ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 21 ರಿಂದ 27 ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಎಷ್ಟು ಹಣ, ಶ್ರಮ ಹಾಗೂ ಪ್ರಭಾವ ಬಳಸಿದರೂ ಸರಿ ಅಂದುಕೊಂಡಿದ್ದು ಆಗಲೇಬೇಕು ಎಂಬ ನಿರ್ಧಾರಕ್ಕೆ ಬರಲಿದ್ದೀರಿ. ಈ ಪ್ರಯತ್ನದಿಂದಾಗಿ ನೀವು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಅಂದುಕೊಂಡಿದ್ದನ್ನು ಸಾಧಿಸಿಕೊಳ್ಳಲಿದ್ದೀರಿ. ಅದರಲ್ಲೂ ನೀವೇನಾದರೂ ರಾಜಕಾರಣದಲ್ಲಿ ಇದ್ದು, ಪದೋನ್ನತಿ ನಿರೀಕ್ಷೆ ಮಾಡುತ್ತಿದ್ದಲ್ಲಿ ಶುಭ ಸುದ್ದಿ ಕೇಳಿಬರಲಿದೆ. ನಿಮ್ಮನ್ನು ವಿರೋಧಿಸುತ್ತಾ ಬಂದಿರುವವರ ವಿರುದ್ಧ ಭಾರೀ ಯಶಸ್ಸು ದೊರೆಯಲಿದೆ. ವಿಲಾಸಿ ಕಾರು ಖರೀದಿಸುವಂಥ ಯೋಗ ಇದ್ದು, ಬಹಳ ಆಪ್ತರಾದವರು ಉಡುಗೊರೆಗಳನ್ನು ನೀಡಲಿದ್ದಾರೆ.
ಈಗಾಗಲೇ ಸೈಟ್ ಇದ್ದು, ಮನೆ ಕಟ್ಟಿಸುವ ಬಗ್ಗೆ ಆಲೋಚನೆ ಮಾಡುತ್ತಿರುವವರು ಬ್ಯಾಂಕ್ ಗಳಲ್ಲಿ ಸಾಲಕ್ಕಾಗಿ ಪ್ರಯತ್ನಿಸಲಿದ್ದೀರಿ. ಇದು ಸಲೀಸಾಗಿ ಸಿಗುವಂಥ ಯೋಗ ಸಹ ಇದೆ. ಹೊಸಬರ ಜತೆಗೆ ವ್ಯವಹಾರ ಮಾಡುವಾಗ ಮಾತ್ರ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಮಾತನಾಡುವಾಗ ಅಂತರಂಗದ ವಿಚಾರಗಳನ್ನು ಹಂಚಿಕೊಳ್ಳಬಾರದು. ಕೃಷಿಕರಿಗೆ ಈ ಹಿಂದೆ ಅರ್ಜಿ ಹಾಕಿಕೊಂಡಿದ್ದ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ಆರ್ಥಿಕವಾಗಿ ಸಬಲರಾಗುವುದಕ್ಕೆ ಮಾರ್ಗಗಳು ಗೋಚರ ಆಗಲಿವೆ. ಒಂದೆರಡು ಕಾಗದ- ದಾಖಲೆಗಳನ್ನು ಸಲ್ಲಿಸಿದರೆ ಕೆಲಸ ಮುಗಿಯಿತು ಎಂದಿರುವುದೆಲ್ಲ ಈ ವಾರ ಪೂರ್ಣಗೊಳಿಸುವುದಕ್ಕೆ ಸಾಧ್ಯವಾದೀತು. ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವವರಿಗೆ ಆದಾಯದಲ್ಲಿ ಭಾರೀ ಹೆಚ್ಚಳ ಆಗಲಿದೆ.
ವೃತ್ತಿನಿರತರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಇಷ್ಟು ಸಮಯ ನಿಮಗೆ ದೊರೆಯುತ್ತಿದ್ದ ಆದಾಯದಲ್ಲಿ ಹೆಚ್ಚಳ ಆಗುವಂತೆ ಕೆಲವು ಒಪ್ಪಂದಗಳು ಏರ್ಪಡಲಿವೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೆ ಹೊಸ ವಾಹನಗಳು ದೊರೆಯುವಂಥ ಯೋಗ ಇದೆ. ಬಹಳ ಸಮಯದಿಂದ ಕೇಳುತ್ತಾ ಬಂದು, ಪೋಷಕರು ಮುಂದಕ್ಕೆ ಹಾಕುತ್ತಾ ಬರುತ್ತಿದ್ದಲ್ಲಿ ಈಗ ವಾಹನಗಳು ದೊರೆಯಲಿವೆ. ಮಹಿಳೆಯರು ಉದ್ಯಮ- ವ್ಯವಹಾರ ಮಾಡುತ್ತಿದ್ದಲ್ಲಿ ಮತ್ತೂ ಒಂದು ಶಾಖೆ ತೆರೆಯುವ, ವ್ಯಾಪಾರವನ್ನು ವಿಸ್ತರಣೆ ಮಾಡುವಂಥ ಯೋಗ ಇದೆ.
