ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಆನೇಕಲ್​ನಲ್ಲಿ ಕುಡಿಯಲು ನೀರಿಲ್ಲ; ನೀರು ಬರ್ತಿಲ್ಲ ಎಂದಿದ್ದಕ್ಕೆ ಕಾಂಗ್ರೆಸ್ ಮುಖಂಡನಿಂದ ಧಮ್ಕಿ

| Updated By: ಆಯೇಷಾ ಬಾನು

Updated on: Sep 21, 2023 | 11:31 AM

ಬೋರ್ವೆಲ್​ಗಳಲ್ಲಿ ನೀರು ಬರ್ತಿಲ್ಲ, ವಾರಕ್ಕೊಮ್ಮೆ ಬರ್ತಿದ್ದ ಕಾವೇರಿ ನೀರು ಹದಿನೈದು ದಿನವಾದ್ರು ಬರ್ತಿಲ್ಲ. ಕುಡಿಯಲು, ಬಳಸಲು ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಆನೇಕಲ್​ಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ನೀರಿಲ್ಲದೆ ಮಳೆ ನೀರನ್ನು ಕುಡಿಯುತ್ತಿದ್ದಾರೆ.

ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಆನೇಕಲ್​ನಲ್ಲಿ ಕುಡಿಯಲು ನೀರಿಲ್ಲ; ನೀರು ಬರ್ತಿಲ್ಲ ಎಂದಿದ್ದಕ್ಕೆ ಕಾಂಗ್ರೆಸ್ ಮುಖಂಡನಿಂದ ಧಮ್ಕಿ
ಕುಡಿಯುವ ನೀರಿಗಾಗಿ ಜನರ ಪರದಾಟ
Follow us on

ಬೆಂಗಳೂರು, ಸೆ.21: ಈಗಾಗಲೇ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ, ಇತ್ತ ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸಲಾಗ್ತಿದೆ ಇದರ ನೇರವಾದ ಎಫೆಕ್ಟ್ ರಾಜಧಾನಿ ಬೆಂಗಳೂರಿಗೆ ತಟ್ಟಿದೆ. ಬೋರ್ವೆಲ್​ಗಳಲ್ಲಿ ನೀರು ಬರ್ತಿಲ್ಲ, ವಾರಕ್ಕೊಮ್ಮೆ ಬರ್ತಿದ್ದ ಕಾವೇರಿ ನೀರು ಹದಿನೈದು ದಿನವಾದ್ರು ಬರ್ತಿಲ್ಲ. ಕುಡಿಯಲು, ಬಳಸಲು ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಆನೇಕಲ್​ಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ನೀರಿಲ್ಲದೆ ಮಳೆ ನೀರನ್ನು ಕುಡಿಯುತ್ತಿದ್ದಾರೆ. ಬೋರ್ವೆಲ್ ಇದ್ರು ಅದರಲ್ಲಿ ನೀರು ಬರ್ತಿಲ್ಲ.

ಕುಡಿಯಲು ನೀರು ಬರ್ತಿಲ್ಲ ಎಂದು ಹೇಳಿದಕ್ಕೆ ಕಾಂಗ್ರೆಸ್ ಮುಖಂಡನಿಂದ ಧಮ್ಕಿ

ಬಿಬಿಎಂಪಿಯ ಹೊಸ ವಾರ್ಡ್ ಕೂಡ್ಲು ವಿಲೇಜ್ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ, ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ಮೂರು ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತವೆ. ಬಿಬಿಎಂಪಿಯ 110 ಹಳ್ಳಿಗಳ ವ್ಯಾಪ್ತಿಯಲ್ಲಿ ಬರುತ್ತದೆ. ಈ ಕೂಡ್ಲು ವಾರ್ಡ್ ಕಾವೇರಿ ನೀರು ಬಿಡಲು ಪೈಪ್ ಲೈನ್ ಹಾಕಲಾಗಿದೆ. ಆದರೆ ಎರಡು ವಾರಕ್ಕೊ ಮೂರು ವಾರಕ್ಕೊ ಕಾವೇರಿ ನೀರು ಬಿಡಲಾಗ್ತಿದೆ. ವಿಪರ್ಯಾಸವೆಂದರೆ ಆ ನೀರನ್ನು ಕುಡಿಯಲು ಆಗೋದಿಲ್ಲ. ತುಂಬಾ ಕೆಟ್ಟದಾಗಿರುತ್ತದೆ ಎಂದು ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಮನೆ ಬಳಕೆ ಮಾಡಲು ಬುಧವಾರ ಟ್ಯಾಂಕರ್ ಮೂಲಕ ನೀರು ಬಿಡುತ್ತಾರೆ. ಅದು ಕೊಳಚೆ ನೀರು, ಶುದ್ಧವಾಗಿ ಇರೋದಿಲ್ಲ. ಬಾಡಿಗೆ ಮನೆಯವ್ರು ದುಡ್ಡು ಕೊಟ್ಟು ಟ್ಯಾಂಕರ್ ನೀರು ಹಾಕಿಸಿಕೊಳ್ಳಬೇಕು. ಮನೆಯಲ್ಲಿ ಎಷ್ಟು ನಿವಾಸಿಗಳಿದ್ರು ಮೂರು ಡ್ರಮ್ ಮಾತ್ರ ನೀರು ಸಿಗುತ್ತೆ ಎಂದು ಇಲ್ಲಿನ ನಿವಾಸಿ ಅಳಲು ತೋಡಿಕೊಂಡಿದ್ದಾರೆ.

