ಗದಗ: ಬಾಟಲ್​ಗಳಲ್ಲಿ ದೋಣಿ ನಿರ್ಮಿಸಿ ಯಶಸ್ಸು ಕಂಡ ಸರ್ಕಾರಿ ಶಾಲೆ ವಿದ್ಯಾರ್ಥಿಗಳು

|

Updated on: Mar 20, 2021 | 3:36 PM

ಗದಗ ನಗರದ ಶ್ರೀರಾಮ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸಾಧನೆ ಎಲ್ಲರನ್ನು ದಂಗು ಬಡಿಸಿದೆ. ಮಕ್ಕಳು ಸುಡಗಾಡ ಸಿದ್ದರು. ಅಲೆಮಾರಿ ಜನಾಂಗದ ಕುಟುಂಬದ ಮಕ್ಕಳು. ಈ ಮಕ್ಕಳ ಮಾತೃಭಾಷೆ ತೆಲುಗು. ಇಂಥಹ ಮಕ್ಕಳ ಮನಸ್ಸಿನಲ್ಲಿ ಕನ್ನಡ ಅರಳಿಸಿದ ಕೀರ್ತಿ ಸರ್ಕಾರಿ ಶಾಲೆಯ ಶಿಕ್ಷಕರದ್ದು.

ಗದಗ: ಬಾಟಲ್​ಗಳಲ್ಲಿ ದೋಣಿ ನಿರ್ಮಿಸಿ ಯಶಸ್ಸು ಕಂಡ ಸರ್ಕಾರಿ ಶಾಲೆ ವಿದ್ಯಾರ್ಥಿಗಳು
ದೋಣಿಯಲ್ಲಿ ಸಾಗುತ್ತಿರುವ ವಿದ್ಯಾರ್ಥಿನಿಯರು
Follow us on

ಗದಗ: ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವ ಜನರೆ ಹೆಚ್ಚು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡಲ್ಲ. ಸೌಲಭ್ಯ ಇರಲ್ಲ ಎನ್ನುವ ಆರೋಪ ಸಾಮಾನ್ಯ. ಆದರೆ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮಕ್ಕಳ ಅದ್ಭುತ ಆವಿಷ್ಕಾರ ಖಾಸಗಿ ಶಾಲೆಗಳು ನಾಚಿಸುವಂತಿದೆ. ಮಕ್ಕಳ ಮಾತೃಭಾಷೆ ತೆಲಗು ಆದರೂ ಕನ್ನಡ ಶಾಲೆಯ ಮಕ್ಕಳ ಸಾಧನೆಗೆ ಅಲ್ಲಿನ ಶಿಕ್ಷರೇ ಫಿದಾ ಆಗಿದ್ದಾರೆ. ಸ್ಲಂ ಮಕ್ಕಳ ಒಂದು ಸಾಧನೆ ಎಲ್ಲರನ್ನೂ ಬೆರಗು ಮಾಡುವಂತಿದೆ.

