ವಿಮಾನ ನಿಲ್ದಾಣದಲ್ಲಿ ನಮ್ಮ ಪೊಲೀಸರಿಗಾಗಿ ಐಷಾರಾಮಿ ಕ್ಯಾಬಿನ್ಸ್.. ಕಿಚನ್, ಟಾಯ್ಲೆಟ್, ರೆಸ್ಟ್ ರೂಂ ಸೌಲಭ್ಯ ಲಭ್ಯ

| Updated By: ಸಾಧು ಶ್ರೀನಾಥ್​

Updated on: Dec 09, 2020 | 10:33 AM

ದೇವನಹಳ್ಳಿ: ಅತಿ ಹೆಚ್ಚು ಪ್ರಯಾಣಿಕರ ಆಗಮನ ಮತ್ತು ನಿರ್ಗಮನದ ಜೊತೆಗೆ ಹಚ್ಚ ಹಸಿರಿನ ಪರಿಸರದಿಂದ ಪ್ರಸಿದ್ಧಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಮತ್ತೊಂದು ಸೇವೆ ನೀಡುವುದರ ಮೂಲಕ ಸುದ್ದಿಯಲ್ಲಿದೆ. ಬೆಂಗಳೂರಿನಲ್ಲಿ ಹಗಲು-ರಾತ್ರಿ ಗಾಳಿ, ಮಳೆ, ಬಿಸಿಲು ಅನ್ನದೆ ಸಾರ್ವಜನಿಕರ ಸೇವೆಗಾಗಿ ದಿನದ 24 ಗಂಟೆಯೂ ದುಡಿಯುವ ಪೊಲೀಸರ ಅನುಕೂಲಕ್ಕಾಗಿ ಹೈಟೆಕ್ ಕ್ಯಾಬಿನ್​ಗಳನ್ನ ನಿರ್ಮಾಣ ಮಾಡಿಕೊಟ್ಟಿದೆ. ಹೌದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಉಪಕ್ರಮದ ಅಡಿಯಲ್ಲಿ ಬೆಂಗಳೂರು ಸಿಟಿ ಪೊಲೀಸರ ಅನುಕೂಲಕ್ಕಾಗಿ […]

ವಿಮಾನ ನಿಲ್ದಾಣದಲ್ಲಿ ನಮ್ಮ ಪೊಲೀಸರಿಗಾಗಿ ಐಷಾರಾಮಿ ಕ್ಯಾಬಿನ್ಸ್.. ಕಿಚನ್, ಟಾಯ್ಲೆಟ್, ರೆಸ್ಟ್ ರೂಂ ಸೌಲಭ್ಯ ಲಭ್ಯ
ಪೊಲೀಸರಿಗಾಗಿ ಸಿದ್ಧವಾಯ್ತು ಹೈಟೆಕ್ ಕ್ಯಾಬಿನ್ಸ್
Follow us on

ದೇವನಹಳ್ಳಿ: ಅತಿ ಹೆಚ್ಚು ಪ್ರಯಾಣಿಕರ ಆಗಮನ ಮತ್ತು ನಿರ್ಗಮನದ ಜೊತೆಗೆ ಹಚ್ಚ ಹಸಿರಿನ ಪರಿಸರದಿಂದ ಪ್ರಸಿದ್ಧಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಮತ್ತೊಂದು ಸೇವೆ ನೀಡುವುದರ ಮೂಲಕ ಸುದ್ದಿಯಲ್ಲಿದೆ.

ಬೆಂಗಳೂರಿನಲ್ಲಿ ಹಗಲು-ರಾತ್ರಿ ಗಾಳಿ, ಮಳೆ, ಬಿಸಿಲು ಅನ್ನದೆ ಸಾರ್ವಜನಿಕರ ಸೇವೆಗಾಗಿ ದಿನದ 24 ಗಂಟೆಯೂ ದುಡಿಯುವ ಪೊಲೀಸರ ಅನುಕೂಲಕ್ಕಾಗಿ ಹೈಟೆಕ್ ಕ್ಯಾಬಿನ್​ಗಳನ್ನ ನಿರ್ಮಾಣ ಮಾಡಿಕೊಟ್ಟಿದೆ. ಹೌದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಉಪಕ್ರಮದ ಅಡಿಯಲ್ಲಿ ಬೆಂಗಳೂರು ಸಿಟಿ ಪೊಲೀಸರ ಅನುಕೂಲಕ್ಕಾಗಿ 7 ಹೈಟೆಕ್ ಕ್ಯಾಬಿನ್​ಗಳನ್ನ ನಿರ್ಮಾಣ ಮಾಡಿಸಿದ್ದು ಈಗಾಗಲೇ ಬೆಂಗಳೂರು ಸಿಟಿ ಪೊಲೀಸರಿಗೆ 7 ಕ್ಯಾಬಿನ್​ಗಳನ್ನ ಹಸ್ತಾಂತರ ಮಾಡಿದ್ದಾರೆ.

ನೆರವು ಶಿರ್ಷಿಕೆಯಡಿಯಲ್ಲಿ ..
ಜತೆಗೆ ಪ್ರತಿಯೊಂದು ಕ್ಯಾಬಿನ್​ನಲ್ಲೂ ಎಲ್ಇಡಿ ವಿದ್ಯುತ್ ಬಲ್ಬ್, ಸೀಲಿಂಗ್ ಪ್ಯಾನ್ಸ್, ಎಲೆಕ್ಟಿಕ್ ಸಾಕೆಟ್ ಏರ್ ಕಂಡೀಷನ್, ಅಡುಗೆ ಮನೆ ಶೌಚಾಲಯದ ಜೊತೆಗೆ ವಿಶ್ರಾಂತಿ ಕೊಠಡಿ ಮತ್ತು ಕ್ಯಾಬಿನ್​ನ ಮೇಲ್ಭಾಗದಲ್ಲಿ 300 ಲೀಟರ್ ನೀರಿನ ಸಾಮರ್ಥ್ಯವುಳ್ಳ ಟ್ಯಾಂಕ್ ಅನ್ನು ಅಳವಡಿಸಿದ್ದಾರೆ.

ಈಗಾಗಲೇ ಈ ಮಾದರಿ ಹೈಟೆಕ್ ಪೊಲೀಸ್ ಕ್ಯಾಬಿನ್​ಗಳನ್ನ ನೆರವು ಶಿರ್ಷಿಕೆಯಡಿಯಲ್ಲಿ ಸಿಲಿಕಾನ್ ಸಿಟಿಯ ಟೌನ್ ಹಾಲ್ ಸೇರಿದಂತೆ 7 ಕಡೆ ಸ್ಥಾಪನೆ ಮಾಡಿದ್ದು, ದಿನಪೂರ್ತಿ ಕೆಲಸ ಮಾಡಿ ದಣಿಯುವ ಪೊಲೀಸರು ಮನೆಯ ರೀತಿ ಕ್ಯಾಬಿನ್​ನಲ್ಲಿ ವಿಶ್ರಾಂತಿ ಪಡೆಯಲು ಅನುಕೂಲವಾಗಲಿದೆ.

KIABಯಲ್ಲಿ ಟೇಕಾಫ್ ವೇಳೆ ತಾಂತ್ರಿಕ ದೋಷ: 1 ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲಿ ಹಾರಾಡಿದ ವಿಮಾನ

Published On - 10:29 am, Wed, 9 December 20