ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮೊದಲ ಹಂತದಲ್ಲಿ ಎಲೆಕ್ಟ್ರಿಕ್ ಬಸ್ (E-Bus) ಗಳನ್ನು ಬೆಂಗಳೂರು-ಮೈಸೂರು ಮಧ್ಯೆ ಪ್ರಾರಂಭಿಸಿತ್ತು. ಮುಂಬರುವ ದಿನಗಳಲ್ಲಿ ಈ ಎಲೆಕ್ಟ್ರಿಕ್ ಬಸ್‌ಗಳು ವಿರಾಜಪೇಟ, ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ 5 ನಗರಗಳಿಗೆ ಕೂಡ ಸಂಪರ್ಕ ಕಲ್ಪಿಸಲಿವೆ. ಕೇಂದ್ರ ಸರ್ಕಾರದ ಫೇಮ್-2 (FAME- Faster Adoption and Manufacturing of Electric Vehicles) ಯೋಜನೆಯಡಿ, ಕೆಎಸ್‌ಆರ್‌ಟಿಸಿಯ 50 ಎಸಿ ಇ-ಬಸ್ಗಳನ್ನು ಖಾಸಗಿ ಸಂಸ್ಥೆಗಳಿಗೆ ಬಾಡಿಗೆಗೆ ನೀಡಿದೆ. ಈ ಹೊಸ ಬಸ್‌ಗಳಿಗೆ ‘EV ಪವರ್ ಪ್ಲಸ್’ ಎಂದು ನಾಮಕರಣ ಮಾಡಲಾಗಿದೆ.
ಬೆಂಗಳೂರು-ಮೈಸೂರು ನಡುವೆ ಪರಿಚಯಿಸಲಾದ ಸೇವೆಗೆ ಉತ್ತಮ ಪ್ರೋತ್ಸಾಹ ಸಿಕ್ಕಿದೆ. ಹೊಸ ಮಾರ್ಗಗಳಲ್ಲಿಯೂ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಕೆಎಸ್‌ಆರ್‌ಟಿಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ವೇತನ ಶೇಕಡಾ 15ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರದಿಂದ ಆದೇಶ
2023ರ ಜನವರಿ 16 ರಿಂದ ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್‌ಗಳು ಬೆಂಗಳೂರು-ಮೈಸೂರು ಸಂಚಾರ ಪ್ರಾರಂಭಿಸಿದ್ದವು. ಇ-ಬಸ್‌ಗಳು ಆರಾಮದಾಯಕವಾದ ಆಸನ, ದೂರದರ್ಶನ, ಪ್ರೀಮಿಯಂ ಸೀಟ್‌ಗಳು, ಪ್ರತಿಯೊಂದು ಸೀಟ್ಗು ಚಾರ್ಜಿಂಗ್ ಸಾಕೆಟ್, ಎಸಿ ವೆಂಟ್‌ಗಳು, ಓದುವ ದೀಪಗಳು ಇನ್ನೂ ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ.
ಎಲೆಕ್ಟ್ರಿಕ್ ಬಸ್‌ಗಳು 2022 ಡಿಸೆಂಬರ್ 31 ರಂದು ರಾಜ್ಯಕ್ಕೆ ಬಂದಿದ್ದು, ಈಗಾಗಲೆ ಟ್ರಯಲ್ ರೈಡ್ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಮೊದಲ ಇ-ಬಸ್ ಜನವರಿ 16ರಂದು ಬೆಂಗಳೂರಿನಿಂದ ಹೊರಟು ಮೈಸೂರು ತಲುಪಿತ್ತು. ಬೆಂಗಳೂರಿಂದ ಮೈಸೂರಿಗೆ ಹೊರಡುವ ಎಲೆಕ್ಟ್ರಿಕ್ ಬಸ್ ತಡೆರಹಿತವಾಗಿದ್ದು, ಬಸ್ಗೆ ಪ್ರಿಮಿಯಂ ಸರ್ವಿಸ್ ಪಾಸ್ ಹೊಂದಿದೆ.
ಎಲೆಕ್ಟ್ರಿಕ್ ಬಸ್ಗಳನ್ನು ಒಂದು ಸಾರಿ ಚಾರ್ಜ್ ಮಾಡಿದರೆ 300ಕೀಮಿ ಸಂಚರಿಸುತ್ತವೆ. ಈಗಾಗಲೆ ಬಸ್ಗಳಿಗಾಗಿ ಮೈಸೂರು ಮತ್ತು ಬೆಂಗಳೂರಲ್ಲಿ ಚಾರ್ಜಿಂಗ್ ಪಾಯಿಂಟ್ಗಳನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಮಡಿಕೇರಿ, ವಿರಾಜಪೇಟ, ದಾವಣಗೇರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಬಸ್ ನಿಲ್ದಾಣಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಇರಿಸಲಾಗಿದೆ.
ಎಲೆಕ್ಟ್ರಿಕ್ ಬಸ್ಗಳ ಕಾರ್ಯನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದ್ದು, ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (GCC) ನಿರ್ವಹಿಸುತ್ತಿದೆ. ಈ ನಿರ್ವಹಣೆಗೆ ಕೆಎಸ್ಆರ್ಟಿಸಿ ಕೂಡ ಹಣ ನೀಡಲು ಮುಂದಾಗಿದ್ದು, ಕಾರ್ಯಾಚರಣೆಯ ವೆಚ್ಚವಾಗಿ ಕಿಮೀಗೆ 55 ರೂಪಾಯಿಗಳನ್ನು ಪಾವತಿಸುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:05 am, Mon, 20 March 23