ಬೆಂಗಳೂರು: ನಗರದ ರೆಸಿಡೆನ್ಸಿ ರಸ್ತೆಯ (Residency Road) ಫುಟ್‌ಪಾತ್ (Footpath) ಬಗ್ಗೆ ವಿದ್ಯಾರ್ಥಿಯೊಬ್ಬ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ಸದ್ದು ಮಾಡುತ್ತಿದೆ. ವಿದ್ಯಾರ್ಥಿ ಶಾನ್ ಥಾಮಸ್, ಬ್ರಿಗೇಡ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್‌ನಿಂದ ರೆಸಿಡೆನ್ಸಿ ರಸ್ತೆ ಮೂಲಕ ಸೇಂಟ್ ಮಾರ್ಕ್ಸ್ ರಸ್ತೆ ಜಂಕ್ಷನ್‌ವರೆಗೆ ನಡೆದುಕೊಂಡು ಸಾಗಿದ್ದು, ಫುಟ್ಪಾತ್ನಲ್ಲಿ 23 ಕಡೆಗಳಲ್ಲಿ ಹಾನಿಯಾಗಿರುವುದನ್ನು ಪತ್ತೆಮಾಡಿದ್ದಾನೆ.
ಫುಟ್ಪಾತ್ನಲ್ಲಿ ಉಂಟಾಗಿರುವ ಹಾನಿಯ ಹೊರತಾಗಿ, 12 ಮರಗಳು ದಾರಿಗೆ ಅಡ್ಡಿಯಾಗಿರುವುದನ್ನು, ನಾಲ್ಕು ಸ್ಥಳಗಳಲ್ಲಿ ನೆಲದಿಂದ ಚಾಚಿಕೊಂಡಿರುವ ಬೇರುಗಳು, ಒಂದು ಜಾಹೀರಾತು ಫಲಕ ಮತ್ತು 18 ಅಡೆತಡೆಗಳಿರುವುದನ್ನು ಥಾಮಸ್ ಕಂಡುಕೊಂಡಿದ್ದಾನೆ.
ಫುಟ್‌ಪಾತ್ ಅಗಲ ಸರಾಸರಿ 150 ಸೆಂಟಿಮೀಟರ್ ಇದೆ ಎಂದು ಥಾಮಸ್ ಹೇಳಿದ್ದಾನೆ. ವರದಿ ಸಿದ್ಧಪಡಿಸಲು ವಿದ್ಯಾರ್ಥಿಯು ಒಟ್ಟು 1.2 ಕಿಲೋಮೀಟರ್ ದೂರವನ್ನು ಕ್ರಮಿಸಿದ್ದಾನೆ.
ಆಕ್ಷನ್ ಏಡ್ ಅಸೋಸಿಯೇಷನ್‌ನ ಹಿರಿಯ ನಾಯಕ (ಪ್ರಾಜೆಕ್ಟ್) ರಾಘವೇಂದ್ರ ಬಿ ಪಚ್ಚಾಪುರ ಮಾತನಾಡಿ, ನಮಗೆ ಅಡೆತಡೆ ಮುಕ್ತ ಮತ್ತು ಸಮ ಮೇಲ್ಮೈಯ ಸುರಕ್ಷಿತ ಕಾಲುದಾರಿಗಳ ಅಗತ್ಯವಿದೆ ಎಂದು ‘ನ್ಯೂಸ್ 9’ಗೆ ತಿಳಿಸಿದ್ದಾರೆ.
ಅಂಗವಿಕಲರು, ಹಿರಿಯ ನಾಗರಿಕರು, ಮಕ್ಕಳು ಮತ್ತು ಗರ್ಭಿಣಿಯರು ಸೇರಿದಂತೆ ಎಲ್ಲಾ ಜನರಿಗೆ ಪ್ರವೇಶಿಸಬಹುದಾದ ರೀತಿಯಲ್ಲಿ ಫುಟ್‌ಪಾತ್ ಅಗತ್ಯವನ್ನು ವಿನ್ಯಾಸಗೊಳಿಸಬೇಕು. ಟೆಂಡರ್ಶ್ಯೂರ್ ರಸ್ತೆಗಳು ಪಾದಚಾರಿ ಸ್ನೇಹಿ ಎಂದು ಹೇಳಿಕೊಂಡರೂ, ರೆಸಿಡೆನ್ಸಿ ರಸ್ತೆಯ ವಿಸ್ತರಣೆಯು ಅನೇಕ ಅಡಚಣೆಗಳನ್ನು ಹೊಂದಿದೆ. ದೈಹಕವಾಗಿ ಸಮಸ್ಯೆ ಇರುವವರಿಗೆ ಈ ಪಾದಚಾರಿ ಮಾರ್ಗಗಳನ್ನು ಬಳಸುವುದು ಕಷ್ಟ ಎಂದು ಅವರು ಹೇಳಿದ್ದಾರೆ.
#Foothpath audit from St.Joseph’s college, brigade rd via residency rd to cash pharmacy & return identified barriers for easy access to#Disabled#SeniorCitizen#PregnantWoman#Children
Thanks to Shawn.@BBMPCOMM @DULTBangalore @BLRSmartCity @sanika_TOI#AccessibleBengaluru pic.twitter.com/BlwIvXm8vn— Raghavendra B Pachhapur (@RBPachhapur) June 29, 2023
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ನಗರ ಸಂಚಾರ ಪೊಲೀಸರಂತಹ ರಾಜ್ಯ ಸಂಸ್ಥೆಗಳು ಪಾದಚಾರಿ ಮಾರ್ಗಗಳಲ್ಲಿ ಸೇವೆಗಳ ಹೆಸರಿನಲ್ಲಿ ಕಂಬಗಳು, ಬೂತ್‌ಗಳು ಮತ್ತು ಬೋರ್ಡ್‌ಗಳನ್ನು ಅಳವಡಿಸಿದ್ದು, ಅವು ಅಸುರಕ್ಷಿತವಾಗಿರುವುದರಿಂದ ನಗರದಲ್ಲಿ ನಡೆದಾಡುವುದು ಕಷ್ಟಸಾಧ್ಯವಾಗಿದೆ ಎಂದು ಪಚ್ಚಾಪುರ ಹೇಳಿದ್ದಾರೆ.
ಇದನ್ನೂ ಓದಿ: Bangalore Metro: ಜುಲೈ 2ರಂದು ಬೆಳಗ್ಗೆ ಎರಡು ಗಂಟೆ ಕಾಲ ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಇರಲ್ಲ
ನಾವು ಹವಾಮಾನ ಬದಲಾವಣೆ ಮತ್ತು ಹವಾಮಾನ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಪ್ರಪಂಚದಾದ್ಯಂತದ ನಗರಗಳಲ್ಲಿ ವಾಕಿಂಗ್ ಅನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಫುಟ್ಪಾತ್ಗಳನ್ನು ಮರುವಿನ್ಯಾಸಗೊಳಿಸಲಾಗುತ್ತಿದೆ. ಇದು ಸುಸ್ಥಿರ ಚಲನಶೀಲತೆಯ ವಿಧಾನವಾಗಿದೆ. ಆದರೆ, ಬೆಂಗಳೂರು ಮಾತ್ರ ಹೊರತಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