ಗದಗ ನಗರದ ಶ್ರೀರಾಮ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸಾಧನೆ ಎಲ್ಲರನ್ನು ದಂಗು ಬಡಿಸಿದೆ. ಮಕ್ಕಳು ಸುಡಗಾಡ ಸಿದ್ದರು. ಅಲೆಮಾರಿ ಜನಾಂಗದ ಕುಟುಂಬದ ಮಕ್ಕಳು. ಈ ಮಕ್ಕಳ ಮಾತೃಭಾಷೆ ತೆಲುಗು. ಇಂಥಹ ಮಕ್ಕಳ ಮನಸ್ಸಿನಲ್ಲಿ ಕನ್ನಡ ಅರಳಿಸಿದ ಕೀರ್ತಿ ಸರ್ಕಾರಿ ಶಾಲೆಯ ಶಿಕ್ಷಕರದ್ದು. ಸುಡಗಾಡ ಸಿದ್ದರು, ಅಲೆಮಾರಿ ಜನಾಂಗದವರ ಬದುಕು ಗುಡಿಸಲಿನಲ್ಲಿ. ತಾವು ದುಡಿದು ಹೊಟ್ಟೆಗೆ ಹಾಕುವಾಗಲೇ ಬದುಕು ಸಾಕಾಗಿರುತ್ತದೆ. ಈ ನಡುವೆ ಮಕ್ಕಳಿಗೆ ಶಾಲೆ ಎನ್ನುವುದು ಮರಿಚಿಕೆ. ಇಂಥಹದರಲ್ಲಿ ಶ್ರೀರಾಮ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತುಂಬೆಲ್ಲಾ ಅಲೆಮಾರಿ ಜನಾಂಗದ ಮಕ್ಕಳೇ ಹೆಚ್ಚು. ಶಾಲೆಯ ಮಕ್ಕಳ ಮನದಲ್ಲಿ ಕನ್ನಡದ ದೀಪವನ್ನು ಶಿಕ್ಷಕರು ಹಚ್ಚಿದ್ದಾರೆ. ಒಳ್ಳೆಯ ಪ್ರತಿಭೆಯನ್ನಾಗಿ ಮಾಡಿದ್ದಾರೆ.

ಖಾಲಿ ಬಾಟಲ್​ನಲ್ಲಿ ದೋಣಿ
ಆರನೇ ತರಗತಿಯಲ್ಲಿ ಓದುವ ಸರೋಜಾ ಒಂದು ಭೀಷ್ಮ ಕೆರೆಯಲ್ಲಿ ಖಾಲಿ ಬಾಟಲ್ ತೇಲಾಡುವುದನ್ನು ನೋಡಿದ್ದಾಳೆ. ಆ ಬಾಟಲ್ ಮೇಲೆ ಇರುವೆಗಳು ಪ್ರಯಾಣ ಮಾಡಿದ್ದನ್ನು ನೋಡಿದ ಕೂಡಲೇ ಸರೋಜಾ ತಲೆಯಲ್ಲಿ ನಾವೂ ಈ ರೀತಿ ತೆಲುವ ದೋಣಿ ಮಾಡಿದರೆ ಆಗಬಹುದಾ ಅಂತ ವಿಚಾರ ಮಾಡಿದ್ದಾಳೆ. ಆಗ ಮಾರನೇ ದಿನ ಶಾಲೆಗೆ ಬಂದ ಸರೋಜಾ ತನ್ನಲ್ಲಿದ್ದ ಆಲೋಚನೆಗಳನ್ನು ವಿಜ್ಞಾನ ಶಿಕ್ಷಕರಾದ ಜಿ.ಬಿ ಹಾವನೂರ ಹಾಗೂ ಮುಖ್ಯೋಪಾಧ್ಯಾಯ ವಾಯ್ ಎಂ.ಕಟ್ಟಿ ಬಳಿ ಹೇಳಿಕೊಂಡಿದ್ದಾಳೆ. ಆಗ ವಿದ್ಯಾರ್ಥಿನಿ ಆಲೋಚನೆಗೆ ಮೆಚ್ಚಿದ ಶಿಕ್ಷಕರು ಹೇಗೆ ಮಾಡುವ ವಿಚಾರವಿದೆ ಅಂತ ಪ್ರಶ್ನೆ ಮಾಡಿದ್ದಾರೆ. ಆಗ ತನ್ನ ಆಲೋಚನೆಯನ್ನು ಶಿಕ್ಷಕರ ಮುಂದೆ ವಿವರವಾಗಿ ಹೇಳಿದ್ದಾಳೆ. ಆಗ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ಸುಮಾರ 1 ಲೀಟರ್​ನ 195 ಖಾಲಿ ಕುಡಿಯವ ನೀರಿನ ಬಾಟಲ್​ಗಳನ್ನು ಸಂಗ್ರಹ ಮಾಡಿದ್ದಾರೆ. ಬಿದರಿನ ಕಟ್ಟಿಗೆ ಬಳಸಿಕೊಂಡು ಉದ್ದ ಮೂರು ಫೀಟ್ ಅಗಲ ಮೂರು ಫೀಟ್ ಆಕಾರದಲ್ಲಿ ತೇಲುವ ದೋಣಿ ನಿರ್ಮಾಣ ಮಾಡಿದ್ದಾರೆ. ದೋಣಿ ಸುಮಾರು 90 ಭಾರ ಹೊತ್ತು ನೀರಿನಲ್ಲಿ ತೇಲುತ್ತದೆ. ವಿದ್ಯಾರ್ಥಿಗಳು ಪೂರ್ಣ ಮಾಡಿದ ಬಳಿಕ ಗದಗ ನಗರದ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಶಿಕ್ಷಕರು ಹಾಗೂ ಮಕ್ಕಳು ದೋಣಿಯಲ್ಲಿ ಕುಳಿತು ಪ್ರಯೋಗ ಮಾಡಿದ್ದು, ವಿದ್ಯಾರ್ಥಿಗಳ ಆವಿಷ್ಕಾರ ಯಶಸ್ಸು ಆಗಿದೆ.

