ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಶಕ್ತಿ ಸೌಧದಲ್ಲಿ(Vidhana Soudha) ಮದ್ಯ ಬಾಟಲಿ(Liquor Bottle) ಪತ್ತೆಯಾಗಿದೆ. ಕರ್ನಾಟಕ ವಿಧಾನ ಸಭಾ ಚುನಾವಣೆ ಹೊಸ್ತಿಲಲ್ಲೇ ವಿಧಾನಸೌಧ ಬಂದಲ್ಲಾ ಬಂದು ರೀತಿಯಲ್ಲಿ ಸುದ್ದಿಯಾಗುತ್ತಿದೆ. ಕೆಲ ದಿನಗಳ ಹಿಂದೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಪತ್ತೆಯಾಗಿತ್ತು. ಈಗ ವಿಧಾನಸೌಧದ ದ್ವಾರದಲ್ಲಿ ಎಣ್ಣೆ ಬಾಟಲ್ಗಳು ಪತ್ತೆಯಾಗಿವೆ.
ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಮದ್ಯ ಮದ್ಯ ತೆಗೆದುಕೊಂಡು ಹೋಗ್ತಿದ್ದ ವ್ಯಕ್ತಿ, ಅಚಾನಕ್ ಆಗಿ ಮದ್ಯದ ಬಾಟಲಿಯನ್ನು ಕೈಬಿಟ್ಟಿದ್ದು ಅದು ಕೆಳಗೆ ಬಿದ್ದು ಒಡೆದಿದೆ. ಮದ್ಯದ ಬಾಟಲಿ ಕೆಳಗೆ ಬೀಳುತ್ತಿದ್ದಂತೆ ಎಣ್ಣೆ ಸರಬರಾಜು ಮಾಡುತ್ತಿದ್ದ ವ್ಯಕ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಭದ್ರತಾ ಸಿಬ್ಬಂದಿ ಇದ್ರೂ ಮದ್ಯದ ಬಾಟಲಿ ವಿಧಾನಸೌಧದ ಬಳಗೆ ಬಂದದ್ದು ಹೇಗೆ? ಯಾರಿಗಾಗಿ ಆ ವ್ಯಕ್ತಿ ಮದ್ಯ ತರುತ್ತಿದ್ದ ಎಂಬ ಪ್ರಶ್ನೆ ಎದ್ದಿದೆ. ಹೆಚ್ಚಿನ ಮಾಹಿತಿ ಬರಬೇಕಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:24 pm, Tue, 7 March 23