ಬೆಂಗಳೂರು: ಮೇ 10ರಿಂದ ಮೇ 24ರವರೆಗೆ ಜಾರಿಯಾಗುವ ಕರ್ನಾಟಕ ಲಾಕ್ಡೌನ್ನಲ್ಲಿ ಈಗಾಗಲೇ ನಿಗದಿಯಾಗಿರುವ ಮದುವೆಗಳನ್ನು ನಡೆಸಬಹುದು. ಆದರೆ ಮದುವೆ ಸಮಾರಂಭಗಳಲ್ಲಿ 50 ಜನರಿಗೆ ಮಾತ್ರ ಭಾಗವಹಿಸಬೇಕು ಎಂದು ರಾಜ್ಯ ಸರ್ಕಾರ ಪ್ರಕಟಿಸಿರುವ ನೂತನ ನಿಯಮಾವಳಿಗಳು ತಿಳಿಸಿವೆ. ಇನ್ನು ಈ ಅವಧಿಯ ಲಾಕ್ಡೌನ್ನಲ್ಲಿ ಶವಸಂಸ್ಕಾರ ನಡೆಸುವಾಗ ಕೇವಲ ಐವರಿಗೆ ಮಾತ್ರ ಅವಕಾಶವಿದೆ. ಈ ಹಿಂದೆ ವಿಧಿಸಿದ್ದ ಇದೇ ನಿಯವಿತ್ತು. ಹಿಂದಿನ ಕಠಿಣ ನಿಯಮಗಳಲ್ಲೂ ಪ್ರಕಾರವೂ ಮದುವೆಯಲ್ಲಿ ಕೇವಲ ಐವತ್ತು ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಶವಸಂಸ್ಕಾರದಲ್ಲಿ ಐವರಿಗಷ್ಟೇ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಈ ಅವಧಿಯಲ್ಲಿ ಕೊವಿಡ್ ಲಸಿಕೆ ಹಾಕಿಸಿಕೊಳ್ಳಲು ಹೋಗುವುದಕ್ಕೆ ಅವಕಾಶವಿದೆ. ಲಾಕ್‌ಡೌನ್ ಅವಧಿಯಲ್ಲೂ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಯಾವುದೇ ನಿರ್ಬಂಧ ಇಲ್ಲ.
ಈ ಅವಧಿಯಲ್ಲಿ ಒಬ್ಬನೇ ವ್ಯಕ್ತಿ ರಸ್ತೆಯಲ್ಲಿ ಓಡಾಡೋಕೆ ಬಿಡಲ್ಲ. ಪೊಲೀಸರಿಗೆ ಏನು ಹೇಳಬೇಕೋ ಹೇಳಿದ್ದೀನಿ. ಜನರು ಸಹಕಾರ ನೀಡದಿದ್ದರೆ ಇನ್ನೂ ಏನೆಲ್ಲಾ ಮಾಡಬೇಕು, ಅದನ್ನು ಮಾಡೋಕೆ ನಾನು ಸಿದ್ಧನಿದ್ದೇನೆ. ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾದ್ದು ಜನರ ಕರ್ತವ್ಯ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಲ್ಲರೂ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಮೆಟ್ರೋ ರೈಲಿಗೆ ಅವಕಾಶ ಇಲ್ಲ. ಆದರೆ ವಿಮಾನ ಮತ್ತು ರೈಲುಗಳಲ್ಲಿ ಸಂಚಾರ ನಡೆಸಲು ಅವಕಾಶವಿದೆ. ಶಾಲೆ ಕಾಲೇಜು, ಶಿಕ್ಷಣ ಸಂಸ್ಥೆಗಳು ಸ್ಥಗಿತಗೊಳ್ಳಲಿವೆ. ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಯೋಗ ಕೇಂದ್ರ, ಸ್ಪಾ, ಮನರಂಜನಾ ಕೇಂದ್ರಗಳು, ಸಾಮಾಜಿಕ, ಧಾರ್ಮಿಕ, ಕ್ರೀಡಾ, ಮನರಂಜನಾ, ಸಾಂಸ್ಕೃತಿಕ, ರಾಜಕೀಯ ಚಟುವಟಿಕೆಗಳಿಗೆ ಸಂಪೂರ್ಣವಾಗಿ ನಿರ್ಬಂಧ ವಿಧಿಸಲಾಗಿದೆ. ಮಂದಿರ, ಮಸೀದಿ, ಚರ್ಚ್ಗಳಿಗೆ ಜನರ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಮಂದಿರ, ಮಸೀದಿ, ಚರ್ಚ್ಗಳಲ್ಲಿ ಪೂಜೆ ಪುನಸ್ಕಾರ ಇರಲಿದೆ.
ಗಾರ್ಮೆಂಟ್ಸ್ ಹೊರತುಪಡಿಸಿ ಎಲ್ಲಾ ಕೈಗಾರಿಕೆಗಳಿಗೆ ಅವಕಾಶವಿದೆ. ಕೈಗಾರಿಕಾ ಸಿಬ್ಬಂದಿ ಕಡ್ಡಾಯವಾಗಿ ಐಡಿ ತೋರಿಸಬೇಕು. ಅಂತಾರಾಜ್ಯ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧವಿದೆ. ಕೃಷಿ ಸಂಬಂಧಿಸಿದ ಚಟುವಟಿಕೆಗೆ ಯಾವುದೇ ನಿರ್ಬಂಧವಿಲ್ಲ.
ಇದನ್ನೂ ಓದಿ: Explainer: ಮಕ್ಕಳಿಗೆ ಸಮಸ್ಯೆ ತಂದೊಡ್ಡುವ ಕೊರೊನಾ 3ನೇ ಅಲೆ ಎದುರಿಸಲು ಸಿದ್ಧತೆ ಹೇಗಿರಬೇಕು? ತಜ್ಞರ ಅಭಿಪ್ರಾಯ ಇಲ್ಲಿದೆ
(Is marriage are arranged in Karnataka Lockdown till May 24th here is the detail)