ಬೆಳಗಾವಿ: ಪತಿಗೆ ವಿಷ ಕೊಟ್ಟು ಕೊಲೆಗೆ ಯತ್ನಿಸಿದ ಪತ್ನಿ; ವಿಷ ಬರೆಸಿದ್ದ ಉಪ್ಪಿಟ್ಟು ತಿಂದ ಬೆಕ್ಕು, ನಾಯಿ ಸಾವು!

ಆಸ್ತಿಗಾಗಿ ಮಹಿಯೊಬ್ಬಳು ತನ್ನ ಪತಿಗೆ ಆಹಾರದಲ್ಲಿ ವಿಷಕೊಟ್ಟು ಕೊಲೆ ಮಾಡಲು ಯತ್ನಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಸದ್ಯ ಐಸಿಯುವಿನಲ್ಲಿ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ, ವಿಷ ಬೆರೆಸಿದ ಆಹಾರ ಸೇವಿಸಿ ಬೆಕ್ಕು, ನಾಯಿ ಸಾವನ್ನಪ್ಪಿದೆ.

ಬೆಳಗಾವಿ: ಪತಿಗೆ ವಿಷ ಕೊಟ್ಟು ಕೊಲೆಗೆ ಯತ್ನಿಸಿದ ಪತ್ನಿ; ವಿಷ ಬರೆಸಿದ್ದ ಉಪ್ಪಿಟ್ಟು ತಿಂದ ಬೆಕ್ಕು, ನಾಯಿ ಸಾವು!
ಪತಿಗೆ ವಿಷಕೊಟ್ಟು ಕೊಲೆ ಮಾಡಲು ಯತ್ನಿಸಿದ ಪತಿ
Edited By: Rakesh Nayak Manchi

Updated on: Aug 18, 2023 | 9:45 PM

ಬೆಳಗಾವಿ, ಆಗಸ್ಟ್ 18: ಆಸ್ತಿಗಾಗಿ ಮಹಿಳೆಯೊಬ್ಬಳು ಸಹೋದರನ ಮಾತು ಕೇಳಿ ತನ್ನ ಪತಿಗೆ ಉಪ್ಪಿಟ್ಟಿನಲ್ಲಿ ವಿಷ ಬೆರೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ನಡೆದಿದೆ. ವಿಷಯುಕ್ತ ಉಪ್ಪಿಟ್ಟು ತಿಂದ ನಿಂಗಪ್ಪಾ ಹಮಾನಿ (35) ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಎರಡು ಎಕರೆ ಆಸ್ತಿಗಾಗಿ ಸಹೋದರನ ಮಾತು ಕೇಳಿ ಸಾವಕ್ಕ ಹಮಾನಿ (32) ತನ್ನ ಪತಿ ನಿಂಗಪ್ಪಗೆ ಉಪ್ಪಿಟ್ಟಿನಲ್ಲಿ ವಿಷ ಹಾಕಿ ಕೊಟ್ಟಿದ್ದಾಳೆ. ಉಪ್ಪಿಟ್ಟು ತಿಂದ ನಂತರ ನಿಂಗಪ್ಪ ಒದ್ದಾಡುವುದನ್ನ ಕಂಡ ಕುಟುಂಬಸ್ಥರು, ಕೂಡಲೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಐಸಿಯುವಿನಲ್ಲಿ ನಿಂಗಪ್ಪನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆ : ಮಗಳ ಚಿತೆಗೆ ಹಾರಿ ತಂದೆಯಿಂದ ಆತ್ಮಹತ್ಯೆ ಯತ್ನ

ಪತಿಗೆ ವಿಷ ಬೆರೆಸಿದ ನಂತರ ಅನುಮಾನ ಬರಬಾರದೆಂದು ವಿಷ ಬೆರೆಸಿದ್ದ ಉಪ್ಪಿಟ್ಟನ್ನು ಸಾವಕ್ಕ ಹಮಾನಿ ತಿಪ್ಪೆಗೆಸದಿದ್ದಳು. ಆದರೆ, ಹೊಟ್ಟೆ ತುಂಬಿಸಿಕೊಳ್ಳಲೆಂದು ಬಂದ ಎರಡು ಮೂಕ ಪ್ರಾಣಿಗಳಾದ ಬೆಕ್ಕು ಮತ್ತು ನಾಯಿ ಉಪ್ಪಿಟ್ಟು ಸೇವಿಸಿ ಸಾವನ್ನಪ್ಪಿವೆ. ಪ್ರಕರಣ ಸಂಬಂಧ ಸವದತ್ತಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳಾದ ಸಾವಕ್ಕ ಮತ್ತು ಆಕೆಯ ಸಹೋದರ ಫಕೀರಪ್ಪ ಸಿಂದೋಗಿ ಅವರನ್ನು ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us