ಯಾರು- ಯಾವ ಉದ್ದೇಶದಿಂದ ನಿಮ್ಮ ಮೇಲೆ ಬಹಳ ಪ್ರೀತಿ ಇರುವಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಸಂಗತಿ ಈ ವಾರ ನಿಮಗೆ ಗೊತ್ತಾಗಲಿದೆ. ನಿಮ್ಮಿಂದ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡು, ಅದನ್ನು ನಿಮ್ಮೆದುರು ಪದೇಪದೇ ಹೇಳುವವರ ನಡವಳಿಕೆಯು ಬೇಸರ ಮೂಡಿಸಲಿದೆ. ಮುಖ್ಯವಾಗಿ ನಿಮ್ಮ ಹೆಸರು, ಹುದ್ದೆ, ಅಧಿಕಾರದ ಕಾರಣಕ್ಕೆ ಹತ್ತಿರ ಆದವರು ಯಾರು ಎಂಬುದನ್ನು ಈಗ ಗುರುತಿಸಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಆಕರ್ಷಣೆ ಹೆಚ್ಚಾಗಬಹುದು. ಅಥವಾ ವಿವಾಹಿತರ ಕಡೆಗೆ ಮೋಹ ಸೆಳೆಯಬಹುದು. ಇಂಥ ವಿಚಾರಗಳಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಿ.
ನೀವು ಅಂದುಕೊಂಡಂತೆಯೇ ಔದ್ಯೋಗಿಕ ವಿಚಾರದಲ್ಲಿ ಬೆಳವಣಿಗೆಗಳು ಆಗಲಿವೆ. ಹೆಚ್ಚಿನ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ. ಇವುಗಳನ್ನು ಪೂರ್ಣಗೊಳಿಸಲು ಬೇಕಾದಷ್ಟು ಸಮಯವನ್ನು ಮೀಸಲಿಡುವುದು ಕಷ್ಟ ಎನಿಸಲಿದೆ. ಕೃಷಿಕರಾಗಿದ್ದಲ್ಲಿ ಮಕ್ಕಳ ಶಿಕ್ಷಣದ ಸಲುವಾಗಿ ಹೆಚ್ಚಿನ ಖರ್ಚುಗಳನ್ನು ಮಾಡಬೇಕಾಗುತ್ತದೆ. ಇದಕ್ಕಾಗಿ ಸಾಲ ಮಾಡಬೇಕಾಗಬಹುದು. ಸ್ವಲ್ಪ ಪ್ರಮಾಣದ ಭೂಮಿಯೋ ರಾಸುಗಳನ್ನೋ ಮಾರಾಟ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಬೆನ್ನು ನೋವು ವಿಪರೀತ ಕಾಡಲಿದೆ. ಸಣ್ಣ- ಪುಟ್ಟ ಆಪರೇಷನ್ ಆದರೂ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ವೈದ್ಯರು ಹೇಳುವ ಸಾಧ್ಯತೆಗಳಿವೆ.
ವೃತ್ತಿನಿರತರಿಗೆ ಸ್ಪರ್ಧೆ ಜಾಸ್ತಿ ಆಗಲಿದೆ. ನಿಮಗಿಂತ ಕಡಿಮೆ ಮೊತ್ತಕ್ಕೆ ಕೆಲಸ ಒಪ್ಪಿಕೊಂಡು ಮಾಡುವಂಥವರ ಸ್ಪರ್ಧೆಯನ್ನು ತಡೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಸ್ನೇಹಿತರ ಜತೆಗೆ ಪ್ರವಾಸ ತೆರಳುವಂಥ ಯೋಗ ಇದೆ. ನೀರಿನಿಂದ ದೂರ ಇರುವುದು ಉತ್ತಮ. ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡುವ ಕಡೆಗೆ ಲಕ್ಷ್ಯ ಕೊಡಿ. ಮಹಿಳೆಯರಿಗೆ ಇತರರ ಸಲುವಾಗಿ, ಇತರರ ಕೆಲಸಕ್ಕಾಗಿ ಓಡಾಟ ನಡೆಸಬೇಕಾಗಬಹುದು.
ನೀವು ಬಹಳ ಇಷ್ಟಪಟ್ಟು ತೆರಳಬೇಕು ಎಂದುಕೊಂಡಿದ್ದ ಸ್ಥಳ, ಖರೀದಿ ಮಾಡಬೇಕು ಎಂದಿದ್ದ ವಸ್ತುಗಳು ಇವೆಲ್ಲವನ್ನು ಸದ್ಯಕ್ಕೆ ಬೇಡ ಎಂದುಕೊಳ್ಳಬೇಕಾಗುತ್ತದೆ. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ನಿಮ್ಮ ಸಮಯ, ಹಣ, ಅಧಿಕಾರ ಇವೆಲ್ಲವನ್ನೂ ಇತರರಿಗಾಗಿ ಮೀಸಲಿಡಬೇಕಾದಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಇನ್ನು ಈಗ ಮಾಡುವುದು ಬೇಡ ಎಂದುಕೊಂಡಿದ್ದ ಕೆಲಸಗಳನ್ನು ಸಹ ಇತರರಿಗಾಗಿ ಮಾಡಲೇಬೇಕಾದ ಸ್ಥಿತಿ ನಿರ್ಮಾಣ ಆಗಲಿದೆ. ಹಣಕಾಸು ವ್ಯವಹಾರಗಳಲ್ಲಿ ತೊಡಗಿಕೊಂಡವರು, ನಿತ್ಯವೂ ಬ್ಯಾಂಕಿಂಗ್ ವ್ಯವಹಾರ ಮಾಡುವವರು ಆಗಿದ್ದಲ್ಲಿ ಹೆಚ್ಚಿನ ಏಕಾಗ್ರತೆಯನ್ನು ವಹಿಸಿ, ಕೆಲಸ ಮಾಡಬೇಕಾಗುತ್ತದೆ.
