ಲಾಕ್​ಡೌನ್ ಎಫೆಕ್ಟ್​: ಟೋಮ್ಯಾಟೋ, ಬದನೆ, ಎಲೆಕೋಸು ಮಾರಾಟ ಮಾಡಲಾಗದೆ ಹಸುಗಳಿಗೆ ತಿನ್ನಿಸುತ್ತಿರುವ ರೈತಾಪಿ ವರ್ಗ

|

Updated on: May 25, 2021 | 11:15 AM

ಟೋಮ್ಯಾಟೋವನ್ನು ಹಸುಗಳಿಗೆ ತಿನ್ನಿಸಿದ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಸೊಪ್ಪಿನಹಳ್ಳಿಯಲ್ಲಿ ನಡೆದಿದೆ. ರಾಶಿ ರಾಶಿ ಟೋಮ್ಯಾಟೋ ಗಿಡದಲ್ಲೇ ಕೊಳೆಯುತ್ತಿದೆ. ಬೇರೆ ದಾರಿಯಿಲ್ಲದೆ ರೈತರು ಹಸುಗಳನ್ನು ಕಟ್ಟಿ ಬೆಳೆಯನ್ನು ತಿನ್ನಿಸುತ್ತಿದ್ದಾರೆ. ಟೋಮ್ಯಾಟೋ ಜೊತೆಗೆ ಎಲೆಕೋಸು ಬೆಳೆದು ನಿಂತಿದೆ. ಆದರೆ ಮಾರಾಟಕ್ಕೆ ರೈತರು ಪರದಾಟ ಪಡುತ್ತಿದ್ದಾರೆ.

ಲಾಕ್​ಡೌನ್ ಎಫೆಕ್ಟ್​:  ಟೋಮ್ಯಾಟೋ, ಬದನೆ, ಎಲೆಕೋಸು ಮಾರಾಟ ಮಾಡಲಾಗದೆ ಹಸುಗಳಿಗೆ ತಿನ್ನಿಸುತ್ತಿರುವ ರೈತಾಪಿ ವರ್ಗ
ಗಿಡದಲ್ಲಿ ಕೊಳೆತು ಹೋಗಿರುವ ಟೋಮ್ಯಾಟೋ, ಬದನೆಕಾಯಿಯನ್ನು ತಿನ್ನುತ್ತಿರುವ ಹಸು
Follow us on

ಹಾಸನ: ಕೊರೊನಾ ನಿಯಂತ್ರಿಸಲು ಸರ್ಕಾರ ರಾಜ್ಯದಲ್ಲಿ ಲಾಕ್​ಡೌನ್​ ವಿಧಿಸಿದೆ. ಹೀಗಾಗಿ ರೈತರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಬೆಳೆದ ಬೆಳೆ ಮಾರಾಟವಾಗದೆ ರಸ್ತೆ, ಹಳ್ಳಗಳಿಗೆ ಸುರಿಯುವ ಪರಿಸ್ಥಿತಿ ರೈತರಿಗೆ ಬಂದೊದಗಿದೆ. ಬೆಳೆದ ಟೋಮ್ಯಾಟೋ ವ್ಯಾಪಾರವಾಗದ ಕಾರಣ ಜಿಲ್ಲೆಯ ರೈತರು ಹಸುಗಳಿಗೆ ತಿನ್ನಲು ಹಾಕಿದ್ದಾರೆ. ರೈತರು ಸುಮಾರು ಎರಡು ಎಕರೆಯಲ್ಲಿ ಟೋಮ್ಯಾಟೋ ಬೆಳೆದಿದ್ದರು. ಆದರೆ ಲಾಕ್​ಡೌನ್​ ಕಾರಣ ಬೆಳೆದ ಟೋಮ್ಯಾಟೋವನ್ನು ವ್ಯಾಪಾರ ಮಾಡುವುದಕ್ಕೆ ಆಗುತ್ತಿಲ್ಲ.

ಟೋಮ್ಯಾಟೋವನ್ನು ಹಸುಗಳಿಗೆ ತಿನ್ನಿಸಿದ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಸೊಪ್ಪಿನಹಳ್ಳಿಯಲ್ಲಿ ನಡೆದಿದೆ. ರಾಶಿ ರಾಶಿ ಟೊಮ್ಯಾಟೊ ಗಿಡದಲ್ಲೇ ಕೊಳೆಯುತ್ತಿದೆ. ಬೇರೆ ದಾರಿಯಿಲ್ಲದೆ ರೈತರು ಹಸುಗಳನ್ನು ಕಟ್ಟಿ ಬೆಳೆಯನ್ನು ತಿನ್ನಿಸುತ್ತಿದ್ದಾರೆ. ಟೊಮ್ಯಾಟೊ ಜೊತೆಗೆ ಎಲೆಕೋಸು ಬೆಳೆದು ನಿಂತಿದೆ. ಆದರೆ ಮಾರಾಟಕ್ಕೆ ರೈತರು ಪರದಾಟ ಪಡುತ್ತಿದ್ದಾರೆ.

ತರಕಾರಿಯನ್ನು ಮಾರುಕಟ್ಟೆಗೆ ಕೊಂಡೊಯ್ಯಲಾಗುತ್ತಿಲ್ಲ. ಹಳ್ಳಿಯಲ್ಲಿ ಕೊರೊನಾ ಹೆಚ್ಚಿರುವ ಕಾರಣ ವರ್ತಕರೂ ಇತ್ತ ಸುಳಿಯುತ್ತಿಲ್ಲ. ಬೆಳೆದ ಬೆಳೆ ಮಾರಾಟ ಮಾಡಲಾಗದೆ ರೈತ ರುದ್ರೇಶ್ ಕಂಗಾಲಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರೇ ನಮ್ಮ ಪರಿಸ್ಥಿತಿ ನೋಡಿ. ನಮಗೆ ಆಸರೆ ನೀಡಿ. ಲಾಭ ಬೇಡ, ಮಾಡಿದ ಖರ್ಚನ್ನಾದರೂ ಕೊಡಿಸಿ ಎಂದು ಅಂಗಲಾಚಿ ಬೇಡಿದ್ದಾರೆ.