ನೀರಿನಲ್ಲಿ ದೋಣಿಯನ್ನು ಬಿಡುತ್ತಿದ್ದಾರೆ

ದೋಣಿಯಲ್ಲಿ ಸಾಗುತ್ತಿದ್ದಾರೆ

ತೇಲುವ ದೋಣಿ ಮಾಡಲು ಎಷ್ಟು ಬಾಟಲ್​ಗಳು ಬಳಕೆ ಮಾಡಿದ್ದಾರೋ ಅದರ ಅರ್ಧದಷ್ಟು ಭಾರ ಹೊತ್ತುಕೊಂಡು ಸಾಗುತ್ತದೆ. ಮಕ್ಕಳ ಸಾಧನೆಗೆ ಇಡೀ ಶಿಕ್ಷಕರ ವೃದ್ಧ ಅಭಿನಂದನೆ ಸಲ್ಲಿಸಿದೆ. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರವಾಹದಲ್ಲಿ ಸಾಕಷ್ಟು ಅವಘಡಗಳು ನಡೆದಿವೆ. ಇಂಥಹ ಪ್ರದೇಶದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಜನರು ಯಾವುದೇ ಖರ್ಚು ಇಲ್ಲದೇ ವೇಸ್ಟ್ ಬಾಟಲ್​ಗಳಿಂದ ತೇಲವು ದೋಣಿ ಮಾಡಿಕೊಂಡರೆ ಅಪಾಯದಲ್ಲಿ ಸಹಾಯವಾಗುತ್ತದೆ ಎನ್ನುವ ಸಂದೇಶ ಸರ್ಕಾರಿ ಶಾಲೆಯ ಮಕ್ಕಳು ನೀಡಿದ್ದಾರೆ.

ಶಾಲೆಯಲ್ಲಿ ಪಾಠ ಮಾಡುತ್ತಿರುವ ಶಿಕ್ಷಕಿ

ಶ್ರೀರಾಮ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಇದನ್ನೂ ಓದಿ

Ripped Jeans;ತೀರತ್​ ಸಿಂಗ್ ರಾವತ್ ಅವರಿಗೊಂದು ಪತ್ರ: ಹೆಣ್ಣುಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಸಮಾನತೆಯ ಬಗ್ಗೆ ಯೋಚಿಸಬೇಕೆನ್ನಿಸುತ್ತಿಲ್ಲವೆ?

Yuvarathnaa Trailer: ಕೌಂಟರ್​ ಕೊಟ್ರೆ ಎನ್​ಕೌಂಟರ್​​; ಯುವರತ್ನ ಟ್ರೇಲರ್​ನಲ್ಲಿ ಮಿಂಚಿದ ಪುನೀತ್​ ರಾಜ್​ಕುಮಾರ್​