ಬಹಳ ಸಲೀಸಾಗಿ ಮಾಡಿ ಮುಗಿಸಬಹುದು ಎಂಬ ವಿಶ್ವಾಸದಲ್ಲಿ ಯಾವುದೇ ಕೆಲಸ ಮಾಡುವುದಕ್ಕೆ ಡೆಡ್ ಲೈನ್ ತನಕ ಕಾಯುತ್ತಾ ಕೂರುವುದರಿಂದ ಒತ್ತಡ ಹೆಚ್ಚಾಗಲಿದೆ. ಕೃಷಿಕರಾಗಿ ಕಾರ್ಯ ನಿರ್ವಹಿಸುತ್ತಿರುವವರು ಹೆಚ್ಚುವರಿ ಆದಾಯಕ್ಕಾಗಿ ಹೊಸ ವ್ಯವಹಾರಗಳನ್ನು ಆರಂಭಿಸುವಂತಹ ಯೋಗ ಇದೆ. ಇದಕ್ಕೆ ಸ್ನೇಹಿತರ ಸಹಾಯ, ಬೆಂಬಲ ದೊರೆಯಲಿದೆ. ಕುಟುಂಬದೊಳಗೆ ಪ್ರಮುಖವಾದ ತೀರ್ಮಾನದ ಬಗ್ಗೆ ಅಭಿಪ್ರಾಯ ಭೇದಗಳು ಏರ್ಪಡಬಹುದು. ಆದರೆ ನಾನು ಹೇಳಿದ್ದೇ ಆಗಬೇಕು ಎಂದು ಆಲೋಚನೆ ಮಾಡದಿರಿ. ವೃತ್ತಿನಿರತರಾಗಿದ್ದಲ್ಲಿ ಪ್ರತಿಷ್ಠಿತ ಕಂಪನಿಗಳವರು ನಿಮ್ಮ ಜತೆಗೆ ಒಪ್ಪಂದಗಳನ್ನು ಮಾಡಿಕೊಳ್ಳುವುದಕ್ಕೆ ಬರುವ ಅವಕಾಶಗಳಿವೆ.
ಕೆಲವು ಲಾಭ ಮಾಡುವಂಥ ಅವಕಾಶಗಳು ಅನಾಯಾಸವಾಗಿ ನಿಮ್ಮನ್ನು ಹುಡುಕಿಕೊಂಡು ಬರಲಿವೆ. ನಿಮ್ಮ ಮೇಲಿನ ಆತ್ಮವಿಶ್ವಾಸವನ್ನು ಕಳೆದುಕೊಳ್ಳದಿರಿ. ದೊಡ್ಡ ವ್ಯವಹಾರ ಎಂಬ ಹಿಂಜರಿಕೆ ಇಲ್ಲದಂತೆ ಮುಂದುವರಿಯುವ ಕಡೆಗೆ ಗಮನ ಇರಲಿ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಾಧ್ಯವಾಗದೇ ಅವಮಾನಕ್ಕೆ ಗುರಿ ಆಗುವಂಥ ಯೋಗ ಇದೆ. ಗುರು ಆರಾಧನೆ ಮಾಡುವುದರಿಂದ ಏಕಾಗ್ರತೆ ಸಾಧ್ಯವಾಗುತ್ತದೆ. ಮಹಿಳೆಯರಿಗೆ ಅನಗತ್ಯವಾಗಿ ಖರ್ಚು ಹೆಚ್ಚಳ ಆಗುವಂಥ ಸಾಧ್ಯತೆ ಇದೆ.
ಮನಸ್ಸಿನಲ್ಲಿ ಪದೇಪದೇ ಕೆಟ್ಟದ್ದೇನೋ ನಡೆಯಬಹುದು ಎಂಬ ಭಯ ಕಾಡಲಿದೆ. ಇನ್ನು ತಂದೆಯ ಅಥವಾ ತಾಯಿಯ ಸೋದರರ ಅನಾರೋಗ್ಯ ಸಮಸ್ಯೆಯು ನಿಮ್ಮನ್ನು ಚಿಂತೆಗೆ ಗುರಿ ಮಾಡಲಿದೆ. ಏಕಾಏಕಿ ಹಣಕಾಸಿನ ಮುಗ್ಗಟ್ಟು ತಲೆದೋರಬಹುದು. ಯಾರದೋ ತಪ್ಪಿಗೆ ನೀವು ಬೆಲೆ ಕಟ್ಟಬೇಕಾದಂಥ ಸನ್ನಿವೇಶ ಎದುರಾಗಬಹುದು. ವಿಲಾಸಿ ವಸ್ತುಗಳ ಬಗ್ಗೆ ನಿಮಗೆ ಆಕರ್ಷಣೆ ಹೆಚ್ಚಾಗಿ, ಸಾಲ ಮಾಡಿಯಾದರೂ ಖರೀದಿಸುವಂಥ ಸಾಧ್ಯತೆಗಳಿವೆ. ಪ್ರತಿಷ್ಠೆ ಕಾರಣಕ್ಕಾಗಿಯಾದರೂ ಕೊಳ್ಳುತ್ತೇನೆ ಎಂದು ಹೊರಟು ನಿಲ್ಲಬೇಡಿ. ಇನ್ನು ನಿಮ್ಮಲ್ಲಿ ಯಾರು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಾ ಇದ್ದೀರೋ ಅಂಥವರು ಖರ್ಚು ಮಾಡುವಾಗ ಹತೋಟಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು.
