ನಕಲಿ ಚಿನ್ನ ನೀಡಿ ಅಸಲಿ ಚಿನ್ನ ಕದ್ದು ಚಾಲಾಕಿ ಕಳ್ಳಿಯರು ಎಸ್ಕೇಪ್​!

ಹಾಸನ: ಇತ್ತೀಚೆಗೆ ನಕಲಿ ಚಿನ್ನ ನೀಡಿ ಜನರನ್ನ ವಂಚಿಸುವವರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಸನ ನಗರದ ಎನ್.ಆರ್.ವೃತ್ತದಲ್ಲಿರುವ ಸುಮುಖ ಜ್ಯೂವೆಲರ್ಸ್​ನಲ್ಲಿ ನಕಲಿ‌ ಚಿನ್ನ ನೀಡಿ ಅಸಲಿ ಚಿನ್ನದ ಸರ ಲಪಟಾಯಿಸಿರುವ ಘಟನೆ ನಡೆದಿದೆ. ಚಿನ್ನ ಖರೀದಿಸಲೆಂದು ಚಿನ್ನದ ಅಂಗಡಿಗೆ ಇಬ್ಬರು ಮಹಿಳೆಯರು ಎಂಟ್ರಿ ಕೊಟ್ಟಿದ್ದಾರೆ. ಓರ್ವ ಮಹಿಳೆ ಚಿನ್ನ ಖರೀದಿಸುತ್ತಿದ್ರೆ, ಮತ್ತೋರ್ವ ಮಹಿಳೆ ಅಂಗಡಿಯಲ್ಲೇ ಕುಳಿತು ಎಲ್ಲವನ್ನೂ ಗಮನಿಸುತ್ತಿರುತ್ತಾಳೆ. 9.50 ಗ್ರಾಂನ ಚಿನ್ನದ ಸರ ಪಡೆದು, ಚಿನ್ನ ಲೇಪಿತ ನಕಲಿ ಆಭರಣ ನೀಡಿ ಚಾಲಾಕಿ ಮಹಿಳೆಯರು […]

ನಕಲಿ ಚಿನ್ನ ನೀಡಿ ಅಸಲಿ ಚಿನ್ನ ಕದ್ದು ಚಾಲಾಕಿ ಕಳ್ಳಿಯರು ಎಸ್ಕೇಪ್​!
ಸಾಧು ಶ್ರೀನಾಥ್​

Updated on: Feb 24, 2020 | 1:51 PM

ಹಾಸನ: ಇತ್ತೀಚೆಗೆ ನಕಲಿ ಚಿನ್ನ ನೀಡಿ ಜನರನ್ನ ವಂಚಿಸುವವರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಸನ ನಗರದ ಎನ್.ಆರ್.ವೃತ್ತದಲ್ಲಿರುವ ಸುಮುಖ ಜ್ಯೂವೆಲರ್ಸ್​ನಲ್ಲಿ ನಕಲಿ‌ ಚಿನ್ನ ನೀಡಿ ಅಸಲಿ ಚಿನ್ನದ ಸರ ಲಪಟಾಯಿಸಿರುವ ಘಟನೆ ನಡೆದಿದೆ.

ಚಿನ್ನ ಖರೀದಿಸಲೆಂದು ಚಿನ್ನದ ಅಂಗಡಿಗೆ ಇಬ್ಬರು ಮಹಿಳೆಯರು ಎಂಟ್ರಿ ಕೊಟ್ಟಿದ್ದಾರೆ. ಓರ್ವ ಮಹಿಳೆ ಚಿನ್ನ ಖರೀದಿಸುತ್ತಿದ್ರೆ, ಮತ್ತೋರ್ವ ಮಹಿಳೆ ಅಂಗಡಿಯಲ್ಲೇ ಕುಳಿತು ಎಲ್ಲವನ್ನೂ ಗಮನಿಸುತ್ತಿರುತ್ತಾಳೆ. 9.50 ಗ್ರಾಂನ ಚಿನ್ನದ ಸರ ಪಡೆದು, ಚಿನ್ನ ಲೇಪಿತ ನಕಲಿ ಆಭರಣ ನೀಡಿ ಚಾಲಾಕಿ ಮಹಿಳೆಯರು ಎಸ್ಕೇಪ್ ಆಗಿದ್ದಾರೆ.

ಅಂಗಡಿ ಸಿಬ್ಬಂದಿಗೆ ನಕಲಿ ಚಿನ್ನದ ಸರ ಮತ್ತು 8 ಸಾವಿರ ಹಣ ನೀಡಿ, 43 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರ ಪಡೆದು ಚಾಲಾಕಿ ಕಳ್ಳಿಯರು ಪರಾರಿಯಾಗಿದ್ದಾರೆ. ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us