ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ದಳಸಗೆರೆ ಗ್ರಾಮದಿಂದ ಎಂಟಿಬಿ ನಾಗರಾಜ್(MTB Nagaraj) ಪ್ರಚಾರ ಆರಂಭಿಸಿದ್ದಾರೆ. ಈ ವೇಳೆ ಅವರು ಶರತ್ ಬಚ್ಚೇಗೌಡ(Sharath Bachegowda) ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಹೊಸಕೋಟೆಯಲ್ಲಿ ನರೇಂದ್ರ ಮೋದಿ ಅಥವಾ ಸಿಎಂ ಬಸವರಾಜ ಬೊಮ್ಮಾಯಿ ಬಂದು ನಿಂತರೂ ಗೆಲ್ಲುವುದು ಕಾಂಗ್ರೆಸ್ ಎಂದು ಶರತ್ ಬಚ್ಚೇಗೌಡ ನೀಡಿದ ಹೇಳಿಕೆಗೆ ಸಚಿವ ಎಂಟಿಬಿ ನಾಗರಾಜ್ ಗರಂ ಆಗಿದ್ದಾರೆ.
ನಾಗಲೋಕ ಎಲ್ಲಿ ಗುಳ್ಳೆ ನರಿ ಎಲ್ಲಿ. ನಾಗಲೋಕಕ್ಕೆ ಗುಳ್ಳೆನರಿ ಹೋಲಿಕೆ ಮಾಡಲು ಸಾಧ್ಯವೇ ಎಂದು ಶಾಸಕ ಶರತ್ ನನ್ನ ಸಚಿವ ಎಂಟಿಬಿ ನಾಗರಾಜ್ ಗುಳ್ಳೆನರಿಗೆ ಹೋಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿಶ್ವ ಮೆಚ್ಚಿದ ನಾಯಕ, 130 ಕೋಟಿ ಜನ ಮೆಚ್ಚಿದ ನಾಯಕ. ನಾನೊಬ್ಬ ಜನಪ್ರತಿನಿಧಿ ಅನ್ನೂದು ಇದ್ದಿದ್ರೆ ಅವರು ಈ ಮಾತು ಹೇಳ್ತಿರಲಿಲ್ಲ. ಇದಕ್ಕೆಲ್ಲ ಈ ಭಾರಿಯ ಚುನಾವಣೆಯಲ್ಲಿ ಜನರು ಅವರಿಗೆ ಬುದ್ದಿ ಕಲಿಸುತ್ತಾರೆ ಎಂದು ಸಚಿವ ಎಂಟಿಬಿ ನಾಗರಾಜ್ ಟಾಂಗ್ ಕೊಟ್ಟಿದ್ದಾರೆ.
ಕ್ಷೇತ್ರದ ದೇವ ಮೂಲೆಯ ಕೊನೆಯ ಗ್ರಾಮದಿಂದ ಪ್ರಚಾರ ಆರಂಭಿಸಿದರೆ ಅಭ್ಯರ್ಥಿ ಗೆಲುವು ಪಕ್ಕಾ ಎಂಬ ವಿಶ್ವಾಸ ಇಲ್ಲಿ ಮೊದಲಿನಿಂದಲೂ ಇದೆ. ಹೀಗಾಗಿ ಎಂಟಿಬಿ ನಾಗರಾಜ್ ಕೊನೆ ಗ್ರಾಮವಾದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ದಳಸಗೆರೆ ಗ್ರಾಮದಿಂದ ಪ್ರಚಾರ ಆರಂಭಿಸಿದ್ದಾರೆ. ಗ್ರಾಮಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಇಳಿದಿದ್ದಾರೆ. ಗ್ರಾಮದಲ್ಲಿ ಒಂದೇ ಸಾಲಿನಲ್ಲಿರುವ ಹಲವು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಜೊತೆಗೆ ಕೆಂಪೇಗೌಡ ವಾಲ್ಮೀಕಿ ಪುತ್ಥಳಿಗೂ ಪೂಜೆ ಸಲ್ಲಿಸಿ ಮತಬೇಟೆ ಶುರು ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಆರು ತಿಂಗಳಿಂದೆಯೆ ರಾಜಕೀಯ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದೆ. ಆರು ಚುನಾವಣೆಗಳನ್ನು ನಾನು ಎದುರಿಸಿದ್ದೇನೆ. ನನನ್ನ ಎಂಎಲ್ಎ, ಮಂತ್ರಿ, ಎಂಎಲ್ಸಿಯಾಗಿ ನೀವು ಮಾಡಿದ್ದೀರಿ. 19 ವರ್ಷ ನಾನು ಹೊಸಕೋಟೆ ಮತದಾರರ ಜೊತೆ ಪ್ರೀತಿ ವಿಶ್ವಾಸದಿಂದ ಕಳೆದಿದ್ದೇನೆ. ಹೈಕಮಾಂಡ್ ಗೆ ಸಹ ನಾನು ರಾಜಕೀಯ ನಿವೃತ್ತಿ ಬಗ್ಗೆ ಹೇಳಿದ್ದೆ. ಇದಕ್ಕೆ ರಾಜ್ಯ ನಾಯಕರು ಒಪ್ಪಿದ್ರು ಆದ್ರೆ ಕೇಂದ್ರ ನಾಯಕರು ಈ ಭಾರಿ ನಿಲ್ಲಿ ಎಂದ್ರು. ನಿತೀಶ್ ಗೆ ಮತ್ತೊಮ್ಮೆ ಒಳ್ಳೆ ಅವಕಾಶ ನೀಡೋಣ ಅಂತ ಹೇಳಿದ್ರು. ಹೀಗಾಗಿ ನಾನು ನಿಂತಿದ್ದೇನೆ ಇದೇ ನನ್ನ ಕೊನೆಯ ಚುನಾವಣೆ. ನಾನು ಕ್ಷೇತ್ರಕ್ಕೆ ಮೆಟ್ರೋ, ಕಾವೇರಿ ನೀರು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ಮಾಡಬೇಕು. ನನ್ನ ಕೊನೆ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಅಭಿವೃದ್ಧಿ ಕಾರ್ಯ ಮಾಡ್ತಿನಿ. ಮುಂದೆ ಅರ್ಧದಲ್ಲಿ ಚುನಾವಣೆ ಬಂದ್ರು ಯಾವಾಗ ಚುನಾವಣೆ ಬಂದ್ರು ನಿತೀಶ್ ಪುರುಷೋತ್ತಮ್ ಅಭ್ಯರ್ಥಿಯಾಗ್ತಾರೆ. ನಾನು ನನ್ನ ಮಗ ನಿತೀಶ್ ನಿಮ್ಮ ಜನರ ಸೇವೆ ದೇವರ ಸೇವೆ ಅಂತ ಮಾಡ್ತೀವಿ. ಈ ಭಾರಿ ನನನ್ನ ಗೆಲ್ಲಿಸಿ ಬಿಜೆಪಿಗೆ ಮತ ನೀಡಿ ಅಂತ ಎಂಟಿಬಿ ನಾಗರಾಜ್ ಮತಯಾಚನೆ ಮಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:59 pm, Fri, 14 April 23