ಎಲೆಕೋಸು ನಾಶಮಾಡಿದ ರೈತ
ಸೂಕ್ತ ಬೆಲೆ ಸಿಗದ ಕಾರಣ ಒಂದೂವರೆ ಎಕರೆಯಲ್ಲಿದ್ದ ಎಲೆಕೋಸನ್ನು ರೈತ ನಾಶಮಾಡಿದ್ದಾರೆ. ಬೇಲೂರು ತಾಲೂಕಿನ ಸೊಪ್ಪಿನಹಳ್ಳಿ ರೈತ ಪರ್ವತೇಗೌಡ ಎಂಬುವವರು ಎಲೆಕೋಸನ್ನು ನಾಶ ಮಾಡಿದ್ದಾರೆ. ಅರವತ್ತು ಸಾವಿರ ಹಣ ಖರ್ಚು ಮಾಡಿ ಬೆಳೆ ಮಾಡಿದ್ದೆ. ಫಸಲು ಮಾರಾಟ ಆಗಿದ್ದರೆ ಮೂರರಿಂದ ಮೂರುವರೆ ಲಕ್ಷ ಆದಾಯ ಬರುತ್ತಿತ್ತು. ಎಲೆಕೋಸು ಕೇಳುವವರಿಲ್ಲದೆ ಬೆಳೆ ಹಾಳಾಗಿ ಹೋಗಿದೆ. ಹಾಗಾಗಿ ಬೇರೆ ದಾರಿಯಿಲ್ಲದೆ ರೋಟರಿ ಹೊಡೆದು ನಾವೇ ನಾಶ ಮಾಡಿದ್ದೇವೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.

ಕೆನರಾ ಬ್ಯಾಂಕ್​ನಲ್ಲಿ ಎರಡುವರೆ ಲಕ್ಷ ಸಾಲ ಮಾಡಿದ್ದೆ. ಈ ಬೆಳೆ ಮಾರಾಟ ಮಾಡಿ ಸಾಲಾ ತೀರಿಸುವ ಯೋಚನೆ ಇತ್ತು. ಸಾಲ ತೀರಿಸೋದಿರಲಿ ಮಾಡಿದ ಖರ್ಚೆ ಕೈ ಸೇರಲಿಲ್ಲ. ಸರ್ಕಾರ ಕೊಡುವ ಹತ್ತು ಸಾವಿರದಿಂದ ನಾಲ್ಕು ಚೀಲ ಗೊಬ್ಬರ ಬರಲ್ಲ. ಈ ಭೂಮಿಗೆ 20 ಸಾವಿರ ರೂ. ಖರ್ಚು ಮಾಡಿ ಸಸಿ ಹಾಕಿದ್ದೆ. ಗೊಬ್ಬರಕ್ಕೆ 15 ಸಾವಿರ ಖರ್ಚಾಗಿದೆ. ಅವರು ಕೊಡುವ ಹತ್ತು ಸಾವಿರಕ್ಕೆ ಏನೂ ಬರಲ್ಲ. ನಾವು ಖರ್ಚು ಮಾಡಿರುವ ಹಣವನ್ನಾದರೂ ಕೊಡಿ ಎಂದು ರೈತ ಮನವಿ ಮಾಡಿಕೊಂಡಿದ್ದಾರೆ.

ಬದನೆಕಾಯಿ ಬೆಳೆ ನಾಶ
ಕೊಪ್ಪಳ: ಬದನೆಕಾಯಿ ಮಾರಾಟ ಮಾಡಲಾಗದೆ ಬೆಳೆಯನ್ನು ರೈತ ಜಾನುವಾರುಗಳಿಗೆ ಹಾಕಿದ್ದಾರೆ. ರೈತ ಗವಿಸಿದ್ದಪ್ಪ ಡೊಳ್ಳಿನ ಎಂಬುವವರು ಒಂದು ಎಕರೆಯಲ್ಲಿ ಬದನೆಕಾಯಿಯನ್ನು ಬೆಳೆದಿದ್ದರು. ಸುಮಾರು 70 ಸಾವಿರ ಖರ್ಚು ಮಾಡಿದ್ದರು. ಕಟಾವು ಮಾಡಿದ ಬದನೆಯನ್ನು ಮಾರಾಟ ಮಾಡಲಾಗದೆ ಜಾನುವಾರುಗಳಿಗೆ ಹಾಕಿದ್ದಾರೆ. ರಾಜಕಾರಣಿಗಳು ಎಲೆಕ್ಷನ್ ಮಾಡುತ್ತಾರೆ. ಅವರಿಗೆ ಕೊರೊನಾ ಬರಲ್ಲ. ನಮಗ ಅಷ್ಟೆ ಕೊರೊನಾ ಬರತ್ತಾ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ

ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಸಿಗದೆ ಬ್ಲಾಕ್ ಪಂಗಸ್ ರೋಗಿಗಳ ಪರದಾಟ

ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದ ಹಾಲಿನ ವಾಹನ ಪಲ್ಟಿ; 1 ಸಾವಿರ ಲೀಟರ್ ಹಾಲು ರಸ್ತೆ ಪಾಲು

(Farmers are facing hardships in not selling tomatoes and cabbage at hassan)

Published On - 10:16 am, Tue, 25 May 21