ಎಲ್ಲ ಕೆಲಸ ನಾನು ಮಾಡುತ್ತೇನೆ ಎಂದು ಹೊರಡಬೇಡಿ. ಹಾಗೆ ಮಾಡಿದಲ್ಲಿ ಒಂದೋ ಅಚ್ಚುಕಟ್ಟಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಗದೇ ಹೋಗಬಹುದು ಅಥವಾ ಸಮಯಕ್ಕೆ ಸರಿಯಾಗಿ ಕೆಲಸ ಆಗದಿರಬಹುದು. ಕೃಷಿಕರು ತಮ್ಮ ಮನಸ್ಸಿನಲ್ಲಿ ಅಂದುಕೊಂಡ ವಿಚಾರವನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ದಾಟಿಸುವುದು ಮುಖ್ಯವಾಗುತ್ತದೆ. ಸಂಕೋಚ ಪಟ್ಟುಕೊಂಡೋ ಅಥವಾ ನಿಮ್ಮ ಮಾತಿನಿಂದ ಎದುರಿನವರೇ ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಂಡು ಸುಮ್ಮನಾದಲ್ಲಿ ಏನೂ ಪ್ರಯೋಜನ ಆಗುವುದಿಲ್ಲ. ವೃತ್ತಿನಿರತರು ಈಗಿನ ವೃತ್ತಿಗೆ ಸಂಬಂಧಿಸಿದಂತೆಯೇ ಹೊಸ ಕೋರ್ಸ್ ಗಳನ್ನು ತೆಗೆದುಕೊಳ್ಳುವಂಥ ಯೋಗ ಇದೆ. ಇದಕ್ಕಾಗಿ ಸಾಲ ಮಾಡುವುದಕ್ಕೋ ಅಥವಾ ಕ್ರೆಡಿಟ್ ಕಾರ್ಡ್ ಇಎಂಐ ಹಾಕಿಸುವುದಕ್ಕೋ ಆಲೋಚನೆ ಮಾಡಲಿದ್ದೀರಿ.
ಕುಟುಂಬ ಸದಸ್ಯರೊಬ್ಬರು ನಿಮ್ಮದೇ ವೃತ್ತಿಗೆ ಸಹಾಯಕರಾಗಿ ಅಥವಾ ಕೆಲಸಗಾರರಿಗೆ ಸೇರ್ಪಡೆ ಆಗುವಂಥ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ತುಂಬ ಆಪ್ತರು ಎನಿಸಿಕೊಂಡವರ ಜತೆಗೇ ಮನಸ್ತಾಪಗಳು, ಅಸಮಾಧಾನಗಳು ಕಾಣಿಸಿಕೊಳ್ಳಬಹುದು. ಸಾಧ್ಯವಾದಷ್ಟೂ ಮಾತು ಬೆಳೆಯದಂತೆ ಎಚ್ಚರಿಕೆಯನ್ನು ವಹಿಸಿ. ಇದು ತಾತ್ಕಾಲಿಕವಾದ ಸಮಸ್ಯೆಯಾದ್ದರಿಂದ ವಿಷಯ ಹಿಗ್ಗುತ್ತಾ ಹೋಗದಂತೆ ನೋಡಿಕೊಳ್ಳಿ. ಮಹಿಳೆಯರಿಗೆ ತಾಯಿಯ ಅಥವಾ ತಾಯಿಗೆ ಸಮಾನರಾದವರ ಅನಾರೋಗ್ಯವು ಆತಂಕಕ್ಕೆ ಕಾರಣ ಆಗಬಹುದು.
ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು, ಅದರಲ್ಲೂ ಹಣಕಾಸು ಸಂಸ್ಥೆಗಳಲ್ಲಿ, ಗಾರ್ಮೆಂಟ್, ಎಐ ಅಥವಾ ಮಶೀನ್ ಲರ್ನಿಂಗ್ ಕ್ಷೇತ್ರಗಳಲ್ಲಿ ಇರುವಂಥವರಿಗೆ ಭವಿಷ್ಯದಲ್ಲಿ ದೊಡ್ಡ ಹುದ್ದೆಯೊಂದಕ್ಕೆ ನೀವು ಆಯ್ಕೆ ಆಗುವ ಬಗ್ಗೆ ಸುಳಿವು ದೊರೆಯಲಿದೆ. ಅದಕ್ಕಾಗಿ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಮೇಲಧಿಕಾರಿಗಳು ಸೂಚನೆ ನೀಡಬಹುದು. ಇಂಥ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಿ. ಅವಿವಾಹಿತರಾಗಿದ್ದು, ಮದುವೆಗಾಗಿ ಗಟ್ಟಿ ಪ್ರಯತ್ನಗಳನ್ನು ಮಾಡುತ್ತಾ ಇದ್ದಲ್ಲಿ ತಾತ್ಕಾಲಿಕವಾಗಿ ಅಡೆತಡೆಗಳು ಎದುರಾಗಬಹುದು.
