ದಾವಣಗೆರೆ: ಮಾಜಿ ಸಚಿವ ಮುನಿರತ್ನ (N Munirathna) ಅವರು ಚುನಾವಣೆಯಲ್ಲಿ (Karnataka Assembly Elections 2023) ಸ್ಪರ್ಧಿಸುತ್ತಿರುವ ಹಿನ್ನೆಲೆ ಅವರ ಅಳಿಯನೂ ಆಗಿರುವ ದಾವಣಗೆರೆ ಎಸ್ಪಿ (Davanagere SP) ಸಿಬಿ ರಿಷ್ಯಂತ್ ಸೇರಿ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಬೆಂಗಳೂರಿನ ವೈಟ್ಫೀಲ್ಡ್ ಡಿಸಿಪಿ ಗಿರೀಶ್ ಮತ್ತು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅದರಂತೆ ವೈಟ್ಫೀಲ್ಡ್ ವಿಭಾಗಕ್ಕೆ ಧರ್ಮೇಂದ್ರ ಕುಮಾರ್ ಮೀನಾ ಅವರನ್ನು ನೂತನ ಡಿಸಿಪಿ ಆಗಿ ನೇಮಕ ಮಾಡಲಾಗಿದ್ದು, ಅರೂಣ್ ಕೆ ಅವರನ್ನು ದಾವಣಗೆರೆ ನೂತನ ಎಸ್ಪಿಯನ್ನಾಗಿ ನೇಮಕ ಮಾಡಲಾಗಿದೆ. ರಿಷ್ಯಂತ್ ಅವರಿಗೆ ಯಾವುದೇ ಹುದ್ದೆಯನ್ನು ತೋರಿಸದೇ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: ಪ್ರಚೋದನಕಾರಿ ಭಾಷಣ; ಸಚಿವ ಮುನಿರತ್ನ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು
ಯಾವುದೇ ಅಧಿಕಾರಿಯ ಸಂಬಂಧಿಕರು ಚುನಾವಣೆಗೆ ಸ್ಪರ್ಧಿಸಿದರೆ ಅಂತಹ ಅಧಿಕಾರಿಯನ್ನ ಚುನಾವಣಾ ಸೇವೆಯಿಂದ ಬಿಡುಗಡೆ ಮಾಡಬೇಕು. ಇದು ಚುನಾವಣಾ ಆಯೋಗದ ನಿಯಮವಾಗಿದೆ. ಇದೇ ಕಾರಣಕ್ಕೆ ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ಅವರನ್ನು ಯಾವುದೇ ಹುದ್ದೆ ತೊರಿಸದೇ ವರ್ಗಾವಣೆ ಮಾಡಲಾಗಿದೆ. ಸಿಬಿ ರಿಷ್ಯಂತ್ ಅವರು ಸಚಿವ ಮುನಿರತ್ನ ಅವರ ದ್ವಿತೀಯ ಪುತ್ರಿಯ ಪತಿಯಾಗಿದ್ದಾರೆ. ರಿಷ್ಯಂತ್ ಅವರಿಂದ ತರವಾದ ಸ್ಥಾನಕ್ಕೆ ಕಲಬುರ್ಗಿ ಎಸ್ಪಿ ಡಾ. ಅರುಣ್ ಕೆ ಅವರನ್ನು ನಿಯೋಜಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಖಡಕ್ ಐಪಿಎಸ್ ಅಧಿಕಾರಿ ಎಂದೇ ಹೆಸರಾಗಿದ್ದ ರಿಷ್ಯಂತ್ ಅವರ ವರ್ಗಾವಣೆ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ವಿರುದ್ಧ ರಿಷ್ಯಂತ್ ಅವರು ಪ್ರಕರಣ ದಾಖಲಿಸಿದ್ದರು. ಅಲ್ಲದೆ, ಲ ಪುಡಿ ರೌಡಿಗಳನ್ನ ಗೂಂಡಾ ಕಾಯ್ದೆ ಹಾಕಿ ಗಡಿಪಾರು ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:16 pm, Sun, 23 April 23