಯಾಯಾಲಯಕ್ಕೆ ಹೋಗಬೇಕಾದೀತು. ನಿಮ್ಮ‌ ಇಂದಿನ ವರ್ತನೆಗಳೇ ನೀವು ಯಾರೆಂದು ತಿಳಿಸುತ್ತದೆ. ಸರ್ಕಾರಿ ಕೆಲಸಗಳನ್ನು ಹಣದ ಮೂಲಕ ಬೇಗ ಮಾಡಿಸಿಕೊಳ್ಳುವಿರಿ. ಮಾತುಗಾರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಅವರು ಅವಕಾಶಗಳನ್ನು ಹುಡುಕುವರು. ನಿಮ್ಮವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಹಿರಿಯರ ಎದುರು ವಿನಯದಿಂದ ಮಾತನಾಡಿ. ಅತಿಥಿಗಳನ್ನು ಗೌರವಿಸಿ, ಸತ್ಕರಿಸುವಿರಿ. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.

ಕರ್ಕಾಟಕ ರಾಶಿ : ಇಂದು ನಿಮ್ಮ ಅಧ್ಯಾತ್ಮದ ಆಸಕ್ತಿಗೆ ಯೋಗ್ಯವಾದ ಜನ ಹಾಗೂ ವಿಷಯ ಸಿಗಲಿದೆ. ಎಲ್ಲದಕ್ಕೂ ಉತ್ತರವಿರುತ್ತದೆಯಾದರೂ ನಿಮ್ಮ ಕಾರ್ಯವೇ ಉತ್ತರದಂತಿರಲಿ. ‌ಈ ಕಾರಣಕ್ಕಾಗಿ ಕೆಲವರನ್ನು ಎದುರು ಹಾಕಿಕೊಳ್ಳಬೇಕಾದೀತು. ಕೃಷಿಯ ಚಟುವಟಿಕೆಯಲ್ಲಿ ಇಂದು ಆಸಕ್ತಿ ಕಡಿಮೆಯಾಗಿ ಮನೆಯಲ್ಲಿಯೇ ಇರುವಿರಿ. ಕೆಲವರ ಮಾತು ನಿಮ್ಮನ್ನು ಭ್ರಾಂತಗೊಳಿಸಬಹುದು. ದಾಯಾದಿಗಳು ನಿಮ್ಮ ಅವನತಿಯನ್ನು ಕಾಯುತ್ತ ನಿಮ್ಮ ಹಿತಶತ್ರುಗಳಾಗಿರುವರು. ನಿಮ್ಮ ಕೆಲಸಕ್ಕೆ ಯಾರ ಹಸ್ತಕ್ಷೇಪವನ್ನೂ ಬಯಸಲಾರಿರಿ. ನೀವು ಪ್ರಭಾವಿ ವ್ಯಕ್ತಿಗಳ ಮೂಲಕ ಗಟ್ಟಿ ಮಾಡಿಕೊಳ್ಳುವುದು ಉತ್ತಮ. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು. ಇಂದು ಕೆಲಸದ ಕಾರಣಕ್ಕೆ ಏಕಾಂಗಿಯಾಗಬೇಕಾಗುವುದು.