ಇತರರ ಹೇಳಿಕೆ ಮಾತುಗಳಿಗೆ ಕಿವಿಗೊಡಬೇಡಿ. ಈಗಾಗಲೇ ನಿಶ್ಚಿತಾರ್ಥ ಆಗಿದೆ ಎಂದಾದಲ್ಲಿ ಅತಿಯಾದ ಸಲುಗೆಯಿಂದ ಮಾತುಕತೆ ಬೇಡ. ಮೂರನೇ ವ್ಯಕ್ತಿಗಳ ಮಾತಿನಿಂದಾಗಿ ಸಂಬಂಧದಲ್ಲಿ ಅನುಮಾನ ಹಾಗೂ ಅಭಿಪ್ರಾಯ ಭೇದಗಳು ಸೃಷ್ಟಿ ಆಗಬಹುದು. ಕೃಷಿಕರಾಗಿದ್ದಲ್ಲಿ ಹೊಸದಾಗಿ ಜಮೀನು ಖರೀದಿಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಅದರಲ್ಲಿ ಯಶಸ್ಸು ಕಾಣಲಿದ್ದೀರಿ. ಇನ್ನು ಜಮೀನಿನಲ್ಲಿ ಗೋದಾಮು ನಿರ್ಮಿಸಬೇಕು, ಕೊಳವೆಬಾವಿ ತೋಡಿಸಬೇಕು, ತಂತಿ ಬೇಲಿ ನಿರ್ಮಾಣ ಮಾಡಬೇಕು ಎಂದುಕೊಳ್ಳುತ್ತಿದ್ದಲ್ಲಿ ಅದನ್ನು ಮಾಡಿಸುವುದಕ್ಕೆ ಇದು ಸೂಕ್ತವಾದ ಸಮಯ ಆಗಲಿದೆ.
ಇನ್ನು ಅಗತ್ಯವಾದ ಹಣಕಾಸು ಸಹ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ವೃತ್ತಿನಿರತರು ವಿದೇಶ ಪ್ರಯಾಣಕ್ಕೆ ತೆರಳುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ವೀಸಾ ಇತ್ಯಾದಿ ವಿಚಾರವಾಗಿ ಅಡೆತಡೆಗಳು ಎದುರಾಗಿದ್ದಲ್ಲಿ ಅವು ನಿವಾರಣೆ ಆಗಲಿವೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಅದಕ್ಕೆ ಪೂರಕವಾದ ಕೋರ್ಸ್ ಗೆ ಸೇರ್ಪಡೆ ಆಗುವಂಥ ಯೋಗ ಇದೆ. ಇದರಿಂದ ಭವಿಷ್ಯದಲ್ಲಿ ಅನುಕೂಲ ಆಗಲಿದೆ. ನಿಮ್ಮ ಆಯ್ಕೆಗೆ ಇತರರ ಬೆಂಬಲ ದೊರೆಯುತ್ತದೆ. ಯುವತಿಯರು ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಇನ್ನೂ ಸ್ವಲ್ಪ ಕಾಲ ಪ್ರಯತ್ನ ಮಾಡುವುದು ಬೇಡ ಎಂದು ನಿರ್ಧಾರ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದು.
ದೀರ್ಘ ಸಮಯದಿಂದ ನೀವು ಅಂದುಕೊಂಡಿದ್ದ ಅಥವಾ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದ ದೊಡ್ಡ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಮನೆಯಲ್ಲಿ ಇದಕ್ಕಾಗಿ ಬೇಕಾದ ವಸ್ತುಗಳನ್ನು ಹೊಂದಿಸುವುಕ್ಕೆ ಹಣ ಖರ್ಚು ಮಾಡುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ಉದ್ಯಮ- ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡಲಿದ್ದೀರಿ. ಬಹಳ ಸಮಯದಿಂದ ಪ್ರಯತ್ನ ಮಾಡುತ್ತಿದ್ದ ಕೆಲಸವೊಂದು ಸುಲಭವಾಗಿ ಮುಗಿಸುವುದಕ್ಕೆ ವೇದಿಕೆ ಸಿದ್ಧವಾಗಲಿದೆ. ಹಳೆಯ ಸ್ನೇಹಿತರೊಬ್ಬರ ಭೇಟಿಯಿಂದ ಮನಸ್ಸಿಗೆ ಉಲ್ಲಾಸ, ಉತ್ಸಾಹ ಇರಲಿದೆ.
ಹೊಸ ಕಾರು ಅಥವಾ ದ್ವಿಚಕ್ರ ವಾಹನ ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಹಣಕಾಸಿನ ಹೊಂದಾಣಿಕೆ ಆಗಲಿದೆ. ಇದಕ್ಕಾಗಿ ಅಡ್ವಾನ್ಸ್ ನೀಡುವಂಥ ಯೋಗ ಸಹ ಇದೆ. ಮನೆಯಲ್ಲಿ ಕುಟುಂಬದ ಜತೆಗೆ ಸಂತೋಷವಾಗಿ ಸಮಯ ಕಳೆಯಲಿದ್ದೀರಿ. ಕೃಷಿಕರಿಗೆ ರಾಜಕೀಯ ವ್ಯಕ್ತಿಗಳ ಜತೆಗೆ ಗುರುತಿಸಿಕೊಂಡು, ಇತರರಿಂದ ವಿರೋಧ ಎದುರಿಸಬೇಕಾದ ಅಥವಾ ಮಾತಿಗೆ ಮಾತು ಬೆಳೆದು, ವಾಗ್ವಾದ ಆಗುವಂಥ ಸಾಧ್ಯತೆ ಇದೆ. ತಾತ್ಕಾಲಿಕವಾಗಿ ಅನುಕೂಲ ಆಗುತ್ತದೆ ಎಂಬ ಕಾರಣದಿಂದ ಆಪ್ತರನ್ನು ದೂರ ಮಾಡಿಕೊಳ್ಳಬೇಡಿ. ಇದರಿಂದ ಭವಿಷ್ಯದಲ್ಲಿ ಸಮಸ್ಯೆ ಆಗುವಂಥ ಸಾಧ್ಯತೆಗಳಿವೆ.
