ನೆಲಮಂಗಲ: ಎರಡು ಬೈಕ್ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ಇಬ್ಬರು ಸಾವು

ಎರಡು ಬೈಕ್​ಗಳ ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸಿದ್ದನಹೊಸಹಳ್ಳಿ ಬಳಿ ನಡೆದಿದೆ.

ನೆಲಮಂಗಲ: ಎರಡು ಬೈಕ್ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ಇಬ್ಬರು ಸಾವು
ಅಪಘಾತ
Edited By: ವಿವೇಕ ಬಿರಾದಾರ

Updated on: Nov 11, 2023 | 10:43 AM

ನೆಲಮಂಗಲ ನ.11: ಎರಡು ಬೈಕ್​ಗಳ ಮಧ್ಯೆ ಅಪಘಾತ (Accident) ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ (Bengaluru North) ತಾಲೂಕಿನ ಸಿದ್ದನಹೊಸಹಳ್ಳಿ ಬಳಿ ನಡೆದಿದೆ. ರಾಜೇಶ್ (45), ಹೆಗ್ಗಡದೇವನಪುರದ ಧನರಾಜ್ (24) ಮೃತದುರ್ದೈವಿಗಳು. ಶಂಕರ್, ಮಹೇಶ್​ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಟ್ಟ ಸಾಲ ವಾಪಸು ಕೇಳಿದ್ದಕ್ಕೆ ವೃದ್ಧನ‌ ಮೇಲೆ ಹಲ್ಲೆಗೆ ಯತ್ನ

ದಾವಣಗೆರೆ: ಕೊಟ್ಟ ಸಾಲ ವಾಪಸು ಕೇಳಿದ್ದಕ್ಕೆ ವೃದ್ಧನ‌ ಮೇಲೆ ಯುವಕ ಹಲ್ಲೆ ಮಾಡಲು ಯತ್ನಿಸಿರುವ ಘಟನೆ ಜಗಳೂರು ಪಟ್ಟಣದ ಮಾರ್ಕೆಟ್​​ನಲ್ಲಿ ನಡೆದಿದೆ. ಯುವಕನ ಅಟ್ಟಹಾಸವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಕಸವನಹಳ್ಳಿಯ ಕುರಿ ಹನಮಂತಪ್ಪ ಎಂಬ ವೃದ್ದನ ಮೇಲೆ ಮಾಳಮ್ಮನಹಳ್ಳಿ ಪರಮೇಶಿ ಎಂಬಾತ ಹಲ್ಲೆ ಮಾಡಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:55 am, Sat, 11 November 23

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More
Follow Us