ಇನ್ನೂ ಜನರು ನೀರಿಲ್ಲದೆ ಪರದಾಡುತ್ತಿರುವ ಬಗ್ಗೆ ಟಿವಿ9 ಜನರ ಸಮಸ್ಯೆಯನ್ನು ರಾಜ್ಯದ ಜನತೆಗೆ ತೋರಿಸಲು ಕೂಡ್ಲು ವಾರ್ಡ್ ಗೆ ಹೋಗಿತ್ತು. ಆದರೆ ಕಾಂಗ್ರೆಸ್ ಮುಖಂಡ ಶಿವಣ್ಣ, ಮತ್ತು ವಾಟರ್ ಟ್ಯಾಂಕರ್ ಮಾಫಿಯಾದವ್ರು ಯಾರು ನಿಮಗೆ ಇಲ್ಲಿಗೆ ಬರಲು ಹೇಳಿದ್ದು, ಯಾರು ಫೋನ್ ಮಾಡಿದ್ರು. ನಿವು ಇಲ್ಲಿಂದ ಮೊದಲು ಹೊರಡಬೇಕು‌ ಎಂದು ಗದರಿದ್ದಾರೆ. ಅಲ್ಲದೆ ಸಮಸ್ಯೆ ಹೇಳಲು ಬಂದ ಮಹಿಳೆಯರಿಗೆ ನೀವು ಏನಾದರೂ ಸಮಸ್ಯೆ ಹೇಳಿದ್ರೆ ನಾಳೆಯಿಂದ ನಿಮ್ಮ ಮನೆಗಳಿಗೆ ನೀರು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ. ಇದರಿಂದ ಮಹಿಳೆಯರು ಏನು ಹೇಳದೆ ಹಿಂತಿರುಗಿದ ಘಟನೆ ನಡೆದಿದೆ.

ಇದನ್ನೂ ಓದಿ: ಶಿವಮೊಗ್ಗ ಟ್ರಯಲ್ ಬ್ಲಾಸ್, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಿಂದ ಸರ್ವೈವಲ್ ಟಾಸ್ಕ್

ಕಳೆದ ವರ್ಷ ನೆಪ ಮಾತ್ರಕ್ಕೆ ಎರಡು ಬೋರ್ ವೆಲ್ ಗಳನ್ನು ಕೊರೆಯಲಾಗಿತು. ಆದರೆ ಆ ಬೋರ್ ವೆಲ್​ಗಳಲ್ಲಿ ಕೆಲವು ದಿನಗಳು ಮಾತ್ರ ನೀರು ಬಂತು. ಈಗ ನೀರು ಬರ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಟ್ಯಾಂಕರ್ ಮಾಲೀಕರು ಒಂದು ವಾಟರ್ ಟ್ಯಾಂಕ್ ನೀರಿಗೆ ಸಾವಿರದಿಂದ ಒಂದೂವರೆ, ಎರಡು ಸಾವಿರ ರೂಪಾಯಿವರೆಗೆ ಹಣ ತೆಗೆದುಕೊಳ್ಳುತ್ತಾರಂತೆ. ಈ ಹಿಂದೆ 191 ಸಿಂಗಸಂದ್ರ ವಾರ್ಡ್ ಆಗಿತ್ತು. ಬಿಬಿಎಂಪಿ ವಾರ್ಡ್ ವಿಂಗಡಣೆ ಆದ ಮೇಲೆ ಈಗ ವಾರ್ಡ್- ‌ 225 ಕೂಡ್ಲು ವಾರ್ಡ್ ಆಗಿದೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್ ಅವರನ್ನ ಕೇಳಿದ್ರೆ ಪಾಲಿಕೆ ವ್ಯಾಪ್ತಿಯ 5 ಹೊರ ವಲಯಗಳಲ್ಲಿ ಕುಡಿಯುವ ನೀರಿಗಾಗಿ ಈಗಾಗಲೇ 20 ಕೋಟಿಯಷ್ಟು ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕೆಲವು ಭಾಗದಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. 110 ಹಳ್ಳಿಗಳಿಗೆ ಕಾವೇರಿ ನೀರಿನ ವ್ಯವಸ್ಥೆ ಇಲ್ಲ. ಈ ಹಿನ್ನಲೆಯಲ್ಲಿ ಮುಂಜಾಗ್ರತೆಯ ಕ್ರಮವಾಗಿ ಜನರಿಗೆ ನೀರು ಸರಬರಾಜು ಮಾಡಲಾಗ್ತಿದೆ ಎಂದರು.

ಒಟ್ನಲ್ಲಿ ಇತ್ತ ಡಿಸಿಎಂ ಸಾಹೇಬ್ರು ನೋಡಿದ್ರೆ ಬೆಂಗಳೂರನ್ನು ಬ್ರಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರೆ. ಆದರೆ ಬೆಂಗಳೂರಿನಂತ ನಗರದಲ್ಲೇ ಜನರಿಗೆ ಕುಡಿಯಲು ನೀರಿಲ್ಲ. ಕಮೀಷನರ್ ಸಾಹೇಬ್ರು ನೋಡಿದ್ರೆ 110 ಹಳ್ಳಿಗಳ ನಿವಾಸಿಗಳ ಕುಡಿಯುವ ನೀರಿಗಾಗಿ 20 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಅಂತಿದ್ದಾರೆ. ಆದರೆ ಇಲ್ಲಿನ ನಿವಾಸಿಗಳು ಮಾತ್ರ ಕುಡಿಯಲು ನೀರು ಬರ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಆ ಇಪ್ಪತ್ತು ಕೋಟಿ ಹಣ ಎಲ್ಲಿಗೆ ಹೋಯಿತೋ ಆ ದೇವ್ರೆ ಬಲ್ಲ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