ವೃತ್ತಿ ನಿರತರಿಗೆ ಏಕಾಏಕಿ ಆಸಕ್ತಿ ಕಡಿಮೆ ಆಗಲಿದೆ. ಡೆಡ್ ಲೈನ್ ಒಳಗಾಗಿ ಒಪ್ಪಿಕೊಂಡ ಕೆಲಸ- ಕಾರ್ಯಗಳನ್ನು ಮುಗಿಸುವುದು ಸವಾಲಾಗಿ ಪರಿಣಮಿಸುತ್ತದೆ. ಇದರಿಂದ ನಿಮಗೆ ಕೆಲಸ ವಹಿಸುವಂಥವರು ಇನ್ನು ಮುಂದೆ ಹೊಸ ಕೆಲಸಗಳನ್ನು ನೀಡುವ ಮುಂಚೆ ಆಲೋಚಿಸುವಂಥ ಸ್ಥಿತಿ ಎದುರಾಗಬಹುದು. ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯಲ್ಲಿ ನಾಯಕತ್ವ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮೂಲಕ ಜನಪ್ರಿಯರಾಗಲಿದ್ದಾರೆ. ಮಹಿಳೆಯರಿಗೆ ಕಿವಿ- ಗಂಟಲು, ಮೂಗಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಕಡ್ಡಾಯವಾಗಿ ವೈದ್ಯರನ್ನು ಭೇಟಿ ಆಗಿ ಚಿಕಿತ್ಸೆ ಪಡೆಯುವುದು ಉತ್ತಮ.
ನೀವು ಒಂದು ವೇಳೆ ಉದ್ಯೋಗಸ್ಥರಾಗಿದ್ದಲ್ಲಿ ಅಂದುಕೊಂಡಂತೆ ಕೆಲವು ಆರ್ಥಿಕೆ ಬೆಳವಣಿಗೆಗಳು ಆಗುವುದಿಲ್ಲ. ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳುವ ಕಡೆಗೆ ಮಾಡಿದ ಪ್ರಯತ್ನ ಸಾಕಾಗುವುದಿಲ್ಲ ಅಥವಾ ಈಗ ನಿಮ್ಮ ಕೈ ಹಿಡಿಯುವುದಿಲ್ಲ. ನಿಮ್ಮಲ್ಲಿ ಕೆಲವರು ಈಗಿನ ಕೆಲಸದ ಜತೆಗೆ ವ್ಯಾಪಾರ- ವ್ಯವಹಾರಗಳನ್ನು ಆರಂಭಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇನ್ನು ಸ್ನೇಹಿತರು, ಸಂಬಂಧಿಕರು ಆರಂಭಿಸುವ ವ್ಯವಹಾರದಲ್ಲಿ ಹಣ ಹೂಡುವ ಸಾಧ್ಯತೆಗಳು ಕೂಡ ಇವೆ. ಒಟ್ಟಾರೆ ಈಗಿರುವುದರ ಜತೆಗೆ ಹೆಚ್ಚುವರಿ ಆದಾಯ ಮೂಲ ಮಾಡಿಕೊಳ್ಳುವ ಬಗ್ಗೆ ಗಮನ ನೀಡಲಿದ್ದೀರಿ.
ಸರ್ಕಾರಿ ಯೋಜನೆಗಳಲ್ಲಿ ದೊರೆಯುವ ಸಾಲಕ್ಕಾಗಿ ಪ್ರಯತ್ನ ಮಾಡಿದ್ದಲ್ಲಿ ಅದು ದೊರೆಯುವ ಅವಕಾಶಗಳು ಹೆಚ್ಚಿವೆ. ಆದರೆ ಅದಕ್ಕಾಗಿ ತೀವ್ರ ಪ್ರಯತ್ನ ಮಾಡಬೇಕಾಗುತ್ತದೆ. ಇತರರ ವೈಯಕ್ತಿಕ ಬದುಕಿನ ಬಗ್ಗೆ ವಿಪರೀತ ಆಸಕ್ತಿ ತೋರಿಸದಿದ್ದಲ್ಲಿ ಉತ್ತಮ. ಇಲ್ಲದಿದ್ದಲ್ಲಿ ನಿಮ್ಮ ಬಗ್ಗೆ ಇರುವ ಗೌರವವನ್ನು ಈ ಕಾರಣದಿಂದಾಗಿಯೇ ಕಳೆದುಕೊಳ್ಳುವಂತಾಗುತ್ತದೆ. ಕೃಷಿಕರಿಗೆ ನಿರಾಸಕ್ತಿ ಕಾಡಲಿದೆ. ಸ್ವಲ್ಪ ಸಮಯ ಬಿಡುವು ತೆಗೆದುಕೊಳ್ಳೋಣ ಎಂದು ಸಹ ಆಲೋಚನೆ ಬರಬಹುದು. ಮುಖ್ಯವಾಗಿ ಈಗಿನ ರೀತಿಯಲ್ಲಿ ಅಲ್ಲದೆ ಬೇರೆ ರೀತಿಯಲ್ಲಿ ಬದುಕು ಸಾಗಿಸಬೇಕು ಎಂದು ಬಲವಾಗಿ ಅನಿಸುವುದಕ್ಕೆ ಆರಂಭವಾಗುತ್ತದೆ.
ದೂರ ಪ್ರಯಾಣಕ್ಕೆ ಹೋಗುವ ಆಲೋಚನೆ ಇದ್ದಲ್ಲಿ ಸರಿಯಾದ ಸಿದ್ಧತೆ ಮಾಡಿಕೊಂಡು, ಹೋಗಿ. ದಿಢೀರ್ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಬೇಡ. ವೃತ್ತಿನಿರತರಿಗೆ ಖರ್ಚಿನ ಪ್ರಮಾಣವು ಹೆಚ್ಚಾಗಲಿದೆ. ನಿಮ್ಮ ತೀರ್ಮಾನಗಳ ಕಾರಣದಿಂದಲೇ ಖರ್ಚು ಜಾಸ್ತಿ ಆಗಲಿದೆ. ಆತುರದ ನಿರ್ಧಾರಗಳು ತೆಗೆದುಕೊಳ್ಳುವುದು ಬೇಡ. ವಿದ್ಯಾರ್ಥಿಗಳಿಗೆ ಅನಾರೋಗ್ಯ ಸಮಸ್ಯೆ ಕಾಡಬಹುದು. ಜ್ವರ, ಶೀತ, ಕೆಮ್ಮು ಇತ್ಯಾದಿ ಸಮಸ್ಯೆಗಳು ಕಾಡಬಹುದು. ಮಹಿಳೆಯರು ಸ್ನೇಹಿತರು- ಸಂಬಂಧಿಕರ ಜತೆಗೂಡಿ ಪ್ರವಾಸಕ್ಕೆ ತೆರಳುವಂಥ ಯೋಗ ಇದೆ.
ಈ ವಾರ ಯಾವ ಅವಕಾಶವೇ ನಿಮ್ಮ ಎದುರು ತೆರೆದುಕೊಂಡರೂ ಅದನ್ನು ಬಳಸಿಕೊಳ್ಳುವುದು ಹೇಗೆ ಎಂದು ಚಿಂತಿಸಿ. ಏಕೆಂದರೆ ಬಹಳ ಅಚ್ಚರಿಯಿಂದ ಕೂಡಿದ ಬೆಳವಣಿಗೆಗಳು ನಡೆಯಲಿವೆ. ಮುಂದೆ ಸಕಾರಾತ್ಮಕವಾಗಿ ನಡೆಯಬಹುದಾದ ಘಟನೆಗಳ ಬಗ್ಗೆ ಸುಳಿವು ದೊರೆಯಲಿದೆ. ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಚೇತರಿಕೆ ಕಾಣಿಸಿಕೊಳ್ಳಲಿದೆ. ಮಾನಸಿಕ ಒತ್ತಡ ಅನುಭವಿಸುತ್ತಿರುವವರಿಗೆ ಒಂದು ಬಗೆಯಲ್ಲಿ ಸಮಾಧಾನ ದೊರೆಯಲಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಯಿಂದಾಗಿ ಹೆಮ್ಮೆ ಮೂಡಲಿದೆ. ಏಕ ಕಾಲಕ್ಕೆ ಎರಡ್ಮೂರು ಕೆಲಸಗಳನ್ನು ಮಾಡಲಿಕ್ಕೆ ಸಾಧ್ಯವಾಗಲಿದೆ.
ಸ್ವಂತ ವ್ಯಾಪಾರ ವ್ಯವಹಾರ ಮಾಡಬೇಕು ಎಂದಿರುವವರಿಗೆ ಹಣಕಾಸಿನ ಅನುಕೂಲ ಒದಗಿಬರಲಿದೆ. ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ಸಂಘ- ಸಂಸ್ಥೆಗಳಲ್ಲಿ ಸ್ಥಾನ, ಮಾನ ದೊರೆಯುವಂಥ ಸಾಧ್ಯತೆಗಳು ಇವೆ. ಕೃಷಿಕರಿಗೆ ಮನೆಯಲ್ಲಿ ಶುಭ ಕಾರ್ಯಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಮನೆ ದುರಸ್ತಿ, ನವೀಕರಣ, ಸುಣ್ಣ- ಬಣ್ಣ ಮಾಡಿಸುವ ಬಗ್ಗೆ ಕುಟುಂಬ ಸದಸ್ಯರ ಜತೆಗೆ ಮಾತುಕತೆಯನ್ನು ನಡೆಸಲಿದ್ದೀರಿ. ಒಂದು ವೇಳೆ ಮನೆಯಿಂದ ಹೊರಗೆ ಸುತ್ತಾಟ ನಡೆಸುವುದು ಹೆಚ್ಚಾದಲ್ಲಿ ಹೋಟೆಲ್ ಊಟ- ತಿಂಡಿ ಮಾಡುವ ಬದಲು ಮನೆಯಿಂದಲೇ ತೆಗೆದುಕೊಂಡು ಹೋಗುವ ಕಡೆಗೆ ಗಮನ ನೀಡುವುದು ಮುಖ್ಯವಾಗುತ್ತದೆ. ನಾಲಗೆ ಮೇಲೆ ಹಿಡಿತವಿರಲಿ. ಮಸಾಲೆಯುಕ್ತ ಪದಾರ್ಥಗಳ ಸೇವನೆ ಬೇಡ.
ವೃತ್ತಿನಿರತರಿಗೆ ಸರ್ಕಾರಿ ಕೆಲಸಗಳು ಇದ್ದಲ್ಲಿ ಸಲೀಸಾಗಿ ಮುಗಿಯುವ ಮಾರ್ಗಗಳು ಗೋಚರ ಆಗಲಿವೆ. ನೋಂದಣಿ, ಪರವಾನಗಿ ಇತ್ಯಾದಿಗಳನ್ನು ಮಾಡಿಸಿಕೊಡುವಂಥ ವೃತ್ತಿಯಲ್ಲಿ ಇರುವವರಿಗೆ ಆದಾಯದ ಹರಿವು ಹೆಚ್ಚಾಗಲಿವೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೂ ಮೀರಿ ಕುಟುಂಬದವರ ಬೆಂಬಲ ದೊರೆಯಲಿದೆ. ಮಹಿಳೆಯರು ವಸ್ತ್ರಾಭರಣ ಖರೀದಿಗಾಗಿ ಹೆಚ್ಚು ಹಣ ಖರ್ಚು ಮಾಡುವ ಸಾಧ್ಯತೆ ಇದೆ. ನಿಮ್ಮಲ್ಲಿ ಕೆಲವರಿಗೆ ಉಡುಗೊರೆ ದೊರೆಯುವಂಥ ಯೋಗ ಇದೆ.
ನೀವು ಹಾಕುವ ಪ್ರಯತ್ನಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತಿಲ್ಲವೇನೋ ಎಂಬ ಅನುಮಾನ ಕಾಡಲಿದೆ. ಆದ್ದರಿಂದ ಇತರರು ನಿಮ್ಮ ಬಗ್ಗೆ ಹೇಳುವಂಥ ಸಂಗತಿಗಳು ಬಹಳ ಮುಖ್ಯ ಎಂದೆನಿಸುತ್ತದೆ. ಇತರರು ಹೇಳಿದ ವಿಚಾರಕ್ಕೆ ಅನುಗುಣವಾಗಿ ಸ್ವಭಾವ, ನಿರ್ಧಾರ ತೆಗೆದುಕೊಳ್ಳುವುದಲ್ಲಿ ಹಾಗೂ ಆಲೋಚನೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಗಂಭೀರವಾದ ಆಲೋಚನೆ ಮಾಡಲಿದ್ದೀರಿ. ತಂದೆ- ತಾಯಿಯ ಆರೋಗ್ಯ, ಪ್ರಯಾಣ, ಪ್ರವಾಸ ಇತ್ಯಾದಿ ಕಾರಣಗಳಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಕೆಲವು ಕೆಲಸಗಳು ಅರ್ಧದಷ್ಟು ಈಗಾಗಲೇ ಮುಗಿಸಿದ್ದರೂ ಮೊದಲಿಂದ ಮಾಡಬೇಕಾದ ಸನ್ನಿವೇಶ ಎದುರಾಗಲಿದೆ. ನಿಮ್ಮ ಪಾಲಿಗೆ ಬರಬೇಕಾದ ಅವಕಾಶವೊಂದು ಇತರರಿಗೆ ದೊರೆಯಬಹುದು.
ಒಂದಿಷ್ಟು ಶ್ರಮ ಹಾಕಿದಲ್ಲಿ ಆ ಅವಕಾಶ ನಿಮಗೇ ದೊರೆಯುವಂಥ ಸಾಧ್ಯತೆಗಳಿವೆ. ಕೃಷಿಕರಿಗೆ ಬೆಳೆ ನಷ್ಟ ಆಗಬಹುದು ಅಥವಾ ಡೇರಿ ವ್ಯವಹಾರ, ಪಶು ಸಾಕಣೆಯಂಥ ವ್ಯವಹಾರ ಮಾಡುತ್ತಿದ್ದಲ್ಲಿ ನಿರೀಕ್ಷೆ ಮಾಡಿದ್ದಕ್ಕಿಂತ ಅಥವಾ ಸಾಮಾನ್ಯವಾಗಿ ಆಗುವುದಕ್ಕಿಂತ ಹೆಚ್ಚಿನ ಖರ್ಚು ಆಗಲಿದೆ. ಸೋದರ- ಸೋದರಿಯರು ಅಥವಾ ಮಕ್ಕಳು ಆಸ್ತಿಯಲ್ಲಿ ಪಾಲು ಕೇಳಬಹುದು. ಕೆಲವರು ಭೂಮಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೋರ್ಟ್- ಕಚೇರಿ ಮೆಟ್ಟಿಲು ಹತ್ತುವಂಥ ಸಾಧ್ಯತೆ ಇದೆ. ವೃತ್ತಿನಿರತರಿಗೆ ವ್ಯವಹಾರ ವಿಸ್ತರಣೆ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣ ಆಗಲಿದೆ. ಹೊಸದಾಗಿ ಕೆಲಸಕ್ಕೆ ಜನರನ್ನು ತೆಗೆದುಕೊಳ್ಳಲಿದ್ದೀರಿ.
ಜಾಹೀರಾತು, ಪ್ರಚಾರಕ್ಕಾಗಿಯೂ ಹೆಚ್ಚಿನ ಖರ್ಚು ಮಾಡಲಿದ್ದೀರಿ. ವಿದ್ಯಾರ್ಥಿಗಳು ಯಾರ ಜತೆಗೆ ಸ್ನೇಹ ಮಾಡುತ್ತಿದ್ದೀರಿ ಎಂಬ ಬಗ್ಗೆ ಲಕ್ಷ್ಯ ವಹಿಸುವುದು ಮುಖ್ಯವಾಗುತ್ತದೆ. ನಿಮ್ಮ ನಡವಳಿಕೆ ಬಗ್ಗೆ ಕುಟುಂಬದಲ್ಲಿ ಹಾಗೂ ಸ್ನೇಹಿತರ ವಲಯದಲ್ಲಿ ಆಕ್ಷೇಪ ಕೇಳಿಬರಬಹುದು. ಮಹಿಳೆಯರು ಉದ್ಯೋಗಸ್ಥರಾಗಿದ್ದಲ್ಲಿ ಕೆಲಸ ಬದಲಾವಣೆ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇದಕ್ಕಾಗಿ ಸ್ನೇಹಿತರ ಮೂಲಕ ಪ್ರಯತ್ನವನ್ನೂ ಮಾಡಲಿದ್ದೀರಿ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